T20 World Cup: 1992ರ ವಿಶ್ವಕಪ್ ಕ್ಷಣ ಮರುಸೃಷ್ಟಿಸುತ್ತಾ ಪಾಕಿಸ್ತಾನ?
* ಐಸಿಸಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನ-ಇಂಗ್ಲೆಂಡ್ ಪ್ರಶಸ್ತಿಗಾಗಿ ಕಾದಾಟ
1992ರ ವಿಶ್ವಕಪ್ ವೈಭವ ಮರು ಸೃಷ್ಟಿಸುವ ವಿಶ್ವಾಸದಲ್ಲಿ ಪಾಕಿಸ್ತಾನ ತಂಡ
1992ರ ಪಾಕಿಸ್ತಾನ ತಂಡವು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು
ಮೆಲ್ಬರ್ನ್(ನ.11): 1992ರ ಏಕದಿನ ವಿಶ್ವಕಪ್‌ಗೂ 2022ರ ಟಿ20 ವಿಶ್ವಕಪ್‌ಗೂ ಸಾಮ್ಯತೆ ಇದೆ. 1992ರ ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನ-ಇಂಗ್ಲೆಂಡ್ ಮುಖಾಮುಖಿಯಾಗಿದ್ದವು. 2022ರ ವಿಶ್ವಕಪ್ ಫೈನಲ್‌ಗೂ ಈ ಎರಡು ತಂಡಗಳು ಪ್ರವೇಶಿಸಿವೆ. ಆಗಲೂ ಮೆಲ್ಬರ್ನ್ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿತ್ತು. ಭಾನುವಾರದ ಪಂದ್ಯಕ್ಕೂ ಎಂಸಿಜಿ ವೇದಿಕೆಯಾಗಲಿದೆ. ಪಾಕಿಸ್ತಾನ ವಿಶ್ವ ಚಾಂಪಿಯನ್ ಆಗಿತ್ತು. ಇದೀಗ ಮತ್ತೆ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ.
ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಭಾರತ ಹಾಗೂ ಜಿಂಬಾಬ್ವೆ ಎದುರು ಆಘಾತಕಾರಿ ಸೋಲು ಅನುಭವಿ ಗ್ರೂಪ್ ಹಂತದಲ್ಲೇ ಹೊರಬೀಳುವ ಭೀತಿಗೆ ಸಿಲುಕಿತ್ತು. ಆದರೆ ಆ ಬಳಿಕ ಅದ್ಭುತ ಗೆಲುವು ದಾಖಲಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದ್ದು, 1992ರ ಸ್ಪೂರ್ತಿಯೊಂದಿಗೆ ಫೈನಲ್ ಆಡಲು ಸಜ್ಜಾಗಿದೆ.
ಟಾಸ್ ಲೆಕ್ಕಾಚಾರ ಉಲ್ಟಾ!
ಅಡಿಲೇಡ್‌ನಲ್ಲಿ ಈ ವಿಶ್ವಕಪ್‌ನ ಸೂಪರ್-12 ಹಂತದಲ್ಲಿ ಎಲ್ಲಾ 6 ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡ ಸೋಲನುಭವಿಸಿತ್ತು. ಆದರೆ ಈ ಲೆಕ್ಕಾಚಾರ ಸೆಮಿಫೈನಲ್‌ನಲ್ಲಿ ಉಲ್ಟಾಆಯಿತು. ಮೊದಲ ಬಾರಿಗೆ ಟಾಸ್ ಗೆದ್ದ ತಂಡ ಜಯಿಸಿತು.
ಐಸಿಸಿ ಟೂರ್ನಿಗಳಲ್ಲಿ ಭಾರತಕ್ಕೆ ಮತ್ತೆ ಶಾಕ್!
2013ರಲ್ಲಿ ಭಾರತ ಕೊನೆ ಬಾರಿಗೆ ಐಸಿಸಿ ಟ್ರೋಫಿ ಗೆದ್ದಿದ್ದು. ಆ ವರ್ಷ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಜಯಿಸಿತ್ತು. ಆ ಬಳಿಕ ತಂಡಕ್ಕೆ ಸರಣಿ ಆಘಾತ ಎದುರಾಗಿದೆ. 2014ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ, ಶ್ರೀಲಂಕಾ ವಿರುದ್ಧ ಸೋತರೆ, 2015ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಪ್ರೇಲಿಯಾಕ್ಕೆ ಶರಣಾಗಿತ್ತು. 2016ರ ಟಿ20 ವಿಶ್ವಕಪ್ ಸೆಮೀಸ್‌ನಲ್ಲಿ ವೆಸ್ಟ್‌ಇಂಡೀಸ್, 2019ರ ಏಕದಿನ ವಿಶ್ವಕಪ್ ಸೆಮೀಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿತ್ತು. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ಹಾಗೂ 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕಿವೀಸ್ ವಿರುದ್ಧ ಸೋತು ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. ಈ ಬಾರಿ ಮತ್ತೆ ಸೆಮೀಸ್‌ನಲ್ಲಿ ಮುಗ್ಗರಿಸಿತು.
ಅಡಿಲೇಡಲ್ಲಿ ಮೊದಲ ಬಾರಿ 160+ ರನ್ ಚೇಸ್
ಮೊದಲ ಬಾರಿಗೆ ಅಡಿಲೇಡ್‌ನಲ್ಲಿ 160ಕ್ಕಿಂತ ಹೆಚ್ಚಿನ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿ ಇಂಗ್ಲೆಂಡ್ ದಾಖಲೆ ಬರೆಯಿತು. 2011ರಲ್ಲಿ ಅಡಿಲೇಡ್ ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಪ್ರೇಲಿಯಾ ವಿರುದ್ಧ ಇಂಗ್ಲೆಂಡ್ 158 ರನ್ ಬೆನ್ನತ್ತಿದ್ದು ಈವರೆಗಿನ ದಾಖಲೆಯಾಗಿತ್ತು.
ಟೀಂ ಇಂಡಿಯಾಗೆ ಚೋಕರ್ಸ್ ಪಟ್ಟ, ಮಿಸ್ ಯು ಧೋನಿ ಎಂದ ಭಾರತ!
170 ರನ್ ಜೊತೆಯಾಟ: ಟಿ20 ವಿಶ್ವಕಪ್‌ನಲ್ಲಿ ದಾಖಲೆ!
ಮೊದಲ ವಿಕೆಟ್‌ಗೆ 170 ರನ್ ಸೇರಿಸಿದ ಇಂಗ್ಲೆಂಡ್‌ನ ಬಟ್ಲರ್-ಹೇಲ್ಸ್ ಟಿ20 ವಿಶ್ವಕಪ್‌ನಲ್ಲಿ ಯಾವುದೇ ವಿಕೆಟ್‌ಗೆ ಗರಿಷ್ಠ ರನ್ ಜೊತೆಯಾಟದ ದಾಖಲೆ ಬರೆದರು. ಅವರು ಇದೇ ವಿಶ್ವಕಪ್‌ನ ಸೂಪರ್-12 ಹಂತದಲ್ಲಿ ಬಾಂಗ್ಲಾದೇಶ ವಿರುದ್ಧ ದ.ಆಫ್ರಿಕಾದ ಕ್ವಿಂಟನ್ ಡಿ ಕಾಕ್-ರೈಲಿ ರುಸ್ಸೌ 2ನೇ ವಿಕೆಟ್‌ಗೆ ಗಳಿಸಿದ್ದ 168 ರನ್‌ಗಳ ದಾಖಲೆಯನ್ನು ಮುರಿದರು.
ವಿಶ್ವಕಪ್ ಸೋಲು: ಹಲವು ಹಿರಿಯ ಆಟಗಾರರ ನಿವೃತಿ?
ಟಿ20 ವಿಶ್ವಕಪ್ ಸೆಮಿಫೈನಲ್ ಹಲವು ಭಾರತೀಯ ಆಟಗಾರರು ಸದ್ಯದಲ್ಲೇ ಅಂ.ರಾ.ಟಿ20ಯಿಂದ ನಿವೃತ್ತಿ ಪಡೆಯುವಂತೆ ಮಾಡಬಹುದು. ರೋಹಿತ್, ಅಶ್ವಿನ್, ಕಾರ್ತಿಕ್, ಶಮಿ, ಭುವನೇಶ್ವರ್ ಸೇರಿ ಇನ್ನೂ ಕೆಲ ಹಿರಿಯ ಆಟಗಾರರು ಮುಂದಿನ ಟಿ20 ವಿಶ್ವಕಪ್‌ನಲ್ಲಿ ಆಡುವುದು ಅನುಮಾನ. ಹಾರ್ದಿಕ್ ಪಾಂಡ್ಯ ಮುಂದಿನ ನಾಯಕರಾಗಬಹುದು. ಅವರ ನೇತೃತ್ವದಲ್ಲಿ ಸಂಪೂರ್ಣವಾಗಿ ಹೊಸ ತಂಡ ಕಟ್ಟುವ ಸವಾಲು ಬಿಸಿಸಿಐ ಆಯ್ಕೆ ಸಮಿತಿ ಮುಂದಿದೆ.