ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ದೇಶಕ್ಕಾಗಿ ತಮ್ಮ ರಂಜಾನ್ ಉಪವಾಸ ಮುರಿದಿದ್ದಾರೆ. ಮೊಹಮ್ಮದ್ ಶಮಿ ನಡಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ದುಬೈ(ಮಾ.04) ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ದೇಶಕ್ಕಾಗಿ ತಮ್ಮ ರಂಜಾನ್ ಉಪವಾಸ ಮುರಿದಿದ್ದಾರೆ. ಹೌದು, ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಉತ್ತಮ ಪ್ರದರ್ಶನ ನೀಡಲು ಉಪವಾಸ ಮುರಿದಿದ್ದಾರೆ. ದೇಶಕ್ಕಾಗಿ ಶಮಿ ತೆಗೆದುಕೊಂಡ ನಿರ್ಧಾರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಮೊಹಮ್ಮದ್ ಶಮಿ ನಡೆಯನ್ನು ಕೊಂಡಾಡಿದ್ದಾರೆ. ಪಂದ್ಯದ ನಡುವೆ ಮೊಹಮ್ಮದ್ ಶಮಿ ಎನರ್ಜಿ ಜ್ಯೂಸ್ ಕುಡಿಯುತ್ತಿರುವ ವಿಡಿಯೋಗಳು ಹರಿದಾಡುತ್ತಿದೆ. ಇದೇ ವಿಡಿಯೋಗೆ ಕಮೆಂಟ್ ಮಾಡುತ್ತಿದ್ದಾರೆ.
ಸದ್ಯ ಪವಿತ್ರ ರಂಜಾನ್ ತಿಂಗಳ ಉಪವಾಸ. ಎಲ್ಲಾ ಮುಸ್ಲಿಮರು ಉಪವಾಸ ಮಾಡುತ್ತಾರೆ. ಪ್ರವಾದಿ ಮೊಹಮ್ಮದರ ಆಶಯ, ಹಾಗೂ ಇಸ್ಲಾಂ ಆಚರಣೆಯಂತೆ ಅಷ್ಟೇ ಕಟ್ಟುನಿಟ್ಟಾಗಿ ಉಪವಾಸ ಮಾಡುತ್ತಾರೆ. ಹೀಗಿದ್ದರೂ ಮೊಹಮ್ಮದ್ ಶಮಿ ದೇಶಕ್ಕಾಗಿ ಉಪವಾಸ ಮುರಿದಿದ್ದಾರೆ. ಟೀಂ ಇಂಡಿಯಾದ ಪ್ರಮುಖ ವೇಗಿಯಾಗಿರುವ ಮೊಹಮ್ಮದ್ ಶಮಿ ಮೇಲೆ ಜವಾಬ್ದಾರಿ ಹೆಚ್ಚಿದೆ. ಹೀಗಾಗಿ ಶಮಿ ಉಪವಾಸ ಮುರಿದು ಟೀಂ ಇಂಡಿಯಾಾಗಿ ಉತ್ತಮ ದಾಳಿ ಸಂಘಟಿಸಿದ್ದಾರೆ.
ಕೊಹ್ಲಿ ಆಟ-ಹಾರ್ದಿಕ್ ರಾಹುಲ್ ಹೊಡೆತಕ್ಕೆ ಸೋಲುಂಡ ಆಸಿಸ್, ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಭಾರತ
ಮೊಹಮ್ಮದ್ ಶಮಿ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ದೇಶಕ್ಕಾಗಿ ಉಪಸವಾಸ ಮುರಿದ ಶಮಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಟೀಂ ಇಂಡಿಯಾ ಸೈನಿಕ ಎಂದು ಬಣ್ಣಿಸಿದ್ದಾರೆ. ಮೊಹಮ್ಮದ್ ಶಮಿ ಎಷ್ಟು ದಿನ ಉಪವಾಸ ಮುರಿಯುತ್ತಾರೆ. ಬಳಿಕ ಅಷ್ಟು ದಿನ ಮುಂದವರಿಸಬಹುದು. ಕ್ರೀಡಾಪಟುಗಳಿಗೆ, ಕೆಲವರಿಗೆ ಅನಿವಾರ್ಯ ಕಾರಣಗಳಿಂದ ಉಪವಾಸ ಮಾಡಲು ಸಾಧ್ಯವಾಗುದಿಲ್ಲ.ಅವರು ತಮ್ಮ ಪೂರ್ವನಿಗದಿತ ಸೇವೆ ಬಳಿಕ ಉಪವಾಸ ಮುಂದುವರಿಸಬಹುದು ಎಂದು ಹಲವರು ಸಲಹೆ ನೀಡಿದ್ದಾರೆ.
ಉಪವಾಸ ಮುರಿದು ಸೆಮಿಫೈನಲ್ ಪಂದ್ಯ ಆಡಿದ ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಹೋರಾಟ ನೀಡಿದ್ದಾರೆ. ಮೊಹಮ್ಮದ್ ಶಮಿ ಪ್ರಮುಖ 3 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಆರಂಭದಲ್ಲೇ ಟ್ರಾವಿಸ್ ಹೆಡ್ ಕ್ಯಾಚ್ ಕೈಚೆಲ್ಲಿದರೂ, ಬಳಿಕ ಮಾರಕ ದಾಳಿ ಮೂಲಕ ಪ್ರಮುಖ ವಿಕೆಟ್ ಕಬಳಿಸಿ ಟೀಂ ಇಂಡಿಯಾ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಕೂಪರ್ ಕೊನೊಲೆ ಖಾತೆ ಆರಂಭಿಸುವ ಮೊದಲೇ ಶಮಿ ದಾಳಿಗೆ ಔಟಾದರು. ಇನ್ನು ಅಬ್ಬರಿಸಿದ ಸ್ಟೀವ್ ಸ್ಮಿತ್ ಕೆಲ ಹೊತ್ತು ಕ್ರೀಸ್‌ನಲ್ಲಿದ್ದರೂ ಆಸ್ಟ್ರೇಲಿಯಾ ಬೃಹತ್ ಮೊತ್ತ ಪೇರಿಸುತಿತ್ತು. ಆದರೆ ಮೊಹಮ್ಮದ್ ಶಮಿ ಉತ್ತಮ ದಾಳಿ ಸಂಘಟಿಸಿ ಸ್ಮಿತ್ ವಿಕೆಟ್ ಕಬಳಿಸಿದರು. ಸ್ಮಿತ್ 73 ರನ್ ಸಿಡಿಸಿ ನಿರ್ಗಮಿಸಿದರು.
ಇನ್ನು ನ್ಯಾಥನ್ ಎಲ್ಲಿಸ್ ವಿಕೆಟ್ ಕಬಳಿಸಿ ಶಮಿ ಟೀಂ ಇಂಡಿಯಾ ಯಶಸ್ಸಿನಲ್ಲಿ ಕಾರಣರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಹೆಗ್ಗಳಿಕೆಗೂ ಮೊಹಮ್ಮದ್ ಶಮಿ ಪಾತ್ರರಾಗಿದ್ದಾರೆ. ಇಂಜುರಿಯಿಂದ ಟೀಂ ಇಂಡಿಯಾ ಹೊರಗುಳಿದಿದ್ದ ಮೊಹಮ್ಮದ್ ಶಮಿ ಚಾಂಪಿಯನ್ಸ್ ಟ್ರೋಫಿ ಮೂಲಕ ಕಮ್‌ಬ್ಯಾಕ್ ಮಾಡಿದ್ದರು. ಶಮಿ ಅದ್ಭುತ ಬೌಲಿಂಗ್ ದಾಳಿಯಿಂದ ಟೀಂ ಇಂಡಿಯಾ ಇದೀಗ ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರವೇಶಿಸಿದೆ.
ಆಸ್ಟ್ರೇಲಿಯಾ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ದ 4 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಫೈನಲ್ ಪ್ರವೇಶಿಸಿದೆ. ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಭಾರತ ಸೆಮಿಫೈನಲ್ ಪ್ರವೇಶಿಸಿತ್ತು. ಇದೀಗ ಆಸ್ಟ್ರೇಲಿಯಾ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮಾರ್ಚ್ 9 ರಂದು ಫೈನಲ್ ಪಂದ್ಯ ನಡೆಯಲಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸಲಾಗಿದೆ. ಸೌತ್ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ನಡುವಿನ 2ನೆ ಸೆಮಿಫೈನಲ್ ಗೆದ್ದ ತಂಡ ಟೀಂ ಇಂಡಿಯಾ ವಿರುದ್ದ ಪೈನಲ್ ಆಢಲಿದೆ.
