Asianet Suvarna News Asianet Suvarna News

T20 World Cup: NZ vs NAM ನಮೀಬಿಯಾಗೆ ಸ್ಪರ್ಧಾತ್ಮಕ ಗುರಿ ನೀಡಿದ ನ್ಯೂಜಿಲೆಂಡ್

* ನಮೀಬಿಯಾ ಎದುರು 163 ರನ್‌ ಬಾರಿಸಿದ ನ್ಯೂಜಿಲೆಂಡ್

* ಗೆಲ್ಲಲು ಸ್ಪರ್ಧಾತ್ಮಕ ಗುರಿ ಪಡೆದ ನಮೀಬಿಯಾ

* ಅರ್ಧಶತಕದ ಜತೆಯಾಟ ನಿಭಾಯಿಸಿದ ನೀಶಮ್-ಫಿಲಿಫ್ಸ್

ICC T20 World Cup NZ vs Nam New Zealand Set 164 runs target to Namibia in Sharjah kvn
Author
Bengaluru, First Published Nov 5, 2021, 5:16 PM IST

ಶಾರ್ಜಾ(ನ.05): ಗ್ಲೆನ್ ಫಿಲಿಫ್ಸ್ ಹಾಗೂ ಜೇಮ್ಸ್‌ ನೀಶಮ್‌ ಆಕರ್ಷಕ ಜತೆಯಾಟದ ನೆರವಿನಿಂದ ನ್ಯೂಜಿಲೆಂಡ್ ತಂಡವು 4 ವಿಕೆಟ್ ಕಳೆದುಕೊಂಡು 163 ರನ್‌ ಬಾರಿಸಿದ್ದು, ನಮೀಬಿಯಾ ಕ್ರಿಕೆಟ್ ತಂಡಕ್ಕೆ (Namibia Cricket Team) ಗೆಲ್ಲಲು ಸ್ಪರ್ಧಾತ್ಮಕ ಗುರಿ ನೀಡಿದೆ

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ತಂಡವು  (New Zealand Cricket Team) ಎಚ್ಚರಿಕೆಯ ಆರಂಭವನ್ನು ಪಡೆಯಿತು. ಮೊದಲ ವಿಕೆಟ್‌ಗೆ ಮಾರ್ಟಿನ್ ಗಪ್ಟಿಲ್ ಹಾಗೂ ಡೇರಲ್ ಮಿಚೆಲ್‌ ಜೋಡಿ 4.1 ಓವರ್‌ಗಳಲ್ಲಿ 30 ರನ್‌ಗಳ ಜತೆಯಾಟವಾಡಿತು. ಗಪ್ಟಿಲ್ 18 ಎಸೆತಗಳನ್ನು ಎದುರಿಸಿ ತಲಾ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್‌ ನೆರವಿನಿಂದ 18 ರನ್‌ ಬಾರಿಸಿ ವೀಸಾಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಮತ್ತೋರ್ವ ಆರಂಭಿಕ ಬ್ಯಾಟರ್ ಡೇರಲ್ ಮಿಚೆಲ್ 19 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.

T20 World Cup: NZ vs NIM ನ್ಯೂಜಿಲೆಂಡ್ ಎದುರು ಟಾಸ್‌ ಗೆದ್ದ ನಮೀಬಿಯಾ ಬೌಲಿಂಗ್ ಆಯ್ಕೆ

ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಕೇನ್ ವಿಲಿಯಮ್ಸನ್‌ (Kane Williamson) ಹಾಗೂ ವಿಕೆಟ್ ಕೀಪರ್ ಬ್ಯಾಟರ್‌ ಡೆವೊನ್ ಕಾನ್ವೆ ಜೋಡಿ ಉಪಯುಕ್ತ ಜತೆಯಾಟವಾಡುವ ಮೂಲಕ ತಂಡಕ್ಕೆ ಅಸರೆಯಾದರು. ವಿಲಿಯಮ್ಸನ್‌ 25 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ ಒಂದು ಸಿಕ್ಸರ್‌ ನೆರವಿನಿಂದ 28 ರನ್‌ ಬಾರಿಸಿ ನಮೀಬಿಯಾ ನಾಯಕ ಎರಾಸ್ಮಸ್‌ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಡೆವೊನ್ ಕಾನ್ವೆ 17 ರನ್‌ ಬಾರಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಕಿವೀಸ್‌ ಬ್ಯಾಟರ್‌ಗಳು ನಿರರ್ಗಳವಾಗಿ ರನ್‌ ಗಳಿಸಲು ನಮೀಬಿಯಾ ಬೌಲರ್‌ಗಳ ಅವಕಾಶ ನೀಡಲಿಲ್ಲ. ಚಿಕ್ಕ ಬೌಂಡರಿಯಲ್ಲಿ ಕೇನ್‌ ವಿಲಿಯಮ್ಸನ್ ಹಾಗೂ ಡೇವಿಡ್ ಕಾನ್ವೆ ರನ್‌ ಗಳಿಸಲು ಪರದಾಡಿದರು. 

T20 World Cup: ನ್ಯೂಜಿಲೆಂಡ್‌ಗೆ ಶಾಕ್‌ ನೀಡುತ್ತಾ ನಮೀಬಿಯಾ?

ರನ್‌ ವೇಗಕ್ಕೆ ಚುರುಕು ಮುಟ್ಟಿಸಿದ ನೀಶಮ್-ಫಿಲಿಫ್ಸ್: ಒಂದು ಹಂತದಲ್ಲಿ 14 ಓವರ್‌ ಅಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು ಕೇವಲ 87 ರನ್‌ ಗಳಿಸಿದ್ದ ನ್ಯೂಜಿಲೆಂಡ್ ತಂಡಕ್ಕೆ ಜೇಮ್ಸ್ ನೀಶಮ್ ಹಾಗೂ ಗ್ಲೆನ್ ಫಿಲಿಫ್ಸ್ ಆಸರೆಯಾದರು. 5ನೇ ವಿಕೆಟ್‌ಗೆ ಈ ಜೋಡಿ 36 ಎಸೆತಗಳಲ್ಲಿ ಮುರಿಯದ 76 ರನ್‌ಗಳ ಜತೆಯಾಟವಾಡುವ ಮೂಲಕ ತಂಡ ಸ್ಪರ್ಧಾತ್ಮಕ ಗುರಿ ದಾಖಲಿಸಲು ಸಾಧ್ಯವಾಯಿತು. ಫಿಲಿಫ್ಸ್‌ 21 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ 39 ರನ್‌ ಬಾರಿಸಿದರೆ, ಜೇಮ್ಸ್ ನೀಶಮ್ 23 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ ಅಜೇಯ 35 ರನ್ ಬಾರಿಸಿದರು. ಕೊನೆಯ 4 ಓವರ್‌ಗಳಲ್ಲಿ ಈ ಜೋಡಿ 67 ರನ್‌ಗಳ ಜತೆಯಾಟ ನಿಭಾಯಿಸಿತು. 

T20 World Cup 2021: ಶ್ರೀಲಂಕಾ ವಿರುದ್ಧ ಸೋಲು, ವೆಸ್ಟ್ ಇಂಡೀಸ್ ಕನಸು ಛಿದ್ರ!

ಇನ್ನು ನಮೀಬಿಯಾ ತಂಡದ ಪರ ಗೆಹಾರ್ಡ್‌ ಎರಾಸ್ಮಸ್‌, ಡೇವಿಡ್ ವೀಸಾ, ಬೆರ್ನಾಡ್‌ ಸ್ಕಾಟ್ಜ್‌ ತಲಾ ಒಂದೊಂದು ವಿಕೆಟ್ ಪಡೆದರು. ಸೆಮೀಸ್‌ ಪ್ರವೇಶಿಸುವ ದೃಷ್ಟಿಯಿಂದ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ಪಾಲಿಗಿದು ಮಹತ್ವದ ಪಂದ್ಯವಾಗಿದೆ. ಈ ಮೊತ್ತವನ್ನು ಕಿವೀಸ್‌ ಬೌಲರ್‌ಗಳು ರಕ್ಷಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 163/4

ಗ್ಲೆನ್‌ ಫಿಲಿಫ್ಸ್‌: 39

 

Follow Us:
Download App:
  • android
  • ios