ಅಹಮ್ಮದಾಬಾದ್(ಫೆ.24): ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಮೊಟೆರಾ ಕ್ರಿಕೆಟ್ ಕ್ರೀಡಾಂಗಣವನ್ನು ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್  ಉದ್ಘಾಟಿಸಿದ್ದಾರೆ. ಬಳಿಕ ಆಯೋಜಿಸಿದ್ದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಮಾಡಿದ ಟ್ರಂಪ್ ಭಾಷಣ ಎಲ್ಲೆಡೆ ವೈರಲ್ ಆಗಿದೆ. 

 

ಇದನ್ನೂ ಓದಿ: ಸಚಿನ್ ತೆಂಡುಲ್ಕರ್ ಸಾಧನೆಗೆ 10 ವರ್ಷ; ಹಾಡಿ ಹೊಗಳಿದ ಅಮೆರಿಕ ಅಧ್ಯಕ್ಷ!.

ಭಾಷಣದ ವೇಳೆ ಟ್ರಂಪ್ ಭಾರತೀಯರು ಬಾಲಿವುಡ್ ಸಿನಿಮಾ ಎಂಜಾಯ್ ಮಾಡುತ್ತಾರೆ, ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿಗೆ ಚಿಯರ್ ಅಪ್ ಮಾಡುತ್ತಾರೆ ಎಂದಿದ್ದರು. ಸಚಿನ್ ತೆಂಡುಲ್ಕರ್ ಹೆಸರು ಉಚ್ಚರಿಸಲು ಟ್ರಂಪ್ ಸ್ವಲ್ಪ ಕಷ್ಟಪಟ್ಟರು. ಟ್ರಂಪ್ ಭಾಷಣದ ಬೆನ್ನಲ್ಲೇ  ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಟ್ರೋಲ್ ಮಾಡಿದೆ.

 

ಇದನ್ನೂ ಓದಿ: ಮಹಿಳಾ ಟಿ20 ವಿಶ್ವಕಪ್: ಬಾಂಗ್ಲಾ ವಿರುದ್ಧ ಭಾರತಕ್ಕೆ ರೋಚಕ ಗೆಲುವು!.

ಐಸಿಸಿ ಸಣ್ಣ ವಿಡಿಯೋವನ್ನು ಪೋಸ್ಟ್ ಮಾಡಿದೆ.  ಸಚಿನ್ ತೆಂಡುಲ್ಕರ್ ಹೆಸರನ್ನು ಟ್ರಂಪ್ ಉಲ್ಲೇಖ ಮಾಡಿದ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಎಡಿಟ್ ಮಾಡುವ ವಿಡಿಯೋ ಪೋಸ್ಟ್ ಮಾಡಿದೆ. ಬಳಿಕ ಸಚ್, ಸಚ್, ಸೊಚ್, ಸೋಚ್ ಎಂದು ಬರೆದಿದೆ. ಮೂಲಕ  ಟ್ರಂಪ್ ಹೇಳಿದ ಶೈಲಿಯನ್ನೇ ಅನುಕರಣೆ ಮಾಡಿದೆ.