ಚಾಟ್ ಶೋ ಕಾಫಿ ವಿತ್ ಕರಣ್‌ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಭಾರೀ ಟೀಕೆ ಎದುರಿಸಿ 2 ವರ್ಷಗಳಾಗ್ತಾ ಬಂತು. ಪಾಂಡ್ಯ ಎ.ಎಲ್ ರಾಹುಲ್ ಜೊತೆ ಚಾಟ್‌ ಶೋನಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪಾಂಡ್ಯ ನೀಡಿದ ಕೆಲವು ಹೇಳಿಕೆಗಳು ಭಾರೀ ವಿವಾದ ಸೃಷ್ಟಿಸಿತ್ತು. ಹಾರ್ದಿಕ್ ಪಾಂಡ್ಯ ಸ್ತ್ರೀದ್ವೇಶಿ ಎಂದೇ ಬಿಂಬಿಸಲ್ಪಟ್ಟಿದ್ದರು. ಇದಕ್ಕಾಗಿ ಬಿಸಿಸಿಐನಿಂದ ಶಿಸ್ತಿನ ಕ್ರಮವನ್ನೂ ಎದುರಿಸಿದ್ದರು.

ಮೊದಲ ಟಿ20 ಪಂದ್ಯದಲ್ಲಿ ಕಾಂಗರೂ ಬೇಟೆಯಾಡಿದ ಭಾರತದ ಹುಲಿಗಳು

ಈ ವಿವಾದ ಹುಟ್ಟಿದಾಗ ಪಾಂಡ್ಯ ಹಾಗೂ ರಾಹುಲ್ ಅವರನ್ನು ಆಸ್ಟ್ರೇಲಿಯಾ ಟೂರ್‌ನಿಂದ ಹೊರ ತೆಗೆದು ಮನೆಗೆ ಕಳುಹಿಸಲಾಗಿತ್ತು. ಈ ರೀತಿ ಕಮೆಂಟ್ ಮಾಡಿದ್ದಕ್ಕಾಗಿ ಬಿಸಿಸಿಐ ಇಬ್ಬರಿಗೂ ತಲಾ 20 ಲಕ್ಷ ದಂಡವನ್ನೂ ವಿಧಿಸಲಾಗಿತ್ತು. ಆದರೆ ನಂತರದಲ್ಲಿ ಈ ಕಾಂಟ್ರವರ್ಸಿ ನಿಧಾನಕ್ಕೆ ಕಡಿಮೆಯಾಯ್ತು.

ಹಾರ್ದಿಕ್ ಪಾಂಡ್ಯಾಗೆ misogynist ಎಂಬ ಟ್ಯಾಗ್:

ಈ ವಿವಾದವನ್ನು ಜಗತ್ತು ಮರೆತಿದ್ದರೂ ಹಾರ್ದಿಕ್ ಪಾಂಡ್ಯ ಮರೆತಿಲ್ಲ. ಅಷ್ಟು ಆಳವಾದ ನೋವು ಕೊಟ್ಟಿತ್ತು ಈ ಪದ ಮತ್ತು ವಿವಾದ. ಇತ್ತೀಚೆಗಿನ ಇಂಟರ್‌ವ್ಯೂನಲ್ಲಿ ಈ ವಿವಾದದ ಬಗ್ಗೆ ಹಾರ್ದಿಕ್ ಪಾಂಡ್ಯ ಮಾತನಾಡಿದ್ದಾರೆ.

ಜಗತ್ತೇ ನನ್ನನ್ನು misogynist ಎಂದು ಕರೆಯುತ್ತಿದ್ದರೆ, ನನಗೆ ಆ ಪದದ ಅರ್ಥವೇ ಗೊತ್ತಿರಲಿಲ್ಲ. ನನ್ನ ಬದುಕು ಹಲವು ಮಹಿಳೆಯರಿಂದಲೇ ಪ್ರೇರೇಪಿಸಲ್ಪಟ್ಟಿದೆ ಎಂದಿದ್ದಾರೆ. ನನಗೆ ನಿಜವಾಗಿಯೂ  misogynist ಪದದ ಅರ್ಥ ಗೊತ್ತಿರಲಿಲ್ಲ.

ತಮಗಿಂತ ಹಿರಿಯಳಾದ ಅಂಜಲಿಗೆ ಸಚಿನ್ ತೆಂಡೂಲ್ಕರ್ ಬೌಲ್ಡ್ ಆಗಿದ್ಹೇಗೆ?

ಮೊದಲು ಈ ಪದ ತಮಾಷೆ ಮಾಡೋದಕ್ಕೆ ಬಳಸೋ ಪದ ಎಂದುಕೊಂಡಿದ್ದೆ. ಈ ಪದದ ಅರ್ಥ ಮಹಿಳೆಯರನ್ನು ಬಲವಾಗಿ ದ್ವೇಷಿಸುವುದು ಎಂದು ತಿಳಿದದ್ದು ಸ್ನೇಹಿತರೊಬ್ಬರು ಹೇಳಿದ ಮೇಲೆ ಎಂದಿದ್ದಾರೆ ಪಾಂಡ್ಯ.

ನಾನು ಮಹಿಳೆಯರನ್ನು ಹೇಗೆ ದ್ವೇಷಿಸಲು ಸಾಧ್ಯ..? ಅಮ್ಮ, ಅಕ್ಕ, ಅತ್ತಿಗೆ, ನತಾಶಾ ಎಲ್ಲರೂ ಸ್ತ್ರೀಯರು. ನಾನವರನ್ನು ಗೌರವಿಸುತ್ತೇನೆ. ನನ್ನ ಮನೆ ಎಂದರೇನೇ ಸ್ತ್ರೀ ಎನ್ನುವ ಹಾಗಿದೆ. ಅವರಿರೋದ್ರಿಂದ ನಾವಿದ್ದೇವೆ ಎಂದಿದ್ದಾರೆ.

ರೈತರ ಪ್ರತಿಭಟನೆಗೆ ಕೈ ಜೋಡಿಸಿ ಮೋದಿ ವಿರುದ್ದ ಗುಡುಗಿದ ಯುವಿ ತಂದೆ..!

ವಿವಾದದ ನಂತರ ಹಾರ್ದಿಕ್ ಎದುರಿಸಿದ ನೋವುಗಳ ಬಗ್ಗೆ ತಿಳಿಸಿದ್ದಾರೆ. ನೋವು ಅವಮಾನ ಎದುರಿಸಿದ ನಂತರ ಅವರು ಕೋಣೆಯಲ್ಲಿ ಬಾಗಿಲು ಹಾಕಿ ಕುಳಿತಿದ್ದರಂತೆ. ಅವರ ಕುಟುಂಬದ ಬೆಂಬಲವೇ ಪರಿಸ್ಥಿತಿಯನ್ನು ನಿಭಾಯಿಸಲು ಅವರಿಗೆ ನೆರವಾಯ್ತು ಎಂದಿದ್ದಾರೆ ಪಾಂಡ್ಯ.