Asianet Suvarna News Asianet Suvarna News

ಮೊದಲ ಟಿ20 ಪಂದ್ಯದಲ್ಲಿ ಕಾಂಗರೂ ಬೇಟೆಯಾಡಿದ ಭಾರತದ ಹುಲಿಗಳು

ಮೊದಲ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 11 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

India vs Australia 1st T20I India thrashes Australia by 11 runs in Canberra kvn
Author
Canberra, First Published Dec 4, 2020, 5:42 PM IST | Last Updated Dec 4, 2020, 5:42 PM IST

ಕ್ಯಾನ್‌ಬೆರ್ರಾ(ಡಿ.04): ಕ್ರಿಕೆಟ್‌ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯವನ್ನು ಕೊನೆಗೂ ಟೀಂ ಇಂಡಿಯಾ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಯುಜುವೇಂದ್ರ ಚಹಲ್ ಹಾಗೂ ಟಿ. ನಟರಾಜನ್ ಆಕ್ರಮಣಕಾರಿ ದಾಳಿಗೆ ತತ್ತರಿಸಿ ಹೋದ ಆಸ್ಟ್ರೇಲಿಯಾ 11 ರನ್‌ಗಳಿಂದ ಭಾರತಕ್ಕೆ ಶರಣಾಗಿದೆ. ಈ ಗೆಲುವಿನೊಂದಿಗೆ ಭಾರತ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.

ಭಾರತ ನೀಡಿದ್ದ 162 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಫಿಂಚ್-ಶಾರ್ಟ್ ಜೋಡಿ 56 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭವನ್ನೇ ಒದಗಿಸಿಕೊಟ್ಟರು. ಫಿಂಚ್ 26 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 35 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಪಂದ್ಯದ ಗತಿ ಬದಲಿಸಿದ ಗೇಮ್‌ ಚೇಂಜರ್ ಚಹಲ್: ರವೀಂದ್ರ ಜಡೇಜಾ ಬ್ಯಾಟಿಂಗ್‌ ಮಾಡುವ ವೇಳೆ ತಲೆಗೆ ಚೆಂಡು ಬಡಿದಿದ್ದರಿಂದ ಸಬ್‌ಸ್ಟಿಟ್ಯೂಟ್ ಆಟಗಾರನಾಗಿ ಯುಜುವೇಂದ್ರ ಚಹಲ್ ಬೌಲಿಂಗ್ ಮಾಡುವ ಅವಕಾಶ ಪಡೆದರು. ಈ ಅವಕಾಶ ಬಳಸಿಕೊಂಡ ಚಹಲ್ ಭಾರತ ತಂಡಕ್ಕೆ ಕಂಟಕವಾಗಿ ಪರಿಣಮಿಸಿದ್ದ, ಫಿಂಚ್, ಸ್ಟೀವ್ ಸ್ಮಿತ್ ಹಾಗೂ ಮ್ಯಾಥ್ಯೂ ವೇಡ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.

ಆಸೀಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಟೀಂ ಇಂಡಿಯಾ

ಇನ್ನು ಮತ್ತೊಂದೆಡೆ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಯಾರ್ಕರ್ ಸ್ಪೆಷಲಿಸ್ಟ್ ಟಿ. ನಟರಾಜನ್ 30 ರನ್ ನೀಡಿ ಮ್ಯಾಕ್ಸ್‌ವೆಲ್ ಸೇರಿದಂತೆ ಮಹತ್ವದ ಮೂರು ವಿಕೆಟ್ ಪಡೆಯುವ ಮೂಲಕ ಭಾರತ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

ಇದಕ್ಕೂ ಮೊದಲು ಕನ್ನಡಿಗ ಕೆ.ಎಲ್. ರಾಹುಲ್(51) ಹಾಗೂ ಕೊನೆಯಲ್ಲಿ ರವೀಂದ್ರ ಜಡೇಜಾ ಬಾರಿಸಿದ ಉಪಯುಕ್ತ 44 ರನ್‌ ಪಂದ್ಯದ ದಿಕ್ಕನ್ನೇ ಬದಲಿಸಿತು.

Latest Videos
Follow Us:
Download App:
  • android
  • ios