ದುಬೈ(ಫೆ.28): ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ರ‍್ಯಾಂಕಿಂಗ್ ಪ್ರಕಟಗೊಂಡಿದೆ. ನಾಯಕ ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ, ಕೆ.ಎಲ್.ರಾಹುಲ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದಾರೆ. ರಾಹುಲ್ 4 ಸ್ಥಾನ ಬಡ್ತಿ ಪಡೆದಿದ್ದು ಸದ್ಯ 5ನೇ ಸ್ಥಾನ ಅಲಂಕರಿಸಿದ್ದಾರೆ.

ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ ಹೈದರಾಬಾದ್ ಪಂದ್ಯಕ್ಕೆ ಹೆಚ್ಚಿನ ಭದ್ರತೆ!

ರೋಹಿತ್ ಶರ್ಮಾ 12ನೇ ಸ್ಥಾನದಲ್ಲಿದ್ದರೆ, ಶಿಖರ್ ಧವನ್ 15 ಹಾಗೂ ವಿರಾಟ್ ಕೊಹ್ಲಿ 17ನೇ ಸ್ಥಾನ ಅಲಂಕರಿಸಿದ್ದಾರೆ. ಬೆಂಗಳೂರಿನಲ್ಲಿ ಟಿ20 ಪಂದ್ಯದಲ್ಲಿ ಅಬ್ಬರಿಸಿದ ಧೋನಿ 7 ಸ್ಥಾನ ಬಡ್ತಿ ಪಡೆದು 56ನೇ ಸ್ಥಾನ ಅಲಂಕರಿಸಿದ್ದಾರೆ. ಆದರೆ ಟಾಪ್ ಟೆನ್ ಪಟ್ಟಿಯಲ್ಲಿ ರಾಹುಲ್ ಹೊರತು ಪಡಿಸಿದರೆ ಇನ್ಯಾವ ಭಾರತೀಯ ಬ್ಯಾಟ್ಸ್‌ಮನ್ ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ: ವಿಶ್ವಕಪ್ ಭದ್ರತೆ ಕುರಿತು ಬಿಸಿಸಿಐಗೆ ಐಸಿಸಿ ಭರವಸೆ

ಟಿ20 ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಕುಲ್ದೀಪ್ ಯಾದವ್ 4ನೇ ಸ್ಥಾನದಲ್ಲಿದರೆ, ಜಸ್ಪ್ರೀತ್ ಬುಮ್ರಾ 15ನೇ ಸ್ಥಾನದಲ್ಲಿದ್ದಾರೆ. ಯಜುವೇಂದ್ರ ಚೆಹಾಲ್ 19 ಹಾಗೂ ಭುವನೇಶ್ವರ್ ಕುಮಾರ್ 23ನೇ ಸ್ಥಾನ ಅಲಂಕರಿಸಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ಟಾಪ್ 20 ಪಟ್ಟಿಯಲ್ಲಿ ಏಕೈಕ ಭಾರತೀಯ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಆಲ್ರೌಂಡರ್ ವಿಭಾಗದಲ್ಲಿ 20ನೇ ಸ್ಥಾನದಲ್ಲಿದ್ದಾರೆ.