Asianet Suvarna News

ನನ್ನ ಸುತ್ತಲೂ ಮ್ಯಾಚ್‌ ಫಿಕ್ಸರ್‌ಗಳಿದ್ದರು: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪಾಕ್ ವೇಗಿ..!

ಮ್ಯಾಚ್ ಫಿಕ್ಸಿಂಗ್ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ನಾನು ನನ್ನ ತಂಡದ 10 ಹಾಗೂ ಎದುರಾಳಿ ತಂಡದ 11 ಆಟಗಾರರ ವಿರುದ್ಧ ಆಡುತ್ತಿದ್ದೆ ಎನ್ನುವ ಮೂಲಕ ಮ್ಯಾಚ್ ಫಿಕ್ಸಿಂಗ್ ಬಗೆಗಿನ ಆಘಾತಕಾರಿ ಮಾಹಿತಿ ಹೊರಹಾಕಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

I was surrounded by lots of fixers says Shoaib Akhtar
Author
New Delhi, First Published Nov 4, 2019, 1:59 PM IST
  • Facebook
  • Twitter
  • Whatsapp

ನವದೆಹಲಿ[ನ.04]: ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್‌ ಅಖ್ತರ್‌, ‘ನನ್ನ ಸುತ್ತಲು ಮ್ಯಾಚ್‌ ಫಿಕ್ಸರ್‌ಗಳೇ ತುಂಬಿ​ಕೊಂಡಿ​ದ್ದರು’ ಎನ್ನುವ ಆಘಾತಕಾರಿ ಹೇಳಿಕೆ ನೀಡಿ​ದ್ದಾರೆ. ಈ ಮೂಲಕ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಕರಾಳ ಜಗತ್ತಿನ ಆ ದಿನಗಳ ಬಗ್ಗೆ ಮಾತನ್ನಾಡಿದ್ದಾರೆ.

ಡೇ ಅಂಡ್ ನೈಟ್ ಟೆಸ್ಟ್: ಕೇವಲ 3 ಸೆಕೆಂಡ್ ದಾದಾ ಮಾತಿಗೆ ಓಕೆ ಎಂದ ಕೊಹ್ಲಿ..!

ಖಾಸಗಿ ವಾಹಿ​ನಿಯ ಕಾರ್ಯ​ಕ್ರಮದಲ್ಲಿ ಮಾತ​ನಾ​ಡಿ​ರುವ ಅಖ್ತರ್‌, ‘ನಾನು 21 ಎದುರಾ​ಳಿ​ಗಳ ವಿರು​ದ್ಧ ಆಡು​ತ್ತಿದ್ದೆ. 10 ಜನ ನಮ್ಮ ತಂಡದವರು. ಉಳಿದ 11 ಮಂದಿ ಎದು​ರಾಳಿ ತಂಡದವರು. ನಾನು ಯಾವು​ತ್ತಿಗೂ ಮೋಸ​ದಾಟದಲ್ಲಿ ಭಾಗಿ​ಯಾಗುವುದಿಲ್ಲ ಎನ್ನುವ ದೃಢ ನಂಬಿಕೆ ಇತ್ತು. ಆದರೆ ಪಾಕಿಸ್ತಾನ ತಂಡದಲ್ಲಿ ನನ್ನ ಸುತ್ತ ಮ್ಯಾಚ್‌ ಫಿಕ್ಸರ್‌ಗಳೇ ತುಂಬಿ​ದ್ದ​ರು’ ಎಂದಿದ್ದಾರೆ.

ಫಿಕ್ಸಿಂಗ್‌: ಪಾಕ್‌ ಮೂಲದ 3 ಅಂತಾರಾಷ್ಟ್ರೀಯ ಕ್ರಿಕೆ​ಟಿ​ಗರು ಬ್ಯಾನ್‌!

ಕಾರ್ಯ​ಕ್ರ​ಮ​ದ​ಲ್ಲಿ 2010ರ ಸ್ಪಾಟ್‌ ಫಿಕ್ಸಿಂಗ್‌ ಪ್ರಕ​ರಣವನ್ನು ನೆನ​ಪಿ​ಸಿ​ಕೊಂಡ ಅಖ್ತರ್‌, ‘ನನಗೆ ತುಂಬಾ ಕೋಪ ಬಂದಿತ್ತು. ಸಿಟ್ಟಿ​ನಲ್ಲಿ ಮುಷ್ಠಿ​ಯಿಂದ ಗೋಡೆಗೆ ಗುದ್ದಿದ್ದೆ. ಹಣ​ಕ್ಕಾಗಿ ಆಟ​ಗಾ​ರರು ತಮ್ಮನ್ನೇ ಮಾರಿ​ಕೊಂಡಿ​ದ್ದು ಬೇಸರ ಉಂಟು ಮಾಡಿ​ತ್ತು’ ಎಂದರು.

2011ರಲ್ಲಿ ಇಂಗ್ಲೆಂಡ್’ನಲ್ಲಿ ಪಾಕಿಸ್ತಾನದ ಕ್ರಿಕೆಟಿಗರಾದ ಮೊಹಮ್ಮದ್ ಆಮಿರ್, ಮೊಹಮ್ಮದ್ ಆಸಿಫ್ ಹಾಗೂ ಸಲ್ಮಾನ್ ಬಟ್ ಸ್ಪಾಟ್ ಫಿಕ್ಸಿಂಗ್ ನಡೆಸಿ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದರು. ಅಲ್ಪ ಮೊತ್ತಕ್ಕೆ ತಮ್ಮನ್ನು ತಾವು ಮಾರಿಕೊಳ್ಳುವ ಮೂಲಕ ಇಬ್ಬರು ಪ್ರತಿಭಾನ್ವಿತ ವೇಗಿಗಳ ಸೇವೆಯನ್ನು ಪಾಕಿಸ್ತಾನ ಕಳೆದುಕೊಳ್ಳಬೇಕಾಯಿತು. ಈ ಮೂವರ ಪೈಕಿ ಮೊಹಮ್ಮದ್ ಆಮಿರ್ ಮಾತ್ರ ಯಶಸ್ವಿ ಕಮ್’ಬ್ಯಾಕ್ ಮಾಡುವಲ್ಲಿ ಸಫಲರಾಗಿದ್ದರು. ಅಲ್ಲದೆ 2017ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.   

 

Follow Us:
Download App:
  • android
  • ios