ಚಾಂಪಿಯನ್ಸ್‌ ಟ್ರೋಫಿಯಿಂದ ಬುಮ್ರಾ ಔಟ್; ಕೊನೆ ಕ್ಷಣದಲ್ಲಿ ಭಾರತ ತಂಡದಲ್ಲಿ ಎರಡು ಬದಲಾವಣೆ!

ಬೆನ್ನು ನೋವಿನಿಂದ ಬಳಲುತ್ತಿರುವ ಜಸ್‌ಪ್ರೀತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿದ್ದಾರೆ. ಯುವ ವೇಗಿ ಹರ್ಷಿತ್ ರಾಣಾ ಬುಮ್ರಾ ಬದಲಿಗೆ ತಂಡ ಸೇರಿದ್ದಾರೆ. ಯಶಸ್ವಿ ಜೈಸ್ವಾಲ್‌ ಬದಲಿಗೆ ವರುಣ್ ಚಕ್ರವರ್ತಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

Jasprit Bumrah Ruled Out Of India Champions Trophy 2025 Squad BCCI Makes 2 Big Changes kvn

ನವದೆಹಲಿ: ಬೆನ್ನು ನೋವಿನಿಂದ ಬಳಲುತ್ತಿರುವ ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್ ಬುಮ್ರಾ, ಫೆ.19ರಿಂದ ಆರಂಭಗೊಳ್ಳಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಗೈರಾಗಲಿದ್ದಾರೆ. ಅವರ ಬದಲು ಯುವ ವೇಗಿ ಹರ್ಷಿತ್ ರಾಣಾ ತಂಡ ಸೇರ್ಪಡೆಗೊಂಡಿದ್ದಾರೆ.

ಕಳೆದ ತಿಂಗಳು ಬಿಸಿಸಿಐ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ತಂಡ ಪ್ರಕಟಿಸಿತ್ತು. ಅದರಲ್ಲಿ ಬುಮ್ರಾ ಕೂಡಾ ಸ್ಥಾನ ಪಡೆದಿದ್ದರು. ಮಂಗಳ ವಾರ ಕೆಲ ಬದಲಾವಣೆಗಳೊಂದಿಗೆ ಮಂಡಳಿಯು ಅಂತಿಮ ತಂಡ ಘೋಷಿಸಿದೆ. ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಯಲ್ಲಿ ಪುನಶ್ವೇತನ ಶಿಬಿರದಲ್ಲಿರುವ ಬುಮ್ರಾ, ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಗೈರಾದರೂ ಕೊನೆಯಲ್ಲಿ ತಂಡ ಸೇರ್ಪಡೆಗೊಳ್ಳಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಗಾಯದ ಪ್ರಮಾಣ ಹೆಚ್ಚಿರುವ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. 

ಮುಂಬೈ, ವಿದರ್ಭ, ಗುಜರಾತ್‌ ರಣಜಿ ಸೆಮಿಫೈನಲ್‌ಗೆ ಪ್ರವೇಶ!

ಯಶಸ್ವಿ ಔಟ್, ವರುಣ್ ಇನ್: ಕಳೆದ ತಿಂಗಳು ಪ್ರಕಟಿಸಿದ್ದ ತಂಡದಲ್ಲಿದ್ದ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನೂ ಅಂತಿಮ ತಂಡದಿಂದ ಹೊರಗಿಡಲಾಗಿದೆ. ಅವರ ಬದಲಿಗೆ ಚೆನ್ನೈ ಮೂಲದ ಸ್ಪಿನ್ನರ್ ವರುಣ್ ಚಕ್ರವರ್ತಿ ತಂಡ ಸೇರ್ಪಡೆಗೊಂಡಿದ್ದಾರೆ. ವರುಣ್ ಇತ್ತೀಚೆಗೆ ಇಂಗ್ಲೆಂಡ್ ವಿರುದ ಸರಣಿ ಮೂಲಕ ಭಾರತ ಪರ ಏಕದಿನಕ್ಕೆ ಪಾದಾರಣೆ ಮಾಡಿದ್ದರು. 

ಯಶಸ್ವಿ ಜೈಸ್ವಾಲ್‌, ಮೊಹಮದ್ ಸಿರಾಜ್ ಹಾಗೂ ಆಲ್ರೌಂಡರ್ ಶಿವಂ ದುಬೆ ಮೀಸಲು ಆಟಗಾರರಾಗಿದ್ದು, ಅಗತ್ಯ ಬಿದ್ದರೆ ದುಬೈಗೆ ತೆರಳಿ ಭಾರತ ತಂಡ ಕೂಡಿಕೊಳ್ಳಲಿದ್ದಾರೆ. ಟೂರ್ನಿ ಫೆ.19ಕ್ಕೆ ಆರಂಭಗೊಳ್ಳಲಿದೆ.

ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ: 

ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮದ್ ಶಮಿ, ಅರ್ಶ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ.

ಏಕದಿನ ಸರಣಿ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್‌ಗೆ ಮತ್ತೊಂದು ಶಾಕ್! RCB ಆಟಗಾರ ಚಾಂಪಿಯನ್ಸ್‌ ಟ್ರೋಫಿಯಿಂದ ಔಟ್!

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಬುಮ್ರಾ ಆಡದಿದ್ದರೆ ಭಾರತ ಗೆಲ್ಲುವ ಸಾಧ್ಯತೆ ಕಮ್ಮಿ: ಶಾಸ್ತ್ರಿ

ದುಬೈ: ‘ಚಾಂಪಿಯನ್ಸ್‌ ಟ್ರೋಫಿಯಲ್ಲಿ ವೇಗಿ ಜಸ್‌ಪ್ರೀತ್‌ ಬುಮ್ರಾ ಆಡದಿದ್ದರೆ ಭಾರತದ ಬಲ ಕಡಿಮೆ ಆಗಲಿದ್ದು, ಗೆಲ್ಲುವ ಸಾಧ್ಯತೆ ಕ್ಷೀಣಿಸಲಿದೆ’ ಎಂದು ಭಾರತದ ಮಾಜಿ ಕೋಚ್‌ ರವಿ ಶಾಸ್ತ್ರಿ ಈ ಹಿಂದೆಯೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. 

ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್‌ ಪಂದ್ಯದಲ್ಲಿ ಬುಮ್ರಾ ಬೆನ್ನು ನೋವಿನಿಂದ ಬಳಲಿದ್ದರು. ಸದ್ಯ ಅವರು ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ. ಫೆ.19ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಬೂಮ್ರಾ ಹೆಸರಿತ್ತು. ಆದರೆ ಅವರು ಸಂಪೂರ್ಣವಾಗಿ ಫಿಟ್ ಆಗದಿದ್ದ ಹಿನ್ನೆಲೆಯಲ್ಲಿ ಇದೀಗ ಬಿಸಿಸಿಐ ಪ್ರಕಟಿಸಿದ ಅಂತಿಮ ಪಟ್ಟಿಯಿಂದ ಬುಮ್ರಾ ಹೊರಬಿದ್ದಿದ್ದಾರೆ.

ಈ ಬಗ್ಗೆ ಮಾತನಾಡಿರುವ ರವಿ ಶಾಸ್ತ್ರಿ ‘ಬುಮ್ರಾ ಫಿಟ್‌ ಆಗದಿದ್ದರೆ ಭಾರತದ ಚಾಂಪಿಯನ್ಸ್‌ ಟ್ರೋಫಿ ಗೆಲ್ಲುವ ಸಾಧ್ಯತೆ ಶೇ.30-35ರಷ್ಟು ಕಡಿಮೆಯಾಗಬಹುದು. ಅವರು ಫಿಟ್‌ ಆದರೆ ಭಾರತಕ್ಕೆ ನೆರವಾಗುತ್ತಿತ್ತು’ ಎಂದಿದ್ದರು.

Latest Videos
Follow Us:
Download App:
  • android
  • ios