ದುಬೈ(ಅ.16): ಭಾರತ ಮಹಿಳಾ ಕ್ರಿಕೆಟ್‌ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂಧನಾ ನೂತ​ನ​ವಾಗಿ ಬಿಡು​ಗಡೆಯಾಗಿ​ರುವ ಐಸಿಸಿ ಏಕ​ದಿನ ರಾರ‍ಯಂಕಿಂಗ್‌ ಪಟ್ಟಿ​ಯಲ್ಲಿ ಅಗ್ರ​ಸ್ಥಾ​ನ ಕಳೆ​ದು​ಕೊಂಡಿ​ದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ದಕ್ಷಿಣ ಆಫ್ರಿಕಾ ವಿರು​ದ್ಧದ ಸರ​ಣಿ​ಯಲ್ಲಿ ಆಡಿರ​ಲಿಲ್ಲ. 

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಮಿಥಾಲಿ ಪಡೆಗೆ 2-0 ಸರಣಿ ಜಯ

ಸ್ಮೃತಿ​ಯನ್ನು ಹಿಂದಿ​ಕ್ಕಿ​ರುವ ನ್ಯೂಜಿ​ಲೆಂಡ್‌ನ ಏಮಿ ಸ್ಯಾಥರ್‌ವೈಟ್‌ ಅಗ್ರ​ಸ್ಥಾ​ನ​ಕ್ಕೇ​ರಿ​ದ್ದಾರೆ. ಸ್ಮೃತಿ 2ನೇ ಸ್ಥಾನದಲ್ಲಿದ್ದರೆ, ನಾಯಕಿ ಮಿಥಾಲಿ ರಾಜ್‌ 7ನೇ ಸ್ಥಾನದಲ್ಲಿ ಮುಂದು​ವ​ರಿದಿದ್ದಾರೆ.

ಏಕದಿನ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಭಾರತದ ಜುಲನ್ ಗೋಸ್ವಾಮಿ 6ನೇ ಸ್ಥಾನದಲ್ಲಿದ್ದಾರೆ. ಎಕದಿನ ಆಲ್ರೌಂಡರ್ ವಿಭಾಗದಲ್ಲಿ ಭಾರತದ ದೀಪ್ತಿ ಶರ್ಮಾ 3ನೇ ಸ್ಥಾನ ಅಲಂಕರಿಸಿದ್ದಾರೆ.

ಟಿ20 ರ‍್ಯಾಂಕಿಂಗ್‌ನಲ್ಲಿ ಸ್ಮೃತಿ ಮಂಧನಾ 6ನೇ ಸ್ಥಾನದಲ್ಲಿದ್ದಾರೆ. ಇನ್ನು ಹರ್ಮನ್‌ಪ್ರೀತ್ ಕೌರ್ ಹಾಗೂ ಜೇಮಿ ರೋಡ್ರಿಗ್ರಸ್ 8 ಮತ್ತು 9ನೇ ಸ್ಥಾನ ಅಲಂಕರಿಸಿದ್ದಾರೆ.