ದುಬೈ(ಅ.15): ಜಿಂಬಾಬ್ವೆ ಹಾಗೂ ನೇಪಾಳ ಕ್ರಿಕೆಟ್‌ ತಂಡ​ಗಳ ಮೇಲೆ ಹೇರಿದ್ದ ನಿಷೇಧವನ್ನು ಐಸಿಸಿ ಹಿಂಪ​ಡೆ​ದಿದೆ. ಸೋಮ​ವಾರ ಇಲ್ಲಿ ನಡೆದ ಸಭೆ ವೇಳೆ ಈ ತೀರ್ಮಾನ ಪ್ರಕ​ಟಿ​ಸ​ಲಾ​ಯಿತು. 

BCCIಗೆ ಬೆದರಿದ ICC; ಜಿಂಬಾಬ್ವೆ ಮೇಲಿನ ನಿಷೇಧ ವಾಪಾಸ್!

ಕ್ರಿಕೆಟ್‌ ಮಂಡ​ಳಿಯ ಆಡ​ಳಿತದಲ್ಲಿ ಅಲ್ಲಿನ ಸರ್ಕಾರಗಳು ತಲೆ ಹಾಕುತ್ತಿದ್ದ ಕಾರಣ, ಈ ವರ್ಷ ಜುಲೈ​ನಲ್ಲಿ ಎರಡೂ ತಂಡ​ಗಳನ್ನು ಐಸಿಸಿ ನಿಷೇ​ಧಿ​ಸಿತ್ತು. ಐಸಿಸಿ ನಿಯ​ಮ​ಗ​ಳಿಗೆ ತಕ್ಕಂತೆ ಆಡ​ಳಿತ ನಡೆ​ಸು​ವು​ದಾಗಿ ಒಪ್ಪಿ​ಕೊಂಡ ಬಳಿಕ ನಿಷೇಧ ತೆರವುಗೊಳಿ​ಸಲು ನಿರ್ಧ​ರಿ​ಸ​ಲಾ​ಯಿ​ತು ಎಂದು ಅಧ್ಯ​ಕ್ಷ ಶಶಾಂಕ್‌ ಮನೋ​ಹರ್‌ ತಿಳಿ​ಸಿ​ದ್ದಾರೆ.

ಜಿಂಬಾಬ್ವೆ BAN: ಅಚ್ಚರಿಗೊಳಗಾದ ಅಶ್ವಿನ್..!

2019 ಜುಲೈನಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ ಜಿಂಬಾಬ್ವೆ ತಂಡದ ಮೇಲೆ ತಕ್ಷಣಕ್ಕೆ ಜಾರಿಗೆ ಬರುವಂತೆ ಐಸಿಸಿ ನಿಷೇಧ ಹೇರಿತ್ತು. ಲಂಡನ್ ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಐಸಿಸಿ ಈ ತೀರ್ಮಾನಕ್ಕೆ ಬಂದಿತ್ತು. ಐಸಿಸಿ ತೀರ್ಮಾನಕ್ಕೆ ಜಿಂಬಾಬ್ವೆ ಕ್ರಿಕೆಟಿಗರು ಮಾತ್ರವಲ್ಲದೇ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಚ್ಚರಿ ವ್ಯಕ್ತಪಡಿಸಿದ್ದರು. 

ಇದೇ ವೇಳೆ ಮುಂದಿನ ವರ್ಷ ನಡೆ​ಯ​ಲಿ​ರುವ ಐಸಿಸಿ ಮಹಿಳಾ ಟಿ20 ವಿಶ್ವ​ಕಪ್‌ನ ಪ್ರಶಸ್ತಿ ಮೊತ್ತವನ್ನು ಏರಿಕೆ ಮಾಡ​ಲಾ​ಗಿದೆ. ಚಾಂಪಿ​ಯನ್‌ ಆಗುವ ತಂಡ 1 ಮಿಲಿ​ಯನ್‌ ಡಾಲರ್‌ ಪ್ರಶಸ್ತಿ ಮೊತ್ತ ಗಳಿ​ಸ​ಲಿದೆ.