ದುಬೈ[ಡಿ.18]: ಐಸಿಸಿ ವರ್ಷದ ಮಹಿಳಾ ಏಕದಿನ ಹಾಗೂ ಟಿ20 ತಂಡಗಳು ಪ್ರಕಟಗೊಂಡಿದ್ದು, ಭಾರತದ ತಾರಾ ಆಟಗಾರ್ತಿ ಸ್ಮೃತಿ ಮಂಧನಾ ಎರಡೂ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. 

ಸರಣಿ ಉಳಿಸಿಕೊಳ್ಳುವ ಒತ್ತಡದಲ್ಲಿ ಟೀಂ ಇಂಡಿಯಾ

ಏಕದಿನ ತಂಡದಲ್ಲಿ ಸ್ಮೃತಿ ಜತೆ ಜೂಲನ್‌ ಗೋಸ್ವಾಮಿ, ಪೂನಮ್‌ ಯಾದವ್‌ ಹಾಗೂ ಶಿಖಾ ಪಾಂಡೆ ಸಹ ಸ್ಥಾನ ಪಡೆದಿದ್ದಾರೆ. ಟಿ20 ತಂಡದಲ್ಲಿ ಸ್ಮೃತಿ, ದೀಪ್ತಿ ಶರ್ಮಾ ಹಾಗೂ ರಾಧಾ ಯಾದವ್‌ ಸ್ಥಾನ ಗಳಿಸಿದ್ದಾರೆ. ಆಸ್ಪ್ರೇಲಿಯಾದ ಎಲೈಸಿ ಪೆರ್ರಿ ವರ್ಷದ ಏಕದಿನ ಕ್ರಿಕೆಟರ್‌ ಪ್ರಶಸ್ತಿ ಪಡೆದರೆ, ಅಲಿಸಾ ಹೀಲಿ ವರ್ಷದ ಟಿ20 ಕ್ರಿಕೆಟರ್‌ ಗೌರವಕ್ಕೆ ಪಾತ್ರರಾಗಿದ್ದಾರೆ.

ಏಕದಿನ ತಂಡ ಹೀಗಿದೆ:

ಮೆಗ್ ಲ್ಯಾನಿಂಗ್[ನಾಯಕಿ], ಅಲಿಸಾ ಹೀಲಿ, ಸ್ಮೃತಿ ಮಂಧನಾ, ಟ್ಯಾಮಿ ಬೀಮೌಟ್, ಸ್ಟೈಫನಿ ಟೇಲರ್, ಎಲೈಸಿ ಪೆರ್ರಿ, ಜೆಸ್ ಜಾನ್ಸನ್, ಶಿಖಾ ಪಾಂಡೆ, ಜೂಲನ್ ಗೋಸ್ವಾಮಿ, ಮಿಘನ್ ಸ್ಯೂಟ್, ಪೂನಂ ಯಾದವ್.

ಟಿ20 ತಂಡ:

ಮೆಗ್ ಲ್ಯಾನಿಂಗ್[ನಾಯಕಿ], ಅಲಿಸಾ ಹೀಲಿ, ಡೇನಿಯಲ್ ವ್ಯಾಟ್, ಸ್ಮೃತಿ ಮಂಧನಾ, ಲಿಜೆಲ್ ಲೀ, ಎಲೈಸಿ ಪೆರ್ರಿ, ದೀಪ್ತಿ ಶರ್ಮಾ, ನಿದಾ ಧಾರ್, ಮಿಘನ್ ಸ್ಯೂಟ್, ಶಬ್’ನಿಮ್ ಇಸ್ಮಾಯಿಲ್, ರಾಧಾ ಯಾದವ್.