ದುಬೈ(ಜ.25): ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಶುಕ್ರವಾರ ಬಿಡುಗಡೆಯಾದ ಐಸಿಸಿ ನೂತನ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಇನ್ನಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಟೀಂ ಇಂಡಿಯಾದ ತಲಾ ಮೂವರು ಸ್ಥಾನ ಪಡೆದಿದ್ದಾರೆ.

ವಿರಾಟ್ ಕೊಹ್ಲಿ 928 ರೇಟಿಂಗ್‌ ಅಂಕ ಹೊಂದಿದ್ದು, 2ನೇ ಸ್ಥಾನದಲ್ಲಿರುವ ಆಸ್ಪ್ರೇಲಿಯಾ ಸ್ಟೀವ್‌ ಸ್ಮಿತ್‌ ಜತೆ 17 ಅಂಕ ಮುಂದಿದ್ದಾರೆ. ಭಾರತದ ಉಪನಾಯಕ ಅಜಿಂಕ್ಯ ರಹಾನೆ ಒಂದು ಸ್ಥಾನ ಏರಿಕೆ ಕಂಡಿದ್ದು, 8ನೇ ಸ್ಥಾನ ಪಡೆದಿದ್ದಾರೆ. ಚೇತೇಶ್ವರ್‌ ಪೂಜಾರ 6ನೇ ಸ್ಥಾನದಲ್ಲಿದ್ದಾರೆ. 

ಐಸಿಸಿ ಟಿ20 ಶ್ರೇಯಾಂಕ: 6ನೇ ಸ್ಥಾನ ಉಳಿಸಿಕೊಂಡ ರಾಹುಲ್‌ !

ಇನ್ನುಳಿದಂತೆ ಶ್ರೀಲಂಕಾದ ಮಾಜಿ ನಾಯಕ ಏಂಜಲೋ ಮ್ಯಾಥ್ಯೂಸ್ ಜಿಂಬಾಬ್ವೆ ವಿರುದ್ಧ ಅಜೇಯ ದ್ವಿಶತಕ ಸಿಡಿಸಿದ ಬೆನ್ನಲ್ಲೇ ಎಂಟು ಸ್ಥಾನ ಮೇಲೇರಿ ಹದಿನಾರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 

ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ಬಳಿಕ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಆಸೀಸ್ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಸ್ಥಾನ ಪಡೆದಿದ್ದಾರೆ.

2020ರ ಮೊದಲ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್ ಪ್ರಕಟ

ಬೌಲರ್‌ಗಳ ಪಟ್ಟಿಯಲ್ಲಿ ಬುಮ್ರಾ 6ನೇ ಸ್ಥಾನದಲ್ಲಿದ್ದು, ಅಶ್ವಿನ್‌ 8ನೇ ಹಾಗೂ ಶಮಿ 10ನೇ ಸ್ಥಾನ ಗಳಿಸಿದ್ದಾರೆ. ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಜಡೇಜಾ 3ನೇ ಸ್ಥಾನ ಪಡೆದಿದ್ದಾರೆ. ಬೌಲರ್‌ಗಳ ನಂ.1 ಪಟ್ಟಿಯಲ್ಲಿ ಪ್ಯಾಟ್ ಕಮಿನ್ಸ್ ಭದ್ರವಾಗಿದ್ದಾರೆ. ಆ ಬಳಿಕ ನ್ಯೂಜಿಲೆಂಡ್ ವೇಗಿ ನೀಲ್ ವ್ಯಾಗ್ನರ್, ಜೇಸನ್ ಹೋಲ್ಡರ್, ಕಗಿಸೋ ರಬಾಡ ಹಾಗೂ ಮಿಚೆಲ್ ಸ್ಟಾರ್ಕ್ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಟೀಂ ಇಂಡಿಯಾ ಫೆಬ್ರವರಿ 21ರಂದು ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ. ಎರಡು ಪಂದ್ಯಗಳ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ವಿರಾಟ್ ಪಡೆ ಹೊಸ ವರ್ಷದ ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ.