ಚಾಂಪಿಯನ್ಸ್ ಟ್ರೋಫಿ ಟೂರ್ನಿ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ; ಭಾರತದ ಮ್ಯಾಚ್ ಯಾವಾಗ? ಎಲ್ಲಿ ವೀಕ್ಷಿಸಬಹುದು?
ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಪಾಕಿಸ್ತಾನ ಮತ್ತು ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಭಾರತದ ಪಂದ್ಯಗಳೆಲ್ಲ ದುಬೈನಲ್ಲಿ ನಡೆಯಲಿದ್ದು, 8 ತಂಡಗಳು ಎರಡು ಗುಂಪುಗಳಲ್ಲಿ ಕಾದಾಟ ನಡೆಸಲಿವೆ.

ಬೆಂಗಳೂರು: 'ಮಿನಿ ವಿಶ್ವಕಪ್' ಅಂತ ಕರೆಯಲ್ಪಡುವ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ. ಈ ಟೂರ್ನಿಯನ್ನ ಪಾಕಿಸ್ತಾನ ಆಯೋಜಿಸುತ್ತಿದ್ದರೂ, ಭಾರತ ಅಲ್ಲಿಗೆ ಹೋಗಲು ನಿರಾಕರಿಸಿರುವುದರಿಂದ, ಭಾರತದ ಪಂದ್ಯಗಳೆಲ್ಲ ದುಬೈನಲ್ಲಿ ನಡೆಯಲಿವೆ. ಅಂದರೆ ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ.
ಈ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ – ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟಾಪ್ 8 ಸ್ಥಾನ ಪಡೆದ ತಂಡಗಳು ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಕಾದಾಟ ನಡೆಸಲಿವೆ. ಬರೋಬ್ಬರಿ 7 ವರ್ಷಗಳ ಬಳಿಕ ಮತ್ತೊಮ್ಮೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ವೇದಿಕೆ ಸಜ್ಜಾಗಿದೆ.
ಈ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. 'ಎ' ಗುಂಪಿನಲ್ಲಿ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳಿದ್ದರೆ, 'ಬಿ' ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳಿವೆ.
ಚಾಂಪಿಯನ್ಸ್ ಟ್ರೋಫಿಯಿಂದ ಬುಮ್ರಾ ಔಟ್; ಕೊನೆ ಕ್ಷಣದಲ್ಲಿ ಭಾರತ ತಂಡದಲ್ಲಿ ಎರಡು ಬದಲಾವಣೆ!
ಭಾರತ-ಪಾಕಿಸ್ತಾನ ಪಂದ್ಯ
ಫೆಬ್ರವರಿ 19 ರಂದು ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವೆ ಟೂರ್ನಿ ಆರಂಭವಾಗಲಿದೆ. ಎಲ್ಲರೂ ಕಾತರದಿಂದ ಕಾಯುತ್ತಿರುವ ಭಾರತ-ಪಾಕಿಸ್ತಾನ ಪಂದ್ಯ ಫೆಬ್ರವರಿ 23 ರಂದು ನಡೆಯಲಿದೆ. ಟೂರ್ನಿಗೆ ಎಲ್ಲಾ ತಂಡಗಳನ್ನೂ ಈಗಾಗಲೇ ಪ್ರಕಟಿಸಲಾಗಿದೆ.
ಚಾಂಪಿಯನ್ಸ್ ಟ್ರೋಫಿ ಪೂರ್ಣ ವೇಳಾಪಟ್ಟಿ:
ಫೆಬ್ರವರಿ 19: ಪಂದ್ಯ 1: ಪಾಕಿಸ್ತಾನ vs ನ್ಯೂಜಿಲೆಂಡ್ (ಕರಾಚಿ)
ಫೆಬ್ರವರಿ 20: ಪಂದ್ಯ 2: ಬಾಂಗ್ಲಾದೇಶ vs ಭಾರತ (ದುಬೈ)
ಫೆಬ್ರವರಿ 21: ಪಂದ್ಯ 3: ಆಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ(ಕರಾಚಿ)
ಫೆಬ್ರವರಿ 22: ಪಂದ್ಯ 4: ಆಸ್ಟ್ರೇಲಿಯಾ vs ಇಂಗ್ಲೆಂಡ್(ಲಾಹೋರ್)
ಫೆಬ್ರವರಿ 23: ಪಂದ್ಯ 5: ಪಾಕಿಸ್ತಾನ vs ಭಾರತ (ದುಬೈ)
ಫೆಬ್ರವರಿ 24: ಪಂದ್ಯ 6: ಬಾಂಗ್ಲಾದೇಶ vs ನ್ಯೂಜಿಲೆಂಡ್(ರಾವಲ್ಪಿಂಡಿ)
ಫೆಬ್ರವರಿ 25: ಪಂದ್ಯ 7: ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ(ರಾವಲ್ಪಿಂಡಿ)
ಫೆಬ್ರವರಿ 26: ಪಂದ್ಯ 8: ಆಫ್ಘಾನಿಸ್ತಾನ vs ಇಂಗ್ಲೆಂಡ್(ಲಾಹೋರ್)
ಫೆಬ್ರವರಿ 27: ಪಂದ್ಯ 9: ಪಾಕಿಸ್ತಾನ vs ಬಾಂಗ್ಲಾದೇಶ(ರಾವಲ್ಪಿಂಡಿ)
ಫೆಬ್ರವರಿ 28: ಪಂದ್ಯ 10: ಆಸ್ಟ್ರೇಲಿಯಾ vs ಆಫ್ಘಾನಿಸ್ತಾನ(ಲಾಹೋರ್)
ಮಾರ್ಚ್ 01: ಪಂದ್ಯ 11: ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್(ಕರಾಚಿ)
ಮಾರ್ಚ್ 2: ಪಂದ್ಯ 12: ನ್ಯೂಜಿಲೆಂಡ್ vs ಭಾರತ (ದುಬೈ)
ಮಾರ್ಚ್ 4: ಮೊದಲ ಸೆಮಿಫೈನಲ್: A1 vs B2 (ದುಬೈ)
ಮಾರ್ಚ್ 5: ಎರಡನೇ ಸೆಮಿಫೈನಲ್: B1 vs A2 (ಲಾಹೋರ್)
ಮಾರ್ಚ್ 9: ಫೈನಲ್
ಇಂಗ್ಲೆಂಡ್ ಎದುರು ಭಾರತಕ್ಕೆ ಏಕದಿನ ಸರಣಿ ಕ್ಲೀನ್‌ಸ್ವೀಪ್ ಗುರಿ!
ಚಾಂಪಿಯನ್ಸ್ ಟ್ರೋಫಿ 2025 ಭಾರತ ತಂಡದ ವೇಳಾಪಟ್ಟಿ:
ಫೆಬ್ರವರಿ 20: ಬಾಂಗ್ಲಾದೇಶ vs ಭಾರತ (ದುಬೈ)
ಫೆಬ್ರವರಿ 23: ಪಾಕಿಸ್ತಾನ vs ಭಾರತ (ದುಬೈ)
ಮಾರ್ಚ್ 2: ನ್ಯೂಜಿಲೆಂಡ್ vs ಭಾರತ (ದುಬೈ)
ಪಂದ್ಯಗಳು ಯಾವಾಗ ಶುರುವಾಗುತ್ತವೆ?
ಚಾಂಪಿಯನ್ಸ್ ಟ್ರೋಫಿ ಪಂದ್ಯಗಳೆಲ್ಲವೂ ಭಾರತೀಯ ಕಾಲಮಾನ ಮಧ್ಯಾಹ್ನ 2.30 ಕ್ಕೆ ಶುರುವಾಗುತ್ತವೆ. ಟಾಸ್ ಪಂದ್ಯ ಶುರುವಾಗುವ ಅರ್ಧ ಗಂಟೆ ಮೊದಲು ನಡೆಯಲಿದೆ.
ಯಾವ ಚಾನೆಲ್‌ನಲ್ಲಿ ನೋಡಬಹುದು?
ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೋಡಬಹುದು. ಡಿಸ್ನಿ+ ಹಾಟ್‌ಸ್ಟಾರ್‌ನಲ್ಲೂ ನೋಡಬಹುದು.