Pakistan Cricket Board: ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಗೆಲುವು ಪಾಕಿಸ್ತಾನದ ಆತಿಥ್ಯದ ಕನಸನ್ನು ಭಗ್ನಗೊಳಿಸಿದೆ.
ನವದೆಹಲಿ: ಚಾಂಪಿಯನ್ಸ್ ಟ್ರೋಫಿ-2025ರಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿದೆ. ಟೀಂ ಇಂಡಿಯಾ ಫೈನಲ್ ಪ್ರವೇಶಿಸಿದ ಬೆನ್ನಲ್ಲೇ ಪಾಕಿಸ್ತಾನ ಕಂಡಿದ್ದ ಕನಸು ನುಚ್ಚು ನೂರಾಗಿದೆ. ಆಸ್ಟ್ರೇಲಿಯಾ ತಂಡವನ್ನು 4 ವಿಕೆಟ್‌ಗಳಿಂದ ಟೀಂ ಇಂಡಿಯಾ ಸೋಲಿಸಿದೆ. ಟೀಂ ಇಂಡಿಯಾ ಗೆಲುವು ಪಾಕಿಸ್ತಾನದ ಖುಷಿಯನ್ನು ಕಿತ್ತುಕೊಂಡಿದೆ. 1,000 ಕೋಟಿ ಖರ್ಚು ಮಾಡಿದರೂ ಪಾಕಿಸ್ತಾನಕ್ಕೆ ಯಾವುದೇ ಪ್ರತಿಫಲ ಸಿಗದೇ ನಿರಾಸೆಗೊಂಡಿದೆ. 29 ವರ್ಷಗಳ ನಂತರ ಐಸಿಸಿ ಪಾಕಿಸ್ತಾನದಲ್ಲಿ ಫೈನಲ್ ಪಂದ್ಯ ಆಯೋಜನೆ ಮಾಡುವ ಸಿಕ್ಕಿತ್ತು. ಆದ್ರೆ ಇದೀಗ ಫೈನಲ್ ಪಂದ್ಯ ಆಯೋಜನೆ ಮಾಡುವ ಪಾಕಿಸ್ತಾನದ ಕನಸು ನುಚ್ಚು ನೂರಾಗಿದೆ.
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಮತ್ತು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ 2025ರ ಚಾಂಪಿಯನ್ಸ್ ಟ್ರೋಫಿ ಲಾಹೋರ್‌ನಲ್ಲಿ ತಮ್ಮ ತಂಡ ಫೈನಲ್ ಪಂದ್ಯ ಆಡುತ್ತೆ ಎಂದು ಭಾವಿಸಿದ್ದರು. ಮತ್ತೊಮ್ಮೆ ಪಾಕಿಸ್ತಾನ ತಂಡ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿಯುತ್ತೆ ಎಂದು ಪಾಕ್ ಜನರು ನಂಬಿದ್ದರು. ಆದ್ರೆ ಪಾಕಿಸ್ತಾನ ಕ್ರಿಕೆಟ್ ಟೀಂ ತನ್ನ ದೇಶದ ಜನರ ನಿರೀಕ್ಷೆಗಳನ್ನು ಹುಸಿ ಮಾಡಿತು. ಮೊದಲ ಸುತ್ತಿನಲ್ಲಿಯೇ ಪಾಕಿಸ್ತಾನ ಹೊರ ಬಿದ್ದಿತ್ತು. ಪಾಕ್ ತಂಡ ಸೋತರೂ ಫೈನಲ್ ಪಂದ್ಯ ತಮ್ಮಲ್ಲಿಯೇ ನಡೆಯಬೇಕೆಂಬ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಫೈನಲ್ ಅಯೋಜನೆ ಖುಷಿಯನ್ನು ಸಹ ಸೆಮಿಫೈನಲ್‌ನಲ್ಲಿ ಗೆಲ್ಲುವ ಮೂಲಕ ಭಾರತ ತಂಡ ಕಸಿದುಕೊಂಡಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಚಾಂಪಿಯನ್ಸ್ ಟ್ರೋಫಿ 2025 ಆಯೋಜಿಸಲು ಹಗಲಿರುಳು ಶ್ರಮಿಸಿದ್ದರು. ಚಾಂಪಿಯನ್ಸ್ ಟ್ರೋಫಿಯ ಟೂರ್ನಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ 1,800 ಕೋಟಿ ಪಾಕಿಸ್ತಾನಿ ರೂಪಾಯಿ ಖರ್ಚು ಮಾಡಿ ಮೂರು ಸ್ಟೇಡಿಯಂಗಳನ್ನು ಸಿದ್ಧಪಡಿಸಿತ್ತು. ಪಾಕಿಸ್ತಾನ ಈ ಮೂರು ಸ್ಟೇಡಿಯಂ ಸಿದ್ಧತೆಗಾಗಿ 117 ದಿನ ತೆಗೆದುಕೊಂಡಿತ್ತು. ಮೂರರಲ್ಲಿ ಲಾಹೋರ್‌ನ ಗಡಾಫಿ ಸ್ಟೇಡಿಯಂಗಾಗಿ ಪಿಸಿಬಿ ಹೆಚ್ಚು ಖರ್ಚು ಮಾಡಿತ್ತು. 1,800 ಕೋಟಿ ಪಾಕಿಸ್ತಾನಿ ರೂಪಾಯಿ ಹಣದಲ್ಲಿ ಲಾಹೋರ್ ಗಡಾಫಿ ಸ್ಟೇಡಿಯಂಗಾಗಿಯೇ 1,000 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಭಾರತ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದ್ದರಿಂದ ಪಾಕಿಸ್ತಾನದ ಕನಸು ಭಗ್ನವಾಗಿದೆ. ಫೈನಲ್ ಪಂದ್ಯಕ್ಕಾಗಿಯೇ ಲಾಹೋರ್ ಗಡಾಫಿ ಸ್ಟೇಡಿಯಂನ್ನು ಸಿದ್ಧಪಡಿಸಲಾಗಿತ್ತು.
ಇದನ್ನೂ ಓದಿ: ದೇಶಕ್ಕಾಗಿ ರಂಜಾನ್ ಉಪವಾಸ ಮುರಿದ ಮೊಹಮ್ಮದ್ ಶಮಿ ನಡೆಗೆ ಭಾರಿ ಮೆಚ್ಚುಗೆ
ದುಬೈನಲ್ಲಿ ಯಾಕೆ ಫೈನಲ್ ಪಂದ್ಯ?
ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮೊದಲೇ ಬಿಸಿಸಿಐ, ಭಾರತದ ಆಟಗಾರರನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿತ್ತು. ಭಾರತ ಸರ್ಕಾರ ಅನುಮತಿ ನೀಡದ ಹಿನ್ನೆಲೆ ಆಟಗಾರರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಕಾರಣ ನೀಡಿತ್ತು. ಹಾಗಾಗಿ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜನೆ ಮಾಡಲಾಯ್ತು. ಭಾರತದ ಎಲ್ಲಾ ಪಂದ್ಯಗಳನ್ನು ದುಬೈಗೆ ಶಿಫ್ಟ್ ಮಾಡಲಾಯ್ತು. ಇನ್ನುಳಿದ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಯೋಜನೆ ಮಾಡಲಾಯ್ತು. ಭಾರತದ ವಿರುದ್ಧ ಆಡುವ ಯಾವುದೇ ತಂಡವಿದ್ದರೂ ಅದು ದುಬೈಗೆ ತೆರಳಬೇಕಿತ್ತು.
ಫೈನಲ್‌ಗಾಗಿ ಕಿವೀಸ್ vs ದ.ಆಫ್ರಿಕಾ ಹೋರಾಟ
9ನೇ ಆವೃತ್ತಿ ಚಾಂಪಿಯನ್ಸ್ ಟ್ರೋಫಿಯ 2ನೇ ಸೆಮಿಫೈನಲ್ ಪಂದ್ಯ ಬುಧವಾರ ನಡೆಯಲಿದೆ. ಫೈನಲ್ ಟಿಕೆಟ್‌ಗಾಗಿ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಪರಸ್ಪರ ಸೆಣಸಾಡಲಿದ್ದು, ಪಂದ್ಯಕ್ಕೆ ಲಾಹೋರ್ ಆತಿಥ್ಯ ವಹಿಸಲಿದೆ. ದ.ಆಫ್ರಿಕಾ ಹಾಗೂ ಕಿವೀಸ್ ತಂಡಗಳು ತಲಾ ಒಂದು ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ಇತ್ತೀಚೆಗಷ್ಟೇ ತ್ರಿಕೋನ ಸರಣಿಯಲ್ಲಿ ಲಾಹೋರ್‌ನಲ್ಲೇ ದ.ಆಫ್ರಿಕಾವನ್ನು ಸೋಲಿಸಿದ್ದ ನ್ಯೂಜಿಲೆಂಡ್, ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ.
ಇದನ್ನೂ ಓದಿ: IPL ಆಟಗಾರರಿಗೆ BCCI ಹೊಸ ನಿಯಮ: ಡ್ರೆಸ್ಸಿಂಗ್ ರೂಂಗೆ ಕುಟುಂಬಸ್ಥರ ನೋ ಎಂಟ್ರಿ, ತೋಳಿಲ್ಲದ ಜೆರ್ಸಿ ಬ್ಯಾನ್
