Asianet Suvarna News Asianet Suvarna News

ICC Test Rankings‌: ಆಸ್ಟ್ರೇಲಿಯಾಗೆ ಜಾಕ್‌ಪಾಟ್‌, 3ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ..!

* ಐಸಿಸಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ

* ಆ್ಯಷಸ್‌ ಟೆಸ್ಟ್ ಸರಣಿ ಗೆದ್ದ ಆಸ್ಟ್ರೇಲಿಯಾ ತಂಡ ನಂ.1 ಸ್ಥಾನಕ್ಕೆ ಲಗ್ಗೆ

*  2ನೇ ಸ್ಥಾನ ಉಳಿಸಿಕೊಂಡ ನ್ಯೂಜಿಲೆಂಡ್ ಕ್ರಿಕೆಟ್ ತಂಡ

ICC Test rankings Australia Jumps to No 1 Spot Team India slip down to third kvn
Author
Bengaluru, First Published Jan 21, 2022, 1:06 PM IST

ದುಬೈ(ಜ.21): ಇಂಗ್ಲೆಂಡ್‌ ವಿರುದ್ಧದ ಆ್ಯಷಸ್‌ ಸರಣಿಯನ್ನು (Ashes Test Series) 4-0ಯಲ್ಲಿ ಗೆದ್ದ ಆಸ್ಪ್ರೇಲಿಯಾ, ಐಸಿಸಿ ಟೆಸ್ಟ್‌ ತಂಡಗಳ ರ‍್ಯಾಂಕಿಂಗ್‌ (ICC Test Team Rankings) ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದೆ. ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ 1-2ರ ಸೋಲು ಅನುಭವಿಸಿದ ಭಾರತ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ ನ್ಯೂಜಿಲೆಂಡ್‌, ಬಾಂಗ್ಲಾದೇಶ ವಿರುದ್ಧ ಒಂದು ಟೆಸ್ಟ್‌ ಸೋತರೂ 2ನೇ ಸ್ಥಾನ ಉಳಿಸಿಕೊಂಡಿದೆ.

ತವರಿನಲ್ಲಿ ನಡೆದ ಆ್ಯಷಸ್‌ ಟೆಸ್ಟ್ ಸರಣಿಯಲ್ಲಿ ಪ್ಯಾಟ್ ಕಮಿನ್ಸ್ (Pat Cummins) ನೇತೃತ್ವದ ಆಸ್ಟ್ರೇಲಿಯಾ ತಂಡದ (Australia Cricket Team) ಅದ್ಭುತ ಪ್ರದರ್ಶನ ತೋರುವ ಮೂಲಕ ಇಂಗ್ಲೆಂಡ್ ಎದುರು ಪ್ರಾಬಲ್ಯ ಮೆರೆಯಿತು. 5 ಪಂದ್ಯಗಳ ಆ್ಯಷಸ್‌ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು 4-0 ಅಂತರದ ಗೆಲುವು ದಾಖಲಿಸುವ ಮೂಲಕ 119 ರೇಟಿಂಗ್ ಅಂಕಗಳೊಂದಿಗೆ ಆಸ್ಟ್ರೇಲಿಯಾ ತಂಡವು ಮೊದಲ ಸ್ಥಾನಕ್ಕೇರಿದೆ. ಇನ್ನು 117 ರೇಟಿಂಗ್ ಅಂಕ ಹೊಂದಿರುವ ನ್ಯೂಜಿಲೆಂಡ್ ತಂಡವು ಎರಡನೇ ಸ್ಥಾನದಲ್ಲಿದ್ದರೆ, 116 ರೇಟಿಂಗ್ ಅಂಕ ಹೊಂದಿರುವ ಟೀಂ ಇಂಡಿಯಾ (Team India) ಮೂರನೇ ಸ್ಥಾನದಲ್ಲೇ ಉಳಿದಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸರಣಿ ಗೆದ್ದಿದ್ದರೆ ಅಗ್ರಸ್ಥಾನದಲ್ಲೇ ಉಳಿಯುತ್ತಿತ್ತು. ಆದರೆ ಭಾರತಕ್ಕೆ ಸೋಲುಣಿಸಿದ ಹರಿಣ ಪಡೆ 5ನೇ ಸ್ಥಾನಕ್ಕೇರಿದೆ. ದಕ್ಷಿಣ ಆಫ್ರಿಕಾ ಎದುರು ಸೆಂಚೂರಿಯನ್ ಟೆಸ್ಟ್ ಪಂದ್ಯ ಗೆದ್ದು ಬೀಗಿದ್ದ ಭಾರತ ತಂಡವು, ಇದಾದ ಬಳಿಕ ಜೋಹಾನ್ಸ್‌ಬರ್ಗ್‌ ಹಾಗೂ ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಹರಿಣಗಳ ನಾಡಿನಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು. 

Ind vs SA: ದಕ್ಷಿಣ ಆಫ್ರಿಕಾ ಎದುರು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಟೀಂ ಇಂಡಿಯಾ.!

ಆ್ಯಷಸ್‌ ಸರಣಿಯಲ್ಲಿ ಆಘಾತಕಾರಿ ಸೋಲು ಕಂಡ ಜೋ ರೂಟ್ (Joe Root) ನೇತೃತ್ವದ ಇಂಗ್ಲೆಂಡ್‌ 4ನೇ ಸ್ಥಾನದಲ್ಲಿದರೆ, ಪಾಕಿಸ್ತಾನ ಒಂದು ಸ್ಥಾನ ಕುಸಿತ ಕಂಡು 6ನೇ ಸ್ಥಾನಕ್ಕೆ ತಲುಪಿದೆ. ಶ್ರೀಲಂಕಾ, ವೆಸ್ಟ್‌ಇಂಡೀಸ್‌, ಬಾಂಗ್ಲಾದೇಶ, ಜಿಂಬಾಬ್ವೆ, ಆಫ್ಘಾನಿಸ್ತಾನ ಹಾಗೂ ಐರ್ಲೆಂಡ್‌ ತಂಡಗಳು ನಂತರದ ಸ್ಥಾನಗಳಲ್ಲಿವೆ.

ರಾಹುಲ್‌, ರಿಷಭ್ ಪಂತ್‌ಗೆ ಬಿಸಿಸಿಐ ಎ+ ಗುತ್ತಿಗೆ..?

ನವದೆಹಲಿ: ಭಾರತ ಟೆಸ್ಟ್‌ ತಂಡದ ನಾಯಕತ್ವ ರೇಸ್‌ನಲ್ಲಿರುವ ಕೆ.ಎಲ್‌.ರಾಹುಲ್‌ (KL Rahul) ಹಾಗೂ ರಿಷಭ್‌ ಪಂತ್‌ಗೆ (Rishabh Pant) ಬಿಸಿಸಿಐ (BCCI) 2022ರ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಎ+ ದರ್ಜೆಗೆ ಸೇರ್ಪಡೆಗೊಳಿಸುವ ಸಾಧ್ಯತೆ ಇದೆ. ಸದ್ಯದಲ್ಲೇ ನೂತನ ಪಟ್ಟಿ ಪ್ರಕಟಗೊಳ್ಳಲಿದೆ. 

ಮೂರೂ ಮಾದರಿಯಲ್ಲಿ ಭಾರತವನ್ನು ಪ್ರತಿನಿಧಿಸುವ ಆಟಗಾರರಾದ ವಿರಾಟ್ ಕೊಹ್ಲಿ(Virat Kohli), ಜಸ್ಪ್ರೀತ್ ಬುಮ್ರಾ (Jasprit Bumrah) ಹಾಗೂ ರೋಹಿತ್‌ ಶರ್ಮಾ(Rohit Sharma) ಈ ವರ್ಷವೂ ಎ+ನಲ್ಲೇ ಮುಂದುವರಿಯುವುದು ಬಹುತೇಕ ಖಚಿತವೆನಿಸಿದೆ. ಇದೀಗ ರಿಷಭ್ ಪಂತ್‌ ಹಾಗೂ ಕೆ.ಎಲ್. ರಾಹುಲ್‌ ಸಹ ಮೂರೂ ಮಾದರಿಯಲ್ಲಿ ಆಡುವ ಕಾರಣ ಅವರೂ ಅದೇ ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದು, ವಾರ್ಷಿಕ 7 ಕೋಟಿ ರುಪಾಯಿ ವೇತನ ಪಡೆಯಲಿದ್ದಾರೆ. ಇದೇ ವೇಳೇ ಚೇತೇಶ್ವರ್‌ ಪೂಜಾರ ಹಾಗೂ ಅಜಿಂಕ್ಯ ರಹಾನೆ ‘ಎ’ ದರ್ಜೆಯಿಂದ ಹೊರಬೀಳಲಿದ್ದಾರೆ ಎನ್ನಲಾಗಿದೆ.

'ಎ' ಗ್ರೇಡ್‌ ಪಡೆಯುವ ಆಟಗಾರರು 5 ಕೋಟಿ ರುಪಾಯಿ ಪಡೆದರೆ, 'ಬಿ' ಗ್ರೇಡ್‌ ಹೊಂದಿರುವ ಆಟಗಾರರು 3 ಕೋಟಿ ಹಾಗೂ 'ಸಿ' ಗ್ರೇಡ್ ಹೊಂದಿರುವವ ಆಟಗಾರರು ಒಂದು ಕೋಟಿ ರುಪಾಯಿ ವಾರ್ಷಿಕ ಸಂಭಾವನೆಯನ್ನು ಪಡೆಯಲಿದ್ದಾರೆ.

Follow Us:
Download App:
  • android
  • ios