ಚಾಂಪಿಯನ್ಸ್‌ ಟ್ರೋಫಿ ಆಡಲು ಟೀಂ ಇಂಡಿಯಾ ಪಾಕ್ ಪ್ರವಾಸ ಮಾಡುತ್ತಾ? ಅಚ್ಚರಿಯ ಅಪ್‌ಡೇಟ್ ಕೊಟ್ಟ ಐಸಿಸಿ!

2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಪಾಕಿಸ್ತಾನವೇ ಆತಿಥ್ಯ ವಹಿಸಲಿದೆ ಎಂದು ಐಸಿಸಿ ಖಚಿತಪಡಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ICC Chief Executive Geoff Allardice Confirms No plans to Relocate Champions Trophy From Pakistan kvn

ದುಬೈ: ಐಸಿಸಿಯ ಮುಂದಿನ ದೊಡ್ಡ ಟೂರ್ನಿಯೆಂದರೇ, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ. ಈ ಟೂರ್ನಿ ಕಳೆದೊಂದು ವರ್ಷದಿಂದ ದೊಡ್ಡ ಚರ್ಚೆಯ ವಿಚಾರ. 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿದೆ. ಈ ಟೂರ್ನಿಯನ್ನಾಡಲು ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಪ್ರವಾಸ ಮಾಡುತ್ತಾ ಎನ್ನುವುದು ಸದ್ಯ ಚರ್ಚೆಯ ವಿಷಯವಾಗಿದೆ. ಇದೆಲ್ಲದರ ನಡುವೆ ಐಸಿಸಿ ಮಹತ್ವದ ಅಪ್‌ಡೇಟ್‌ ನೀಡಿದ್ದು, ಮುಂಬರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು ಪಾಕಿಸ್ತಾನದಿಂದ ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ ಎಂದಿದೆ. ಇದು ಮತ್ತೆ ಚರ್ಚೆಗೆ ಗ್ರಾಸವಾಗಿದೆ. 

ಭಾರತ ಕ್ರಿಕೆಟ್ ತಂಡವು ರಾಜತಾಂತ್ರಿಕ ಬಿಕ್ಕಟ್ಟು ಹಾಗೂ ಭದ್ರತೆಯ ಕಾರಣದಿಂದ ಪಾಕಿಸ್ತಾನ ಪ್ರವಾಸ ಮಾಡಲು ಹಿಂದೇಟು ಹಾಕುತ್ತಲೇ ಬಂದಿದೆ. ಇದೆಲ್ಲದರ ನಡುವೆ ಐಸಿಸಿ ಚೀಫ್ ಎಕ್ಸಿಕ್ಯೂಟಿವ್ ಜೆಫ್ ಅಲ್ಲಾರ್ಡೈಸ್, ಸದ್ಯಕ್ಕೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು ಸ್ಥಳಾಂತರಿಸುವ ಯಾವುದೇ ಆಲೋಚನೆಯಿಲ್ಲ ಎಂದು ಖಚಿತಪಡಿಸಿದ್ದಾರೆ. "ಸದ್ಯಕ್ಕಂತು ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿದೆ. ಟೂರ್ನಿಯನ್ನು ಪಾಕಿಸ್ತಾನದಿಂದಾಚೆಗೆ ಆಯೋಜಿಸುವ ಆಲೋಚನೆಯಿಲ್ಲ. ಆದರೆ ಇರುವ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ಆದರೆ ಸದ್ಯದ ಮಟ್ಟಿಗಂತೂ ಈಗಾಗಲೇ ನಾವೇನು ಅಂದುಕೊಂಡಿದ್ದೇವೋ, ಅದರಂತೆ ಪಾಕಿಸ್ತಾನದಲ್ಲೇ ಟೂರ್ನಿ ಆಯೋಜಿಸುವ ನಿಟ್ಟಿನಲ್ಲಿ ಸಜ್ಜಾಗಿದ್ದೇವೆ" ಎಂದು ಹೇಳಿದ್ದಾರೆ.

ಭಾರತ ಎದುರಿನ ಟೆಸ್ಟ್‌ ಸರಣಿಗೆ ಬಲಿಷ್ಠ ಬಾಂಗ್ಲಾದೇಶ ಕ್ರಿಕೆಟ್ ತಂಡ ಪ್ರಕಟ!

ಬಿಸಿಸಿಐ ನಡೆಯೇನು?

ಐಸಿಸಿಯ ಈ ಹೇಳಿಕೆಯಿಂದ ಬಿಸಿಸಿಐ ಇದೀಗ ಗೊಂದಲಕ್ಕೆ ಸಿಲುಕಿದೆ. ಯಾಕೆಂದರೆ ಭಾರತ ಕ್ರಿಕೆಟ್ ತಂಡವು 2008ರಲ್ಲಿ ಏಷ್ಯಾಕಪ್ ಟೂರ್ನಿಯನ್ನಾಡಲು ಕೊನೆಯ ಬಾರಿಗೆ ಪಾಕಿಸ್ತಾನ ಪ್ರವಾಸ ಮಾಡಿತ್ತು. ಇದಾದ ಬಳಿಕ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನ ಪ್ರವಾಸ ಮಾಡಿಲ್ಲ. 

ಇತ್ತೀಚೆಗಷ್ಟೇ ಬಿಸಿಸಿಐ, ಭಾರತ ಸರ್ಕಾರ ಅನುಮತಿ ನೀಡಿದರಷ್ಟೇ ಟೀಂ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ ಎಂದು ಹೇಳಿದೆ. ಆದರೆ ಟೀಂ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನಾಡಲು ಪಾಲ್ಗೊಳ್ಳಲಿದೆಯೇ ಅಥವಾ ಬಹಿಷ್ಕರಿಸಲಿದೆಯೇ ಎನ್ನುವುದನ್ನು ಬಿಸಿಸಿಐ ಇದುವರೆಗೂ ಖಚಿತಪಡಿಸಿಲ್ಲ. 

ಕ್ರಿಕೆಟ್ ಅಂಪೈರ್ ಆಗೋದು ಇಷ್ಟು ಸುಲಭ ನಾ? ಒಂದು ಮ್ಯಾಚ್‌ಗೆ ಸಿಗುವ ಸಂಬಳ ಎಷ್ಟು? ಇಲ್ಲಿದೆ ಡೀಟೈಲ್ಸ್‌

ಬಿಸಿಸಿಐ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಭಾರತದ ಪಂದ್ಯಗಳನ್ನು ಪಾಕಿಸ್ತಾನದಿಂದಾಚೆಗೆ ನಡೆಸಲು ಐಸಿಸಿ ಬಳಿ ಮನವಿ ಸಲ್ಲಿಸಿದೆ. ಇದಕ್ಕೆ ಐಸಿಸಿ ಸಮ್ಮತಿ ಸೂಚಿಸುತ್ತೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios