Asianet Suvarna News Asianet Suvarna News

T20 World Cup 2021: ಶ್ರೀಲಂಕಾ ವಿರುದ್ಧ ಸೋಲು, ವೆಸ್ಟ್ ಇಂಡೀಸ್ ಕನಸು ಛಿದ್ರ!

  • ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ ವಿಂಡೀಸ್‌ಗೆ ಸೋಲು
  • ಶ್ರೀಲಂಕಾ ವಿರುದ್ಧ ಮುಗ್ಗರಿಸಿದ ವೆಸ್ಟ್ ಇಂಡೀಸ್
  • ತನ್ನ ಜೊತೆ ವೆಸ್ಟ್ ಇಂಡೀಸ್ ತಂಡ ಕರೆದೊಯ್ದ ಶ್ರೀಲಂಕಾ
T20 World Cup 2021 WI vs SL Srilanka beat West Indies by 20 runs in abu dhabi ckm
Author
Bengaluru, First Published Nov 4, 2021, 11:24 PM IST

ಅಬು ಧಾಬಿ(ನ.04): ಭಾರಿ ಅಂತರದ ಗೆಲುವು, ಉತ್ತಮ ರನ್‌ರೇಟ್, ಸೆಮಿಫೈನಲ್ ಚಾನ್ಸ್...ಹೀಗೆ ಹಲವು ಕನಸುಗಳನ್ನು ಹೊತ್ತು ಶ್ರೀಲಂಕಾ ವಿರುದ್ಧ ಕಣಕ್ಕಿಳಿದಿದ್ದ ವೆಸ್ಟ್ ಇಂಡೀಸ್(West Indies) ನಿರಾಸೆ ಅನುಭವಿಸಿದೆ. T20 World Cup 2021 ಟೂರ್ನಿ ಸೆಮಿಫೈನಲ್ ರೇಸ್‌ನಿಂದ ವೆಸ್ಟ್ ಇಂಡೀಸ್ ಹೊರಬಿದ್ದಿದೆ. ಶ್ರೀಲಂಕಾ(Srilanka) ವಿರುದ್ಧ ಮುಗ್ಗರಿಸಿದ ವೆಸ್ಟ್ ಇಂಡೀಸ್ ಭಾರವಾದ ಹೆಜ್ಜೆ ಇಟ್ಟಿದೆ.

Virat Kohli Birthday: 8 ಲಕ್ಷದಿಂದ 2 ಕೋಟಿವರೆಗಿನ ಕ್ರಿಕೆಟಿಗನ ವಾಚ್‌ ಕಲೆಕ್ಷನ್‌!

ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಸೋಲು ಅನುಭವಿಸಿದೆ. ಚೇಸಿಂಗ್ ಮೂಲಕ ಗೆಲುವಿನ ವಿಶ್ವಾಸದಲ್ಲಿದ್ದ ವಿಂಡೀಸ್ ಮತ್ತೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ, ವಿಂಡೀಸ್ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿತ್ತು. ಪಥುಮ್ ನಿಸಾಂಕ 51 ರನ್, ಕುಸಾಲ್ ಪರೇರಾ 29 ರನ್, ಚಾರಿತ್ ಅಸಲಂಕಾ 68 ರನ್, ದಸೂನ್ ಶನಕಾ 25 ರನ್ ನೆರವಿನಿಂದ ಶ್ರೀಲಂಕಾ 3 ವಿಕೆಟ್ ನಷ್ಟಕ್ಕೆ 189 ರನ್ ಸಿಡಿಸಿತು.

190 ರನ್ ಟಾರ್ಗೆಟ್(Target) ಪಡೆದ ವೆಸ್ಟ್ ಇಂಡೀಸ್ ಆತ್ಮವಿಶ್ವಾಸ ಕುಗ್ಗಿ ಹೋಯಿತು. ಲೆಕ್ಕಾಚಾರ ಉಲ್ಟಾ ಹೊಡೆಯಿತು. ಆರಂಭದಲ್ಲೇ ವಿಕೆಟ್ ಕಲೆದುಕೊಂಡು ವಿಂಡೀಸ್ ಸಂಕಷ್ಟಕ್ಕೆ ಸಿಲುಕಿತು. ಕ್ರಿಸ್ ಗೇಲ್(Chris gayle) ಕೇವಲ 1 ರನ್ ಸಿಡಿಸಿ ಔಟಾದರು. ಇತ್ತ ಇವಿನ್ ಲಿವಿಸ್ 8 ರನ್ ಸಿಡಿಸಿ ನಿರ್ಗಮಿಸಿದರು. 10 ರನ್‌ಗಳಿಸುವಷ್ಟರಲ್ಲಿ ವೆಸ್ಟ್ ಇಂಡೀಸ್ ಆರಂಭಿಕರನ್ನು ಕಳೆದುಕೊಂಡಿತು. 

T20 World Cup: Deepavali ಹಬ್ಬಕ್ಕೆ ಶುಭಕೋರಿದ ವಿರಾಟ್, ವಾರ್ನರ್‌ ಸೇರಿದಂತೆ ಹಲವು ಕ್ರೀಡಾತಾರೆಯರು..!

ನಿಕೋಲಸ್ ಪೂರನ್(Nicholas Pooran) ಹೋರಾಟ ನೀಡಿದರು. ಆದರೆ ರೋಸ್ಟನ್ ಚೇಸ್ ಕೇವಲ 9 ರನ್ ಸಿಡಿಸಿ ಔಟಾದರು. ಪೂರನ್ ಹಾಗೂ ಶಿಮ್ರೊನ್ ಹೆಟ್ಮೆಯರ್(Shimron Hetmyer) ಜೊತೆಯಾಟ ವೆಸ್ಟ್ ಇಂಡೀಸ್ ತಂಡಕ್ಕೆ ಚೇತರಿಕೆ ನೀಡಿದರು. ಪೂರನ್ 46 ರನ್ ಕಾಣಿಕೆ ನೀಡಿದರು. ಪೂರನ್ ವಿಕೆಟ್ ಪತನದ ಬಳಿಕ ವೆಸ್ಟ್ ಇಂಡೀಸ್ ದಿಢೀರ್ ಕುಸಿತ ಕಂಡಿತು.

ಹೆಟ್ಮೆಯರ್ ಹೋರಾಟ ಮುಂದುವರಿಸಿದರು. ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಆ್ಯಂಡ್ರೆ ರಸೆಲ್ ಕೇವಲ 2 ರನ್ ಸಿಡಿಸಿ ಔಟಾದರು. ನಾಯಕ ಕೀರನ್ ಪೋಲಾರ್ಡ್ ಶೂನ್ಯ ಸುತ್ತಿದರು. 107 ರನ್‌ಗೆ ವೆಸ್ಟ್ ಇಂಡೀಸ್ 6 ವಿಕೆಟ್ ಕಳೆದುಕೊಂಡಿತು. ಜಾಸನ್ ಹೋಲ್ಡರ್ ಕೂಡ ಅಬ್ಬರಿಸಲಿಲ್ಲ. ಹೋಲ್ಡರ್ 8 ರನ್ ಸಿಡಿಸಿ ಔಟಾದರು.ಡ್ವೇನ್ ಬ್ರಾವೋ ಕೇವಲ 2 ರನ್ ಸಿಡಿಸಿ ಔಟಾದರು.

ಬ್ರಾವೋ ವಿಕೆಟ್ ಕಬಳಿಸಿದ ವಾವಿಂಡು ಹಸರಂಗ ಹೊಸ ದಾಖಲೆ ಬರೆದರು. ಟಿ20 ಟೂರ್ನಿ ಆವೃತ್ತಿಗಳಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ  ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ದಿಗ್ಗಜರ ಸಾಲಿಗೆ ಸೇರಿಕೊಂಡರು.

16 ವಿಕೆಟ್,  ವಾವಿಂಡು ಹಸರಂಗ (2021) ವಿಶ್ವಕಪ್ ಟೂರ್ನಿ
15 ವಿಕೆಟ್, ಅಜಂತ ಮೆಂಡಿಸ್ (2012) ವಿಶ್ವಕಪ್ ಟೂರ್ನಿ
14 ವಿಕೆಟ್, ಡರ್ಕ್ ನ್ಯಾನಿಸ್ (2010) ವಿಶ್ವಕಪ್ ಟೂರ್ನಿ
13 ವಿಕೆಟ್, ಉಮರ್ ಗುಲ್ (2008) ವಿಶ್ವಕಪ್ ಟೂರ್ನಿ
13 ವಿಕೆಟ್, ಉಮರ್ ಗುಲ್ (2009) ವಿಶ್ವಕಪ್ ಟೂರ್ನಿ

ಹೋರಾಟ ನೀಡಿದ ಹೆಟ್ಮೆಯರ್ ಹಾಫ್ ಸೆಂಚುರಿ ಸಿಡಿಸಿದರು. ವೆಸ್ಟ್ ಇಂಡೀಸ್ ಗೆಲುವಿಗೆ ಅಂತಿಮ 12 ಎಸೆತದಲ್ಲಿ 52 ರನ್ ಅವಶ್ಯಕತೆ ಇತ್ತು. ಇತ್ತ ಲಂಕಾ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಶಿಮ್ರೊನ್ ಹೆಟ್ಮೆಯರ್ ಅಬ್ಬರ ಮುಂದುವರಿಸಿದರು. 19ನೇ ಓವರ್‌ನಲ್ಲಿ 2 ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿದರು.

ಹೆಟ್ಮೆಯರ್ ಅಬ್ಬರಿಂದ ವೆಸ್ಟ್ ಇಂಡೀಸ್ ಗೆಲುವಿಗೆ ಅಂತಿಮ 6 ಎಸೆತದಲ್ಲಿ 32 ರನ್ ಬೇಕಿತ್ತು. ಒಂದು ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದರೂ ವೆಸ್ಟ್ ಇಂಡೀಸ್‌ಗೆ ಗೆಲುವು ಸಿಗಲಿಲ್ಲ. ಹೆಟ್ಮೆಯರ್ ಅಜೇಯ 81 ರನ್ ಸಿಡಿಸಿದರು. ಈ ಮೂಲಕ ವಿಂಡೀಸ್ 8 ವಿಕೆಟ್ ಕಳೆದುಕೊಂಡು 169 ರನ್ ಸಿಡಿಸಿತು. ಇತ್ತ ಶ್ರೀಲಂಕಾ 20 ರನ್ ಗಲುವು ಕಂಡಿತು.

ಶ್ರೀಲಂಕಾ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ವೆಸ್ಟ್ ಇಂಡೀಸ್ ತಂಡವನ್ನು ಟೂರ್ನಿಯಿಂದ ಹೊರದಬ್ಬಿದೆ. 

Follow Us:
Download App:
  • android
  • ios