ಪರ್ತ್(ಫೆ.24):  ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು. ರೋಚಕ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಮಣಿಸಿದ ಭಾರತ ಮಹಿಳಾ ತಂಡ ಟೂರ್ನಿಯಲ್ಲಿ ಸತತ 2ನೇ ಗೆಲುವಿನ ಸಿಹಿ ಕಂಡಿದೆ.

 

ಬಾಂಗ್ಲಾದೇಶಕ್ಕೆ 143 ರನ್ ಟಾರ್ಗೆಟ್ ನೀಡಿದ್ದ ಭಾರತ, ಬೌಲಿಂಗ್‌ನಲ್ಲಿ ಅದ್ಭುತ್ ಪ್ರದರ್ಶನ ನೀಡಿತು. ಆರಂಭದಲ್ಲಿ ಬಾಂಗ್ಲಾದೇಶ ಅಬ್ಬರಿಸುವ ಸೂಚನೆ ನೀಡಿತು. ಆದರೆ ಅಷ್ಟೇ ವೇಗವಾಗಿ ಭಾರತ ಮಹಿಳಾ ತಂಡ ಕಮ್‌ಬ್ಯಾಕ್ ಮಾಡಿತು. 

ಮರ್ಶಿದಾ ಕತುನ್ ಹಾಗೂ ನಿಗರ್ ಸುಲ್ತಾನ 30 ಹಾಗೂ 35 ರನ್ ಕಾಣಿಕ ನೀಡೋ ಮೂಲಕ ಬಾಂಗ್ಲಾ ಗೆಲುವಿನ ಆಸೆಗೆ ಮತ್ತಷ್ಟು ನೀರೆರೆದಿದ್ದರು. ಪೂನಂ ಯಾದವ್, ಅರುಂಧತಿ ರೆಡ್ಡಿ ಹಾಗೂ ಶಿಖಾ ಪಾಂಡೆ ಮಿಂಚಿನ ದಾಳಿಗೆ ಬಾಂಗ್ಲಾ ಕುಸಿತ ಕಂಡಿತು. 

ಬಾಂಗ್ಲಾದೇಶ ನಿಗಧಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 124 ರನ್ ಸಿಡಿಸಿತು. ಈ ಮೂಲಕ ಭಾರತ 18 ರನ್ ರೋಚಕ ಗೆಲುವು ಸಾಧಿಸಿತು.