ICC ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ, ಟೀಂ ಇಂಡಿಯಾ ಹೋರಾಟದ ಫುಲ್ ಲಿಸ್ಟ್!
ಐಸಿಸಿ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತ ಆತಿಥ್ಯವಹಿಸಿರುವ ಈ ಟೂರ್ನಿ ಅಕ್ಟೋಬರ್ 5 ರಿಂದ ಆರಂಭಗೊಳ್ಳುತ್ತಿದೆ. ಭಾರತದ ಹೋರಾಟ ಅಕ್ಟೋಬರ್ 8 ರಿಂದ ಆರಂಭಗೊಳ್ಳುತ್ತಿದೆ. ಟೀಂ ಇಂಡಿಯಾ ವೇಳಾಪಟ್ಟಿ ಸಂಪೂರ್ಣ ಲಿಸ್ಟ್ ಇಲ್ಲಿದೆ.
ದುಬೈ(ಜೂ.27): ಕಳೆದ 10 ವರ್ಷಗಳಿಂದ ಐಸಿಸಿ ಟ್ರೋಫಿ ಕೊರತೆ ಎದುರಿಸುತ್ತಿರುವ ಟೀಂ ಇಂಡಿಯಾಗೆ ಇದೀಗ ಹೊಸ ಇತಿಹಾಸ ರಚಿಸಲು ವೇದಿಕೆ ರೆಡಿಯಾಗಿದೆ. ಅಕ್ಟೋಬರ್ 5 ರಿಂದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಗೊಳ್ಳತ್ತಿದೆ. ಪ್ರತಿಷ್ಠಿತ ಟೂರ್ನಿಗೆ ಭಾರತ ಆತಿಥ್ಯ ವಹಿಸಿದೆ. ಕೊನೆಯ ಬಾರಿಗೆ 2011ರಲ್ಲಿ ಭಾರತ ಐಸಿಸಿ ವಿಶ್ವಕಪ್ ಟೂರ್ನಿಗೆ ಆತಿಥ್ಯವಹಿಸಿತ್ತು. ಈ ವೇಳೆ ಧೋನಿ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿತ್ತು. ಇದೀಗ 2023ರಲ್ಲಿ ಟೀಂ ಇಂಡಿಯಾ ಮತ್ತೆ ಏಕದಿನ ವಿಶ್ವಕಪ್‌ಗೆ ಆತಿಥ್ಯವಹಿಸುತ್ತಿದೆ. ಈ ಮೂಲಕ ತವರಿನಲ್ಲಿ ಮತ್ತೆ ಟ್ರೋಫಿ ಗೆಲ್ಲುವ ಸುವರ್ಣ ಅವಕಾಶ ಟೀಂ ಇಂಡಿಯಾಗೆ ಒಲಿದಿದೆ.
ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ಟೂರ್ನಿ ಆರಂಭಗೊಳ್ಳುತ್ತಿದೆ. ಭಾರತದ ಹೋರಾಟ ಅಕ್ಟೋಬರ್ 8 ರಿಂದ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ, ಬಲಿಷ್ಠ ಆಸ್ಟ್ರೇಲಿಯಾ ವಿರುದ್ದ ಹೋರಾಟ ನಡೆಸಲಿದೆ . ಈ ಪಂದ್ಯ ಚೆನ್ನೈನಲ್ಲಿ ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಟೀಂ ಇಂಡಿಯಾ ಏಕೈಕ ಪಂದ್ಯ ಆಡಲಿದೆ. ನವೆಂಬರ್ 11 ರಂದು ಟೀಂ ಇಂಡಿಯಾ ಹಾಗೂ ಕ್ವಾಲಿಫೈಯರ್ 1 ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದೆ.
ಏಕದಿನ ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಬಿಡುಗಡೆ, ಅ.15ಕ್ಕೆ ಭಾರತ-ಪಾಕ್, ಅಹಮ್ಮದಾಬಾದ್‌ನಲ್ಲಿ ಫೈನಲ್!
ಟೀಂ ಇಂಡಿಯಾ ತಂಡದ ವೇಳಾಪಟ್ಟಿ ಇಲ್ಲಿದೆ
ಅಕ್ಟೋಬರ್ 8: ಭಾರತ-ಆಸ್ಟ್ರೇಲಿಯಾ(ಚೆನ್ನೈ)
ಅಕ್ಟೋಬರ್ 11: ಭಾರತ-ಅಪ್ಘಾನಿಸ್ತಾನ(ದೆಹಲಿ)
ಅಕ್ಟೋಬರ್15: ಭಾರತ-ಪಾಕಿಸ್ತಾನ( ಅಹಮ್ಮದಾಬಾದ್)
ಅಕ್ಟೋಬರ್ 19: ಭಾರತ-ಬಾಂಗ್ಲಾದೇಶ( ಪುಣೆ)
ಅಕ್ಟೋಬರ್ 22: ಭಾರತ-ನ್ಯೂಜಿಲೆಂಡ್(ಧರ್ಮಶಾಲಾ)
ಅಕ್ಟೋಬರ್ 29: ಭಾರತ-ಇಂಗ್ಲೆಂಡ್ (ಲಖನೌ)
ನವೆಂಬರ್ 2: ಭಾರತ-ಕ್ವಾಲಿಫೈಯರ್(ಮುಂಬೈ)
ನವೆಂಬರ್ 5: ಭಾರತ-ಆಫ್ರಿಕಾ ಪಂದ್ಯ(ಕೋಲ್ಕತಾ)
ನವೆಂಬರ್ 11: ಭಾರತ-ಕ್ವಾಲಿಫೈಯರ್ 1(ಬೆಂಗಳೂರು)
ಕ್ರಿಕೆಟ್ ಅಭಿಮಾನಿಗಳಿಗೆ ಅಕ್ಟೋಬರ್ 15 ಅತ್ಯಂತ ಮುಖ್ಯ. ಕಾರಣ ಈ ದಿನ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ವಿಶ್ವದ ಅತೀ ದೊಡ್ಡ ನರೇಂದ್ರ ಮೋದಿ ಕ್ರೀಡಾಂಗಣ, ಅಹಮ್ಮದಾಬಾದ್‌ನಲ್ಲಿ ಈ ಪಂದ್ಯ ಆಯೋಜಿಸಲಾಗಿದೆ. 1 ಲಕ್ಷ ಪ್ರೇಕ್ಷಕರು ಕುಳಿತು ಪಂದ್ಯ ನೋಡಲು ಈ ಕ್ರೀಡಾಂಗಣದಲ್ಲಿ ವ್ಯವಸ್ಥೆ ಇದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಬಾರಿ ಬೇಡಿಕೆ ಇದೆ. ಐಸಿಸಿ ಈಗಷ್ಟೇ ವೇಳಾಪಟ್ಟಿ ಪ್ರಕಟಿಸಿದೆ. ಶೀಘ್ರದಲ್ಲೇ ಟಿಕೆಟ್ ಬಿಡುಗಡೆ ಮಾಡಲಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಲ್ಲಿಸಿದ್ದ ಮನವಿಯನ್ನು ಐಸಿಸಿ ತಿರಸ್ಕರಿದೆ. ಪಾಕಿಸ್ತಾನ ಪಂದ್ಯದ ಸ್ಥಳ ಬದಲಿಸಲು ಹಾಗೂ ತಾನು ಉದ್ದೇಶಿತ ಸ್ಥಳದಲ್ಲಿ ಪಂದ್ಯ ಆಯೋಜಿಸುವಂತೆ ಮನವಿ ಮಾಡಿತ್ತು. ಆದರೆ ಈ ಮನವಿಯನ್ನು ಐಸಿಸಿ ತಿರಸ್ಕರಿಸಿದೆ. ಟೂರ್ನಿಗೆ ಅ.5ರಂದು ಚಾಲನೆ ಸಿಗಲಿದೆ. ಬೆಂಗಳೂರು ಸೇರಿದಂತೆ 9 ಕ್ರೀಡಾಂಗಣಗಳು ಟೂರ್ನಿಗೆ ಆತಿಥ್ಯ ವಹಿಸುತ್ತಿದೆ.
13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿಯನ್ನು ವಿಶಿಷ್ಟ ರೀತಿಯಲ್ಲಿ ಸೋಮವಾರ ಬಾಹ್ಯಾಕಾಶದಲ್ಲಿ ಅನಾವರಣಗೊಳಿಸಲಾಗಿದೆ. ಈ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ ಯಾವುದೇ ಕ್ರೀಡೆಯ ಮೊದಲ ಟ್ರೋಫಿ ಎನಿಸಿಕೊಂಡಿತು.
ಬಾಹ್ಯಾಕಾಶದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಅನಾವರಣ!