Asianet Suvarna News Asianet Suvarna News

ಈ ತಂಡವೇ ಈ ಬಾರಿ IPL ಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ರವಿ ಶಾಸ್ತ್ರಿ

ಭರ್ಜರಿಯಾಗಿ ಸಾಗುತ್ತಿದೆ 16ನೇ ಆವೃತ್ತಿಯ ಐಪಿಎಲ್ ಟೂರ್ನಿ
ಈ ಬಾರಿ ಕಪ್ ಗೆಲ್ಲುವ ತಂಡದ ಭವಿಷ್ಯ ನುಡಿದ ರವಿಶಾಸ್ತ್ರಿ
ಹಾಲಿ ಚಾಂಪಿಯನ್ ಪರ ಬ್ಯಾಟ್ ಬೀಸಿದ ಮಾಜಿ ಕ್ರಿಕೆಟಿಗ

I believe that Gujarat Titans will win the trophy Says Ravi Shastri kvn
Author
First Published May 5, 2023, 1:35 PM IST

ಬೆಂಗಳೂರು(ಮೇ.05): 16ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್ ಟೂರ್ನಿಯ ಮೊದಲಾರ್ಧ ಮುಕ್ತಾಯವಾಗಿದ್ದು, ದ್ವಿತಿಯಾರ್ಧ ಕೂಡಾ ಭರ್ಜರಿಯಾಗಿಯೇ ಸಾಗುತ್ತಿದೆ. ಇದೀಗ ಈ ಬಾರಿಯ ಐಪಿಎಲ್ ಟ್ರೋಫಿಯನ್ನು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವೇ ಮತ್ತೊಮ್ಮೆ ಜಯಿಸಲಿದೆ ಎಂದು ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ. ಸದ್ಯ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್‌ ತಂಡವು ಆರು ಗೆಲುವುಗಳೊಂದಿಗೆ 12 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಕಳೆದ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ತೋರಿದಂತ ಅದ್ಭುತ ಪ್ರದರ್ಶನವನ್ನು ಈ ಆವೃತ್ತಿಯಲ್ಲೂ ಗುಜರಾತ್ ಟೈಟಾನ್ಸ್ ಪಡೆಯು ಮುಂದುವರೆಸುತ್ತಿದೆ. ತಂಡದಲ್ಲಿ ಸಾಕಷ್ಟು ಪ್ಲೆಕ್ಸಿಬಿಲಿಟಿ ಇದ್ದು, ತಂಡದ ಕೆಲ ಆಟಗಾರರು ಪರಿಸ್ಥಿತಿಗನುಗುಣವಾಗಿ ಸ್ಥಿರ ಪ್ರದರ್ಶನ ತೋರುತ್ತಿರುವುದರಿಂದ ಈ ಬಾರಿ ಕೂಡಾ ಪ್ರತಿಷ್ಠಿತ ಪ್ರಶಸ್ತಿಯನ್ನು ಹಾರ್ದಿಕ್ ಪಡೆ ಜಯಿಸುವ ಸಾಧ್ಯತೆಯಿದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

" ಸದ್ಯದ ತಂಡದ ಪ್ರದರ್ಶನ ಹಾಗೂ ಅಂಕಪಟ್ಟಿಯನ್ನು ಗಮನಿಸಿದರೆ, ನನ್ನ ಪ್ರಕಾರ ಈ ಬಾರಿ ಕೂಡಾ ಗುಜರಾತ್ ಟೈಟಾನ್ಸ್ ತಂಡವು ಪ್ರಶಸ್ತಿ ಜಯಿಸಲಿದೆ. ತಂಡದಲ್ಲಿ ಪರಿಸ್ಥಿತಿಗನುಗುಣವಾಗಿ ಆಡುವ ಆಟಗಾರರಿದ್ದಾರೆ. ಅದರಲ್ಲೂ ಏಳರಿಂದ ಎಂಟು ಆಟಗಾರರು ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ತೋರುತ್ತಾ ಬಂದಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ಆಟಗಾರರು ಸಹ ಆಟಗಾರರ ಪ್ರದರ್ಶನವನ್ನು ಕೊಂಡಾಡುತ್ತಾರೆ ಎಂದು ಸ್ಟಾರ್ ಸ್ಪೋರ್ಟ್ಸ್‌ ವಾಹಿನಿ ಜತೆ ಮಾತನಾಡುವ ವೇಳೆ ತಂಡದ ಯಶಸ್ಸಿನ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ.

ಗುಜರಾತ್ ಟೈಟಾನ್ಸ್ ತಂಡದಲ್ಲಿ ಶುಭ್‌ಮನ್ ಗಿಲ್‌, ವೃದ್ದಿಮಾನ್ ಸಾಹ, ಕನ್ನಡಿಗ ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರ ದಂಡೇ ಇದೆ. ಇನ್ನು ಮೊಹಮ್ಮದ್ ಶಮಿ, ರಶೀದ್ ಖಾನ್, ನೂರ್ ಅಹಮ್ಮದ್ ಹಾಗೂ ಮೋಹಿತ್ ಶರ್ಮಾ ಮಾರಕ ದಾಳಿ ನಡೆಸುತ್ತಿರುವುದು ಗುಜರಾತ್ ಪಡೆಯು ಆತ್ಮವಿಶ್ವಾಸದಿಂದ ತೇಲುವಂತೆ ಮಾಡಿದೆ. ಇನ್ನು ಗುಜರಾತ್ ತಂಡವು ಯಾವುದೇ ಒಬ್ಬ ಆಟಗಾರನ ಮೇಲೆ ಅವಲಂಬಿತರಾಗದೇ ಇರುವುದು ತಂಡದ ಪ್ಲಸ್ ಪಾಯಿಂಟ್ ಎನಿಸಿದೆ.

ಇಡೀ ಶಾಲೆಗೆ ಗೊತ್ತಿತ್ತು ನಾನವರ ಕ್ರಶ್ ಎಂದು..! ಕ್ರಿಕೆಟಿಗ ಅಶ್ವಿನ್‌ ಪತ್ನಿಯ ಇಂಟ್ರೆಸ್ಟಿಂಗ್ ಲವ್‌ ಸ್ಟೋರಿ

ಕಳೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು, ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಎದುರು ಆಘಾತಕಾರಿ ಸೋಲು ಅನುಭವಿಸಿತ್ತು. ಇದೀಗ ಇಂದು(ಮೇ.05) ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕಳೆದ ಆವೃತ್ತಿಯ ಐಪಿಎಲ್‌ ರನ್ನರ್‌ ಅಪ್‌ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದ್ದು, ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ. 

ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡವು ಒಟ್ಟಾರೆ 4 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್‌ ಮೇಲುಗೈ ಸಾಧಿಸಿದೆ. 4 ಪಂದ್ಯಗಳ ಪೈಕಿ ಟೈಟಾನ್ಸ್‌ ತಂಡವು 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ, ರಾಜಸ್ಥಾನ ರಾಯಲ್ಸ್ ತಂಡವು ಒಂದು ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. 

Follow Us:
Download App:
  • android
  • ios