ಚಾಂಪಿಯನ್ಸ್ ಟ್ರೋಫಿ ಸರಣಿಯ ಪಂದ್ಯಗಳು ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯುತ್ತಿವೆ. ಪಾಕಿಸ್ತಾನವು ನ್ಯೂಜಿಲೆಂಡ್ ವಿರುದ್ಧ ಸೋತಿದೆ, ಭಾರತವು ಬಾಂಗ್ಲಾದೇಶವನ್ನು ಸೋಲಿಸಿದೆ. ಇಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಪಾಕಿಸ್ತಾನಕ್ಕೆ ಇದು ನಿರ್ಣಾಯಕ ಪಂದ್ಯವಾಗಿದೆ. ಸೋತರೆ ಸೆಮಿಫೈನಲ್ ರೇಸ್‌ನಿಂದ ಹೊರಬೀಳುವ ಸಾಧ್ಯತೆಯಿದೆ. ಸೆಮಿಫೈನಲ್ ತಲುಪಲು ಪಾಕಿಸ್ತಾನವು ಭಾರತ ಮತ್ತು ಬಾಂಗ್ಲಾದೇಶದ ಗೆಲುವನ್ನು ಅವಲಂಬಿಸಿದೆ.

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ 8 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಈ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ಪಾಕಿಸ್ತಾನ ಮತ್ತು ದುಬೈನಲ್ಲಿ ಭರ್ಜರಿಯಾಗಿ ಸಾಗುತ್ತಿದೆ. ಗ್ರೂಪ್ ಎ ವಿಭಾಗದಲ್ಲಿ 2 ಪಂದ್ಯಗಳು ಮತ್ತು ಗ್ರೂಪ್ ಬಿ ವಿಭಾಗದಲ್ಲಿ 2 ಪಂದ್ಯ ಮುಗಿದಿವೆ. ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳ ಅಂತರದಿಂದ ಸೋಲನುಭವಿಸಿತು. ಭಾರತ ತಂಡ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಹುಮ್ಮಸ್ಸಿನಲ್ಲಿದೆ. 

ಈ ಎರಡು ತಂಡಗಳು ಇಂದು ಮುಖಾಮುಖಿಯಾಗಲಿರುವ ಹಿನ್ನೆಲೆಯಲ್ಲಿ, ಇದು ಪಾಕಿಸ್ತಾನಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಇದರಲ್ಲಿ ಸೋತರೆ ಪಾಕ್ ತಂಡವು ಗಂಟು ಮೂಟೆ ಕಟ್ಟಿಕೊಂಡು ಹೋಗಬೇಕಾಗುತ್ತದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಸಣ್ಣ ತಪ್ಪುಗಳಿಗೆ ಸ್ವಲ್ಪವೂ ಅವಕಾಶವಿಲ್ಲ. ಒಂದು ಸೋಲು ಕೂಡ ತಂಡವನ್ನು ಪಾತಾಳಕ್ಕೆ ತಳ್ಳಬಹುದು. ಅಂತಹ ಸ್ಥಿತಿಯಲ್ಲಿಯೇ ಪಾಕಿಸ್ತಾನ ಈಗ ಸಿಲುಕಿಕೊಂಡಿದೆ. ಇದೀಗ ಭಾರತ ಎದುರು ಒಂದು ವೇಳೆ ಪಾಕಿಸ್ತಾನ ಸೋತರೇ ಸೆಮೀಸ್ ರೇಸ್‌ನಿಂದ ಹೊರಬೀಳುವ ಭೀತಿಗೆ ಸಿಲುಕಿದೆ. ಹಾಗಂತ ಸೆಮೀಸ್‌ ರೇಸ್‌ನಿಂದ ಅಧಿಕೃತವಾಗಿ ಹೊರಬೀಳುವುದಿಲ್ಲ.

ದುಬೈನಲ್ಲಿಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಕದನ!

ಪಾಕಿಸ್ತಾನಕ್ಕೆ ಇರುವ ಅವಕಾಶಗಳು 

ಗುಂಪು ಎ ವಿಭಾಗವನ್ನು ನೋಡಿದರೆ ನ್ಯೂಜಿಲೆಂಡ್ ಪ್ರಸ್ತುತ ಎರಡು ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಭಾರತ ಎರಡು ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ತಂಡದ ರನ್ ರೇಟ್ +1.200 ಆಗಿದ್ದು ಉತ್ತಮ ಸ್ಥಿತಿಯಲ್ಲಿದೆ. ಭಾರತದ ರನ್ ರೇಟ್ +0.408 ಆಗಿದೆ. ಇದರಲ್ಲಿ ಗಮನಾರ್ಹ ಅಂಶವೆಂದರೆ ಭಾರತದೊಂದಿಗೆ ಸೋತ ಬಾಂಗ್ಲಾದೇಶವು ಪಾಕಿಸ್ತಾನಕ್ಕಿಂತ ನೆಟ್ ರನ್ ರೇಟ್‌ನಲ್ಲಿ ಉತ್ತಮ ಸ್ಥಿತಿಯಲ್ಲಿದೆ.

ಅಂದರೆ ಬಾಂಗ್ಲಾದೇಶ ತಂಡದ ರನ್ ರೇಟ್ -0.408 ಆಗಿದೆ. ಅದೇ ವೇಳೆಯಲ್ಲಿ ಪಾಕಿಸ್ತಾನದ ರನ್ ರೇಟ್ -1.200 ಆಗಿದೆ. ಪಾಕಿಸ್ತಾನಕ್ಕೆ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಇಂದು ಭಾರತದೊಂದಿಗೆ ಒಂದು ಪಂದ್ಯ ಮತ್ತು ಫೆಬ್ರವರಿ 27ರಂದು ಬಾಂಗ್ಲಾದೇಶದ ವಿರುದ್ಧದ ಪಂದ್ಯ. ಇದರಲ್ಲಿ ಭಾರತದ ಪಂದ್ಯದಲ್ಲಿ ಪಾಕಿಸ್ತಾನ ಸೋತು, ಫೆಬ್ರವರಿ 24ರಂದು ನಡೆಯುವ ಪಂದ್ಯದಲ್ಲಿ ನ್ಯೂಜಿಲೆಂಡ್ ಬಾಂಗ್ಲಾದೇಶವನ್ನು ಸೋಲಿಸಿದರೆ ಪಾಕಿಸ್ತಾನ ಚಾಂಪಿಯನ್ಸ್ ಸೆಮೀಸ್‌ ರೇಸ್‌ನಿಂದ ಹೊರಗೆ ಹೋಗುತ್ತದೆ.

ಚಾಂಪಿಯನ್ಸ್ ಟ್ರೋಫಿ: ಇಂಡಿಯಾ vs ಪಾಕ್ ಪಂದ್ಯಕ್ಕೆ ಯಾಕಿಷ್ಟು ಮಹತ್ವ ಗೊತ್ತಾ?

ಬಾಂಗ್ಲಾದೇಶ-ನ್ಯೂಜಿಲೆಂಡ್ ಪಂದ್ಯ

ಇದೇ ವೇಳೆಯಲ್ಲಿ ಪಾಕಿಸ್ತಾನ ಇಂದು ಭಾರತವನ್ನು ಸೋಲಿಸಿದರೆ ಸೆಮೀಸ್‌ ರೇಸ್‌ನಿಂದ ಉಳಿಯಲು ಅವಕಾಶ ಸಿಗುತ್ತದೆ. ಹೀಗೆ ನಡೆದರೆ ಭಾರತ-ನ್ಯೂಜಿಲೆಂಡ್ ನಡುವಿನ ಪಂದ್ಯವು ಮಹತ್ವಪೂರ್ಣವಾಗುತ್ತದೆ. ಅದೇ ಸಮಯದಲ್ಲಿ ಭಾರತದೊಂದಿಗೆ ಸೋತರೂ ಪಾಕಿಸ್ತಾನಕ್ಕೆ ಸೆಮಿಫೈನಲ್ ಅವಕಾಶ ಸ್ವಲ್ಪ ಇದೆ

ಇದು ಸಾಧ್ಯವಾಗಬೇಕಿದ್ದರೇ ಪಾಕಿಸ್ತಾನಕ್ಕೆ ನೆರೆಯ ಭಾರತ ಮತ್ತು ಬಾಂಗ್ಲಾದೇಶದ ಸಹಾಯ ಬೇಕಾಗುತ್ತದೆ. ಅಂದರೆ ಭಾರತ ತಂಡ, ಬಾಂಗ್ಲಾದೇಶ ತಂಡಗಳು ನ್ಯೂಜಿಲೆಂಡ್ ಅನ್ನು ಸೋಲಿಸಿದರೆ ಪಾಕಿಸ್ತಾನಕ್ಕೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಸಿಗುತ್ತದೆ. ಭಾರತ ನ್ಯೂಜಿಲೆಂಡ್ ಅನ್ನು ಸೋಲಿಸಲು ಹೆಚ್ಚು ಅವಕಾಶವಿದೆ. ಆದರೆ ಬಾಂಗ್ಲಾದೇಶ ನ್ಯೂಜಿಲೆಂಡ್ ಅನ್ನು ಸೋಲಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಬಾಂಗ್ಲಾದೇಶ ಭಾರತಕ್ಕೆ ಸ್ವಲ್ಪ ಮಟ್ಟಿಗೆ ಪೈಪೋಟಿ ನೀಡಿ ಸೋಲನುಭವಿಸಿತು. 

'ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಎದುರು ಪಾಕ್ ಗೆಲ್ಲಲಿ': ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಅಚ್ಚರಿ ಮಾತು!

ಕ್ರಿಕೆಟ್‌ನಲ್ಲಿ ಯಾವುದೂ ಅಸಾಧ್ಯವಲ್ಲ!

ಕ್ರಿಕೆಟ್‌ನಲ್ಲಿ ಏನು ಬೇಕಾದರೂ ನಡೆಯಬಹುದು ಆದ್ದರಿಂದ ಭಾರತದೊಂದಿಗೆ ಸೋತರೆ ಪಾಕಿಸ್ತಾನದ ಗಮನ ಬಾಂಗ್ಲಾದೇಶ, ನ್ಯೂಜಿಲೆಂಡ್ ಪಂದ್ಯದಲ್ಲಿ ಇರುತ್ತದೆ. ಒಂದು ವೇಳೆ ಈ ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದರೆ, ಪಾಕಿಸ್ತಾನ ತನ್ನ ಪಾಲಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸುವುದು ಅವಶ್ಯಕ.ಒಟ್ಟಿನಲ್ಲಿ ಇಂದು ನಡೆಯುವ ಪಂದ್ಯ ಭಾರತ ಮಾತ್ರವಲ್ಲದೇ ಪಾಕಿಸ್ತಾನಕ್ಕೂ ಸಾಕಷ್ಟು ಮಹತ್ವದ್ದೆನಿಸಿದೆ.