ಈ ಸಲವೂ ಆತಿಥ್ಯ ರಾಷ್ಟ್ರಕ್ಕಿಲ್ಲ ಟಿ20 ವಿಶ್ವಕಪ್ ಎತ್ತಿ ಹಿಡಿಯುವ ಭಾಗ್ಯ!
ವಿಂಡೀಸ್‌ನಲ್ಲಿ ನಡೆದಿದ್ದ 2010ರ ಟೂರ್ನಿಯಲ್ಲಿ ಇಂಗ್ಲೆಂಡ್ ಟ್ರೋಫಿ ಗೆದ್ದಿತ್ತು. 2012ರಲ್ಲಿ ಆತಿಥೇಯ ಶ್ರೀಲಂಕಾ ಫೈನಲ್‌ಗೇರಿದ್ದರೂ, ವಿಂಡೀಸ್ ವಿರುದ್ಧ ಸೋತಿತ್ತು. ಬಾಂಗ್ಲಾದೇಶದಲ್ಲಿ ನಡೆದ 2014ರ ಟೂರ್ನಿಯಲ್ಲಿ ಲಂಕಾ ಪ್ರಶಸ್ತಿ ಗೆದ್ದಿತ್ತು. 2016ರಲ್ಲಿ ಭಾರತದಲ್ಲಿ ನಡೆದಿದ್ದ ಟೂರ್ನಿಯಲ್ಲಿ ವಿಂಡೀಸ್, 2021ರಲ್ಲಿ ಭಾರತ ಆತಿಥ್ಯ ಹಕ್ಕು ಪಡೆದು ಕೋವಿಡ್ ಕಾರಣ ಯುಎಇ, ಒಮಾನ್‌ನಲ್ಲಿ ನಡೆಸಲಾಗಿದ್ದ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿತ್ತು
ಬಾರ್ಬಡೊಸ್: ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸುವ ತಂಡಗಳುಟ್ರೋಫಿ ಗೆಲ್ಲಲು ವಿಫಲವಾಗುವ ಸಂಪ್ರದಾಯ ಈ ಬಾರಿಯೂ ಮುಂದುವರಿದಿದೆ. ಈ ಸಲ ಟೂರ್ನಿಗೆ ಆತಿಥ್ಯ ವಹಿಸಿದ್ದ ಅಮೆರಿಕ ಹಾಗೂ ವೆಸ್ಟ್‌ಇಂಡೀಸ್ ಸೂಪರ್ -8 ಹಂತದಲ್ಲೇ ಟೂರ್ನಿಯಿಂದ ನಿರ್ಗಮಿಸಿವೆ. 2007ರಲ್ಲಿ ದ.ಆಫ್ರಿಕಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ, 2009ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಪಾಕಿಸ್ತಾನ ಚಾಂಪಿಯನ್ ಆಗಿತ್ತು.
ವಿಂಡೀಸ್‌ನಲ್ಲಿ ನಡೆದಿದ್ದ 2010ರ ಟೂರ್ನಿಯಲ್ಲಿ ಇಂಗ್ಲೆಂಡ್ ಟ್ರೋಫಿ ಗೆದ್ದಿತ್ತು. 2012ರಲ್ಲಿ ಆತಿಥೇಯ ಶ್ರೀಲಂಕಾ ಫೈನಲ್‌ಗೇರಿದ್ದರೂ, ವಿಂಡೀಸ್ ವಿರುದ್ಧ ಸೋತಿತ್ತು. ಬಾಂಗ್ಲಾದೇಶದಲ್ಲಿ ನಡೆದ 2014ರ ಟೂರ್ನಿಯಲ್ಲಿ ಲಂಕಾ ಪ್ರಶಸ್ತಿ ಗೆದ್ದಿತ್ತು. 2016ರಲ್ಲಿ ಭಾರತದಲ್ಲಿ ನಡೆದಿದ್ದ ಟೂರ್ನಿಯಲ್ಲಿ ವಿಂಡೀಸ್, 2021ರಲ್ಲಿ ಭಾರತ ಆತಿಥ್ಯ ಹಕ್ಕು ಪಡೆದು ಕೋವಿಡ್ ಕಾರಣ ಯುಎಇ, ಒಮಾನ್‌ನಲ್ಲಿ ನಡೆಸಲಾಗಿದ್ದ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿತ್ತು. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದಟೂರ್ನಿಯಲ್ಲಿ ಇಂಗ್ಲೆಂಡ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.
ಜಿಂಬಾಬ್ವೆ ಎದುರಿನ ಟಿ20 ಸರಣಿಗೆ ಭಾರತ ತಂಡ ಪ್ರಕಟವಾಗುತ್ತಿದ್ದಂತೆಯೇ ಬೇಸರ ಹೊರಹಾಕಿದ ಐಪಿಎಲ್ ಸ್ಟಾರ್..!
ಈ ಬಾರಿ ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ವಿಂಡೀಸ್ ತವರಿನಲ್ಲಿ ಪ್ರಶಸ್ತಿ ಜಯಿಸಿದ ಮೊದಲ ತಂಡ ಎನ್ನುವ ದಾಖಲೆ ಬರೆಯುವ ನಿರೀಕ್ಷೆಯಲ್ಲಿತ್ತು. ಆದರೆ ಆ ನಿರೀಕ್ಷೆ ಈಡೇರಲಿಲ್ಲ.
ವಿಂಡೀಸ್‌ನ ಹೊರದಬ್ಬಿದ.ಆಫ್ರಿಕಾ ಸೆಮೀಸ್‌ಗೆ
ನಾರ್ಥ್ಂಡ್ (ಆ್ಯಂಟಿಗಾ): ಮಹತ್ವದ ಟೂರ್ನಿಗಳ ನಿರ್ಣಾಯಕ ಪಂದ್ಯಗಳಲ್ಲಿ ದುರದೃಷ್ಟಕರವಾಗಿ ಸೋತು ಹೊರಬೀಳುವುದಕ್ಕೆ ಹೆಸರುವಾಸಿಯಾಗಿದ್ದ 'ಚೋಕರ್ಸ್' ಖ್ಯಾತಿಯ ದಕ್ಷಿಣ ಆಫ್ರಿಕಾ ತಂಡ ಈ ಬಾರಿ ಇತಿಹಾಸ ಅಳಿಸಿ ಹಾಕುವ ಪ್ರಯತ್ನದಲ್ಲಿ ಮೊದಲ ಯಶ ಕಂಡಿದೆ. ಟಿ20 ವಿಶ್ವಕಪ್‌ನ ಸೂಪರ್ -8 ಹಂತದ 'ಕ್ವಾರ್ಟರ್ ಫೈನಲ್' ಎಂದೇ ಬಿಂಬಿತಗೊಂಡಿದ್ದ ಪಂದ್ಯದಲ್ಲಿ ಸೋಮವಾರ ವೆಸ್ಟ್ ಇಂಡೀಸ್ ವಿರುದ್ಧ ಡಕ್ವರ್ತ್ ಲೂಯಿಸ್ ನಿಯಮದನ್ವಯ 3 ವಿಕೆಟ್ ರೋಚಕ ಗೆಲುವು ಸಾಧಿಸಿದ ದ.ಆಫ್ರಿಕಾ, ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ವಿಂಡೀಸ್, ಗುಂಪು 2ರಲ್ಲಿ 3ನೇ ಸ್ಥಾನಿಯಾಗಿ ಟೂರ್ನಿಯಿಂದ ಹೊರಬಿದ್ದಿದೆ.
ಮೊದಲು ಬ್ಯಾಟ್ ಮಾಡಿದ ವಿಂಡೀಸ್ 8 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 135 ರನ್. 1.1 ಓವರ್ ಆಗುವಾಗಲೇ ಶಾಯ್ ಹೋಪ್
(00), ಪೂರನ್ (01) ವಿಕೆಟ್ ಕಳೆದುಕೊಂಡ ತಂಡಕ್ಕೆ ರೋಸ್ಟನ್ ಚೇಸ್ (52) ಹಾಗೂ ಕೈಲ್ ಮೇಯರ್ಸ್ (35) ಆಸರೆಯಾದರು. ಆದರೆ ಇಬ್ಬರನ್ನೂ ಪೆವಿಲಿ ಯನ್‌ಗಟ್ಟಿದ ತಬ್ರೇಜ್ ಶಮ್ಸಿ ದ.ಆಫ್ರಿಕಾ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣರಾದರು. 12 ಓವರಲ್ಲಿ 86ಕ್ಕೆ2 ವಿಕೆಟ್ ಕಳೆದುಕೊಂಡಿದ್ದ ತಂಡ ಬಳಿಕ 32 ರನ್‌ಗೆ 6 ವಿಕೆಟ್ ನಷ್ಟಕ್ಕೊಳಗಾಯಿತು. ಶಮ್ಪಿ 27ಕ್ಕೆ 3 ವಿಕೆಟ್ ಪಡೆದರು.
ಜಿಂಬಾಬ್ವೆ ಎದುರಿನ ಟಿ20 ಸರಣಿಗೆ ಭಾರತ ತಂಡ ಪ್ರಕಟವಾಗುತ್ತಿದ್ದಂತೆಯೇ ಬೇಸರ ಹೊರಹಾಕಿದ ಐಪಿಎಲ್ ಸ್ಟಾರ್..!
ದ.ಆಫ್ರಿಕಾ ತನ್ನ ಇನ್ನಿಂಗ್ಸ್ ಆರಂಭಿಸಿ 2 ಓವರಲ್ಲಿ 2 ವಿಕೆಟ್‌ಗೆ 15 ರನ್ ಗಳಿಸಿದ್ದಾಗ ಆಟಕ್ಕೆ ಮಳೆ ಅಡ್ಡಿಪಡಿಸಿತು. ಸುಮಾರು 1 ಗಂಟೆ ಬಳಿಕ ಆಟ ಪುನಾರಂಭಗೊಂಡಿತು. ದ. ಆಫ್ರಿಕಾಕ್ಕೆ 17 ಓವರಲ್ಲಿ 123 ರನ್ ಗುರಿ ನಿಗದಿಪಡಿಸಲಾಯಿತು. 10 ಓವರಲ್ಲಿ 89 ರನ್ ಗಳಿಸಿದ್ದ ತಂಡಕ್ಕೆ ಕೊನೆ 7 ಓವರಲ್ಲಿ ಕೇವಲ 34 ರನ್ ಬೇಕಿತ್ತು. ಆದರೆ ರನ್ ಗಳಿಸಲು ತಿಣುಕಾಡಿ ದಲ್ಲದೇ, ಅನಗತ್ಯ ಹೊಡೆತಗಳಿಗೆ ಕೈಹಾಕಿ ಸತತ ವಿಕೆಟ್ ಕಳೆದುಕೊಂಡಿತು. ಆದರೆ 16ನೇ ಓವರ್‌ನ ಕೊನೆ ಎಸೆತದಲ್ಲಿ ರಬಾಡ ಬೌಂಡರಿ, 17ನೇ ಓವರ್‌ನ ಮೊದಲ ಎಸೆತದಲ್ಲಿ ಯಾನ್ಸನ್ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
10 ವರ್ಷಗಳ ಬಳಿಕ ಆಫ್ರಿಕಾ ಸೆಮೀಸ್‌ಗೆ
ದ.ಆಫ್ರಿಕಾ ಟಿ20 ವಿಶ್ವಕಪ್‌ನಲ್ಲಿ 10 ವರ್ಷ ಬಳಿಕ ಸೆಮಿಫೈನಲ್ ಪ್ರವೇಶಿಸಿತು. 2009ರಲ್ಲಿ ಮೊದಲ ಬಾರಿ, 2014ರಲ್ಲಿ ಕೊನೆ ಬಾರಿ ಸೆಮೀಸ್‌ಗೇರಿದ್ದ ತಂಡ, ಕಳೆದ 3 ಆವೃತ್ತಿಗಳಲ್ಲೂ 2ನೇ ಸುತ್ತಿನಲ್ಲಿ ಹೊರಬಿದ್ದಿತ್ತು.
ಸ್ಕೋರ್:
ವಿಂಡೀಸ್ 20 ಓವರಲ್ಲಿ 135/8 (ಚೇಸ್ 52, ಮೇಯರ್ಸ್ 35, ಶಮಿ 3-27)
ದ.ಆಫ್ರಿಕಾ 16.1 ಓವರಲ್ಲಿ 124/7 (ಸ್ಟಬ್ 29, ಕ್ಲಾಸೆನ್ 22, ಯಾನ್ಸನ್ 21*, ಚೇಸ್ 3-12)
ಪಂದ್ಯಶ್ರೇಷ್ಠ: ತಕ್ರೇಜ್ ಶಮ್ಸಿ