Asianet Suvarna News Asianet Suvarna News

ಏಷ್ಯಾಕಪ್ ಬಳಿಕ ಪಾಕ್‌ಗೆ ಮತ್ತೊಂದು ಶಾಕ್, ಐಸಿಸಿ ಚಾಂಪಿಯನ್ಸ್ ಟ್ರೋಫಿ ದುಬೈಗೆ ಶಿಫ್ಟ್ ಸಾಧ್ಯತೆ!

ಪಾಕಿಸ್ತಾನಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಪಾಕಿಸ್ತಾನ ಆತಿಥ್ಯವಹಿಸಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಇದೀಗ ದುಬೈಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ದಟ್ಟವಾಗಿದೆ. 
 

ICC likely to move champions trophy 2025 from Pakistan to Dubai says Report ckm
Author
First Published Nov 27, 2023, 5:46 PM IST

ದುಬೈ(ನ.27) ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿರುವ ಪಾಕಿಸ್ತಾನಕ್ಕೆ ಆಘಾತ ಎದುರಾಗಿದೆ. ಪಾಕಿಸ್ತಾನ ಪ್ರವಾಸಕ್ಕೆ ಭಾರತ ನಿರಾಕರಿಸಿರುವ ಕಾರಣ ಟೂರ್ನಿಯನ್ನು ದುಬೈಗೆ ಸ್ಥಳಾಂತರಿಸುವ ಸಾಧ್ಯತೆ ಹೆಚ್ಚಿದೆ. ಈ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ಪರಿಹಾರದ ಎಚ್ಚರಿಕೆ ನೀಡಿದೆ. ಆದರೆ ಮೂಲಗಳ ಪ್ರಕಾರ ಪಾಕಿಸ್ತಾನದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ರದ್ದಾಗುವ ಸಾಧ್ಯತೆ ದಟ್ಟವಾಗಿದೆ. ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲು ಐಸಿಸಿ ಯೋಜನೆ ರೂಪಿಸುತ್ತಿದೆ.

2023ರ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯವಹಿಸಿತ್ತು. ಆದರೆ ಪಾಕಿಸ್ತಾನ ಪ್ರವಾಸಕ್ಕೆ ಭಾರತ ನಿರಾಕರಿಸಿತ್ತು. ಭದ್ರತೆ ಹಾಗೂ ರಾಜಕೀಯ ಕಾರಣಕ್ಕಾಗಿ ಪಾಕಿಸ್ತಾನ ಪ್ರವಾಸ ಮಾಡಲು ಭಾರತ ನಿರಾಕರಿಸಿತ್ತು. ವಿಶ್ವಕಪ್ ಟೂರ್ನಿ ಬೆದರಿಕೆ ಹಾಕಿದ ಪಾಕಿಸ್ತಾನ ಕೊನೆಗೆ ಹೈಬ್ರಿಡ್ ಮಾಡೆಲ್‌ಗೆ ಒಪ್ಪಿಕೊಂಡಿತು. ಭಾರತ ಪಂದ್ಯಗಳು ಹಾಗೂ ಸೆಮಿಫೈನಲ್, ಫೈನಲ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಹಾಗೂ ಲೀಗ್ ಹಂತದ ಪಾಕ್ ಹಾಗೂ ಇತರ ತಂಡಗಳ ಪಂದ್ಯಗಳನ್ನು ಮಾತ್ರ ಪಾಕಿಸ್ತಾನ ಆಯೋಜಿಸಿತ್ತು.

ಪಾಕಿಸ್ತಾನದ ಕ್ಯಾತೆ ಶುರು, ಚಾಂಪಿಯನ್ಸ್ ಟ್ರೋಫಿಗೆ ಭಾರತ ಆಗಮಿಸದಿದ್ದರೆ ಪರಿಹಾರ ನೀಡಿ!

ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ದುಬೈಗೆ ಸ್ಥಳಾಂತರ ಮಾಡುವ ಸಾಧ್ಯತೆ ದಟ್ಟವಾಗಿದೆ. ಇದೇ ವೇಳೆ ಹೈಬ್ರಿಡ್ ಮಾಡೆಲ್ ಕುರಿತು ಚರ್ಚೆಗಳು ನಡೆದಿದೆ. ಆದರೆ ಹೈಬ್ರಿಡ್ ಮಾಡೆಲ್ ಆಯೋಜನೆ ಹಾಗೂ ಪ್ರಾಯೋಜಕತ್ವ ಸಮಸ್ಯೆ ಎದುರಾಗುವ ಕಾರಣ ದುಬೈನಲ್ಲಿ ಟೂರ್ನಿ ಆಯೋಜನೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಪ್ರವಾಸ ನಿರಾಕರಿಸಿದ ಭಾರತಕ್ಕೆ ಐಸಿಸಿ ವಿಶ್ವಕಪ್ ಟೂರ್ನಿಗೆ ಪ್ರವಾಸ ಮಾಡುದಿಲ್ಲ ಅನ್ನೋ ಎಚ್ಚರಿಕೆಯನ್ನು ಪಾಕಿಸ್ತಾನ ನೀಡಿತ್ತು. ಆದರೆ ಈ ವಾದಕ್ಕೂ ಮನ್ನಣೆ ಸಿಗಲಿಲ್ಲ. ಕೊನೆಗೆ ಐಸಿಸಿ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಭಾರತ ಪ್ರವಾಸ ಮಾಡಿತ್ತು. ಟೂರ್ನಿಯಲ್ಲಿ ಪಾಕಿಸ್ತಾನ ಲೀಗ್ ಹಂತದಿಂದ ಹೊರಬಿದ್ದಿತ್ತು. ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸ್ಥಳಾಂತರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಪರಿಹಾರದ ಬೆದರಿಕೆ ಹಾಕಿದೆ. ಭಾರತ ಪ್ರವಾಸ ನಿರಾಕರಿಸಿದೆ, ಪರಿಹಾರ ನೀಡಬೇಕು ಎಂದು ಐಸಿಸಿಗೆ ಎಚ್ಚರಿಸಿದೆ. ಭಾರತ ಪ್ರತಿ ಭಾರಿ ಭದ್ರತೆ ಕಾರಣ ನೀಡಿ ಪಾಕಿಸ್ತಾನ ಟೂರ್ನಿಯ ಆತಿಥ್ಯವನ್ನು ಬೇರೆಗೆ ಸ್ಥಳಾಂತರ ಮಾಡುತ್ತಿದೆ. ಪಾಕಿಸ್ತಾನಕ್ಕೆ ಪ್ರಮುಖ ತಂಡಗಳು ಪ್ರವಾಸ ಮಾಡಿದೆ. ಟೂರ್ನಿ ಆಡಿದೆ. ಭಾರತ ತಂಡಕ್ಕೆ ಪಾಕಿಸ್ತಾನದಲ್ಲಿ ಹೆಚ್ಚುವರಿ ಭದ್ರತೆ ನೀಡಲು ಪಿಸಿಬಿ ಸಿದ್ಧ. ಇನ್ನು ಪಾಕಿಸ್ತಾನ ಭದ್ರತೆ ಕುರಿತು ಅನುಮಾನವಿದ್ದರೆ, ಅಂತಾರಾಷ್ಟ್ರೀಯ ಭದ್ರತಾ ಎಜೆನ್ಸಿಯಿಂದ ಸೂಕ್ತ ಭದ್ರತೆ ಒದಗಿಸಲು ಪಾಕಿಸ್ತಾನ ಬದ್ಧ ಎಂದು ಪಿಸಿಬಿ ಐಸಿಸಿಗೆ ಪತ್ರ ಬರೆದಿದೆ.

ಬ್ಯಾಟ್ ಮೇಲೆ ಪ್ಯಾಲೆಸ್ತಿನ್ ಬೆಂಬಲಿಸಿ ಸ್ಟಿಕ್ಕರ್, ಪಾಕ್ ಕ್ರಿಕೆಟಿಗ ಅಜಮ್‌ ಖಾನ್‌ಗೆ ದಂಡ!

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆಯಿಂದ 10 ರಿಂದ 15 ಸಾವಿರ ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ. ಆದರೆ ಟೂರ್ನಿ ಸ್ಥಳಾಂತರಗೊಂಡರೆ ಸಂಪೂರ್ಣ ಆದಾಯ ಕಳೆದುಕೊಳ್ಳಲಿದೆ. 

Follow Us:
Download App:
  • android
  • ios