ಸಾಮಾಜಿಕ ಜಾಲತಾಣದಲ್ಲಿ ಹರ್ಷಾ ಬೋಗ್ಲೆ ಕಾಲೆಳೆದ ನೆಟ್ಟಿಗನೀವ್ಯಾಕೆ ಸೂರ್ಯಕುಮಾರ್ ಯಾದವ್ ಅವರನ್ನು ವೈಭವೀಕರಿಸುತ್ತೀರಿ ಎಂದ ನೆಟ್ಟಿಗನಾನು ಕಾಮೆಂಟೇಟರ್, ದೆವ್ವದ ಡಾಕ್ಟರ್ ಅಲ್ಲ ಎಂದು ಕಿಡಿಕಾರಿದ ಬೋಗ್ಲೆ

ನವದೆಹಲಿ(ನ.24): ಕಳೆದ ಹಲವಾರು ವರ್ಷಗಳಿಂದ ಸಾಕಷ್ಟು ಪ್ರಖ್ಯಾತ ಕ್ರೀಡಾ ವಿಶ್ಲೇಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಾಗ, ಸಾಮಾಜಿಕ ಜಾಲತಾಣಗಳಲ್ಲಿ ಕೆಲ ನೆಟ್ಟಿಗರು ಅವರನ್ನು ಕಾಲೆಳೆದಿದ್ದನ್ನು ನಾವೆಲ್ಲ ನೋಡಿದ್ದೇವೆ. ಈ ಪೈಕಿ ಕೆಲ ಕ್ರೀಡಾ ವಿಶ್ಲೇಷಕರು ಸಾಮಾಜಿಕ ಜಾಲತಾಣಗಳ ಮೂಲಕವೇ ತಿರುಗೇಟು ನೀಡಿದರೆ, ಮತ್ತೆ ಕೆಲವರು ಯಾವುದೇ ಪ್ರತಿಕ್ರಿಯೆ ನೀಡದೇ ನೋಡಿಯೂ ನೋಡದಂತೆ ಸುಮ್ಮನಿರುವುದನ್ನು ಕಂಡಿದ್ದೇವೆ.

ಭಾರತದ ಕ್ರಿಕೆಟ್ ಧ್ವನಿ('The Voice of Indian Cricket’) ಎಂದೇ ಬಿಂಬಿತವಾಗಿರುವ ಹರ್ಷಾ ಬೋಗ್ಲೆ, ನ್ಯೂಜಿಲೆಂಡ್ ಎದುರಿನ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಬಾರಿಸಿದ ಸ್ಪೋಟಕ ಶತಕವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದರು. ಇದನ್ನು ನೆಟ್ಟಿಗನೊಬ್ಬ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಟೀಕಿಸಿದ್ದರು. ಇದಕ್ಕೆ ಹರ್ಷಾ ಬೋಗ್ಲೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.

ಭಾನುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ವೃತ್ತಜೀವನದ ಎರಡನೇ ಅಂತಾರಾಷ್ಟ್ರೀಯ ಟಿ20 ಶತಕ ಸಿಡಿಸಿ ಸಂಭ್ರಮಿಸಿದ್ದರು. ಇದರ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಹರ್ಷಾ ಬೋಗ್ಲೆ, ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ನೋಡುವುದೇ ಒಂದು ರೀತಿ ಕಣ್ಣಿಗೆ ಹಬ್ಬ ಎಂದು ಬಣ್ಣಿಸಿದ್ದರು.

ICC T20 Rankings: ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲೇ ಭದ್ರ, 4ನೇ ಸ್ಥಾನಕ್ಕೆ ಜಾರಿದ ಬಾಬರ್ ಅಜಂ..!

ಹರ್ಷಾ ಬೋಗ್ಲೆ ಅವರ ಟ್ವೀಟ್‌ ಕುರಿತಂತೆ ಅಪಸ್ವರವೆತ್ತಿದ ಕ್ರಿಕೆಟಿಗನೊಬ್ಬ, ಸುಖಾಸುಮ್ಮನೇ ಸೂರ್ಯಕುಮಾರ್ ಯಾದವ್ ಅವರನ್ನು ಅತಿಹೆಚ್ಚು ವೈಭವೀಕರಿಸಬೇಡಿ ಎಂದು ಹರ್ಷಾ ಅವರನ್ನು ಕಾಲೆಳೆಯುವ ಪ್ರಯತ್ನ ಮಾಡಿದ್ದರು. ಈ ಟ್ವೀಟ್‌ ಗಮನಿಸಿದ ಹರ್ಷಾ ಬೋಗ್ಲೆ, ಆ ಅಭಿಮಾನಿಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದರು.

Scroll to load tweet…

'ನಾನೊಬ್ಬ ಕಾಮೆಂಟೇಟರ್ ಹೊರತು ದೆವ್ವದ ಡಾಕ್ಟರ್ ಅಲ್ಲ. ನಾನು ಏನು ನಡೆಯುತ್ತದೆಯೋ ಅದನ್ನಷ್ಟೇ ಹೇಳುತ್ತೇನೆ' ಎನ್ನುವ ಮೂಲಕ ಟೀಕಾಕಾರನ ಬಾಯಿ ಮುಚ್ಚಿಸುವಲ್ಲಿ ಹರ್ಷಾ ಬೋಗ್ಲೆ ಯಶಸ್ವಿಯಾಗಿದ್ದಾರೆ.

ಸೂರ್ಯಕುಮಾರ್‌ಗೆ ಕೊಡುವಷ್ಟು ಹಣ ನಮ್ಮಲ್ಲಿಲ್ಲ: ಮ್ಯಾಕ್ಸ್‌ವೆಲ್‌

ಮೆಲ್ಬರ್ನ್‌: ಭಾರತದ ಸ್ಫೋಟಕ ಆಟಗಾರ, ಟಿ20 ರ‍್ಯಾಂಕಿಂಗ್‌‌ನ ನಂ.1 ಬ್ಯಾಟರರ್‌ ಸೂರ್ಯಕುಮಾರ್‌ ಯಾದವ್‌ರನ್ನು ಬಿಗ್‌ಬ್ಯಾಶ್‌ ಟಿ20 ಲೀಗ್‌ಗೆ ಟೂರ್ನಿಗೆ ಕರೆಸುವಷ್ಟು ಹಣ ನಮ್ಮಲ್ಲಿ ಇಲ್ಲ ಎಂದು ಆಸ್ಪ್ರೇಲಿಯಾ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹೇಳಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ಸೂರ್ಯಕುಮಾರ್ ಯಾದವ್ ಬಿಗ್‌ಬ್ಯಾಶ್‌ ಟೂರ್ನಿಗೆ ಒಪ್ಪಂದಕ್ಕೆ ಸಹಿ ಹಾಕಿದರೆ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು. 

ನಮ್ಮ ಬಳಿ ತುಂಬಾ ಹಣವಿಲ್ಲ. ಸೂರ್ಯಕುಮಾರ್ ಯಾದವ್ ಬಿಗ್‌ಬ್ಯಾಶ್‌ಗೆ ಬರಲು ಸಾಧ್ಯವೇ ಇಲ್ಲ. ಅವರನ್ನು ಸೇರಿಸುವುದಾದರೆ ನಾವು ಪ್ರತೀ ಆಟಗಾರರ ಒಪ್ಪಂದ ರದ್ದು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ, ಇಲ್ಲಿ ಏನು ನಡೆಯುತ್ತಿದೆ. ಸೂರ್ಯಕುಮಾರ್ ಯಾದವ್ ಬೇರೆಯದೇ ಗ್ರಹದಲ್ಲಿ ಬ್ಯಾಟ್‌ ಮಾಡುತ್ತಿದ್ದಾರೆ ಎಂದಿದ್ದಾರೆ.