Asianet Suvarna News Asianet Suvarna News

T20 World Cup: ನ್ಯೂಜಿಲೆಂಡ್‌ಗೆ ಶಾಕ್‌ ನೀಡುತ್ತಾ ನಮೀಬಿಯಾ?

*ಸೆಮೀಸ್‌ಗೇರುವ ನಿರೀಕ್ಷೆಯಲ್ಲಿ ನ್ಯೂಜಿಲೆಂಡ್‌
*ಕಿವೀಸ್‌ ಸೋತರೆ ಟೀಂ ಇಂಡಿಯಾಗೆ ಲಾಭ
*ಕಿವೀಸ್‌ ಗೆದ್ದರೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ

New Zealand vs Namibia 36th Match of ICC T20 World Cup at Sharjah on Friday
Author
Bengaluru, First Published Nov 5, 2021, 7:05 AM IST

ಶಾರ್ಜಾ( ನ.5): ಗುಂಪು-2ರಿಂದ ಈಗಾಗಲೇ ಪಾಕಿಸ್ತಾನ (Pakistan) ಸೆಮಿಫೈನಲ್‌ ಪ್ರವೇಶಿಸಿದ್ದು ಇನ್ನೊಂದು ಸ್ಥಾನವನ್ನು ಖಚಿತಪಡಿಸಿಕೊಳ್ಳಲು ನ್ಯೂಜಿಲೆಂಡ್‌ (New Zealand) ಕಾತರಿಸುತ್ತಿದೆ. ಕೇನ್‌ ವಿಲಿಯಮ್ಸ್‌ ಪಡೆಗೆ ಸೂಪರ್‌-12 ಹಂತದಲ್ಲಿ ಇನ್ನೆರಡು ಪಂದ್ಯ ಬಾಕಿ ಇದ್ದು, ಶುಕ್ರವಾರ ನಮೀಬಿಯಾ (Namibia) ವಿರುದ್ಧ ಆಡಲಿದೆ. ನಮೀಬಿಯಾ ವಿರುದ್ಧ ಗೆದ್ದರೆ ಕಿವೀಸ್‌ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲಿದ್ದು, ಸೆಮೀಸ್‌ನತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಂತಾಗುತ್ತದೆ. ಆದರೆ ಸ್ಕಾಟ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಕಿವೀಸ್‌ ಬೌಲಿಂಗ್‌ ಪಡೆಯ ದೌರ್ಬಲ್ಯ ಬಹಿರಂಗಗೊಂಡಿತ್ತು. ನಮೀಬಿಯಾ ಅದರ ಲಾಭವೆತ್ತಿ ಕಿವೀಸ್‌ಗೆ ಆಘಾತ ನೀಡಿದರೆ ಸೆಮೀಸ್‌ಗೇರುವ ಆಸೆಯನ್ನು ಇನ್ನೂ ಕೈಬಿಡದ ಭಾರತಕ್ಕೆ ದೊಡ್ಡ ಸಹಾಯವಾಗಲಿದೆ.

8 ಲಕ್ಷದಿಂದ 2 ಕೋಟಿವರೆಗಿನ ಕ್ರಿಕೆಟಿಗನ ವಾಚ್‌ ಕಲೆಕ್ಷನ್‌!

ಅನುಭವಿ ಬೌಲರ್‌ಗಳಾದ ಟ್ರೆಂಟ್‌ ಬೌಲ್ಟ್‌, ಟಿಮ್‌ ಸೌಥಿ, ಆ್ಯಡಂ ಮಿಲ್ನೆ, ಇಶ್‌ ಸೋಧಿ, ಮಿಚೆಲ್‌ ಸ್ಯಾಂಟ್ನರ್‌ ನಮೀಬಿಯಾ ವಿರುದ್ಧ ಸುಧಾರಿತ ಪ್ರದರ್ಶನ ತೋರಲು ಕಾಯುತ್ತಿದ್ದಾರೆ. ತಂಡದ ಬ್ಯಾಟರ್‌ಗಳು ಮತ್ತೊಮ್ಮೆ ಜವಾಬ್ದಾರಿಯುತ ಆಟವಾಡಬೇಕಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಮೀಬಿಯಾ ಉತ್ತಮ ಹೋರಾಟ ಪ್ರದರ್ಶಿಸಿತ್ತು. ಪ್ರಮುಖವಾಗಿ ತಂಡದ ಬ್ಯಾಟಿಂಗ್‌ ಪಡೆ ಎಲ್ಲರ ಗಮನ ಸೆಳೆದಿದೆ. ತಂಡ ತನ್ನ ತಾರಾ ಆಲ್ರೌಂಡರ್‌ ಡೇವಿಡ್‌ ವೀಸಾ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ಎರಡೂ ತಂಡಗಳು ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ.

ಸಂಭವನೀಯ ಆಟಗಾರರ ಪಟ್ಟಿ

ನ್ಯೂಜಿಲೆಂಡ್‌: ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ) (Kane Williamson), ಡೆವೊನ್ ಕಾನ್ವೇ (Devon Conway), ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಟಿಮ್ ಸೌಥಿ, ಇಶ್ ಸೋಧಿ, ಟ್ರೆಂಟ್ ಬೌಲ್ಟ್

ಟೀಮ್ ಇಂಡಿಯಾ ನೂತನ ಕೋಚ್ ಆಗಿ ದ್ರಾವಿಡ್ ನೇಮಕ

ನಮೀಬಿಯಾ: ಸ್ಟೀಫನ್ ಬಾರ್ಡ್, ಮೈಕೆಲ್ ವ್ಯಾನ್ ಲಿಂಗೆನ್, ಕ್ರೇಗ್ ವಿಲಿಯಮ್ಸ್, ಗೆರ್ಹಾರ್ಡ್ ಎರಾಸ್ಮಸ್ (Gerhard Erasmus) (ನಾಯಕ), ಡೇವಿಡ್ ವೈಸ್, ಜೆಜೆ ಸ್ಮಿತ್, ಜಾನ್ ನಿಕೋಲ್ ಲಾಫ್ಟಿ-ಈಟನ್, ರೂಬೆನ್ ಟ್ರಂಪೆಲ್ಮನ್, ಜೇನ್ ಗ್ರೀನ್ (Zane Green), ಜಾನ್ ಫ್ರೈಲಿಂಕ್, ಬೆನ್ ಶಿಕೊಂಗೊ

ಪಿಚ್‌ ರಿಪೋರ್ಟ್‌

ಟಿ20 ಪಂದ್ಯಾವಳಿಯಲ್ಲಿ ಶಾರ್ಜಾದ ಪಿಚ್ ಇದುವರೆಗೆ ಉತ್ತಮ ಫಲಿತಾಂಶ ನೀಡಿದೆ.  ಈ ಮೈದಾನದಲ್ಲಿ ಬೌಂಡರಿಗಳನ್ನು ಗಳಿಸುವುದು ಹೆಚ್ಚು ಕಠಿಣವಾಗಿಲ್ಲ, ಆದರೆ ಬೌಲರ್‌ಗಳು ಕೂಡ ಉತ್ತಮ ಪ್ರದರ್ಶನ ತೋರಿಸಿದ್ದಾರೆ. ಎರಡನೇ ಬ್ಯಾಟಿಂಗ್ ಆಯ್ಕೆ ಉತ್ತಮ. 

ಭಾರತಕ್ಕೆ ಮತ್ತೊಂದು ದೊಡ್ಡ ಜಯದ ಗುರಿ!

ಅಫ್ಘಾನಿಸ್ತಾನ ವಿರುದ್ಧ ಭಾರತ 66 ರನ್‌ಗಳ ಗೆಲುವು ಸಾಧಿಸಿತ್ತು ಖಾತೆ ತೆರೆದಿತ್ತು. ಈಗ ಭಾರತಕ್ಕೆ ಮತ್ತೊಂದು ದೊಡ್ಡ ಜಯದ ಅವಶ್ಯಕತೆ ಇದ್ದು ಶುಕ್ರವಾರ ಗುಂಪು-1ರ ತನ್ನ 4ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್‌  ವಿರುದ್ಧ ಸೆಣಸಲಿದೆ(India Vs Scotland). ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವೇ ಆಗಿದೆ. ಸೆಮಿಫೈನಲ್‌ ಭವಿಷ್ಯ ತನ್ನ ಕೈಯಲಿಲ್ಲದಿದ್ದರೂ, ನೆಟ್‌ ರನ್‌ ಉತ್ತಮಗೊಳಿಸಿಕೊಳ್ಳುವುದರ ಕಡೆ ಕೊಹ್ಲಿ ಪಡೆ ಗಮನಹರಿಸಿದರೆ ಸೆಮಿಫೈನಲ್‌ ತಲುಪುವ ಸಾಧ್ಯತೆಗಳಿವೆ.

ಸ್ಕಾಟ್ಲೆಂಡ್‌ ವಿರುದ್ಧ ಸೆಣಸಲಿರುವ ಟೀಂ ಇಂಡಿಯಾ

ಆಫ್ಘನ್‌ ಜಯ ಸಾಧಿಸಿದ ಕೇವಲ 2 ದಿನದಲ್ಲಿ ನಂತರ ಭಾರತ ಮತ್ತೆ ಕಣಕ್ಕಿಳಿಯಲಿದೆ. ದೊಡ್ಡ ಅಂತರದಲ್ಲಿ ಜಯಿಸಿ ನೆಟ್‌ ರನ್‌ರೇಟ್‌ ಉತ್ತಮಗೊಳಿಸಿಕೊಳ್ಳುವುದರ ಕಡೆಗೆ ಭಾರತ ಗಮನ ಹರಿಸಬೇಕಿದೆ. ತಂಡ ಬಾಕಿ ಇರುವ 2 ಪಂದ್ಯಗಳಲ್ಲೂ ಗೆದ್ದು, ನ್ಯೂಜಿಲೆಂಡ್‌ ತಂಡ  ಅಫ್ಘಾನಿಸ್ತಾನ ಇಲ್ಲವೇ ನಮೀಬಿಯಾ ವಿರುದ್ಧ ಸೋತರೆ ಭಾರತಕ್ಕೆ ಸೆಮಿ ಫೈನಲ್‌ ತಲುಪಲು ಅವಕಾಶವಿರಲಿದೆ. ಹೀಗಾಗಿ, ತಂಡ ತನ್ನಿಂದ ಸಾಧ್ಯವಾಗುವುದನ್ನು ಸಾಧಿಸಬೇಕಿದೆ.

Follow Us:
Download App:
  • android
  • ios