Asianet Suvarna News Asianet Suvarna News

ನನ್ನ ಸಾಧನೆಗಳು ಯುವತಿಯರಿಗೆ ಸ್ಪೂರ್ತಿಯಾಗಲಿ : ಮಿಥಾಲಿ ರಾಜ್!

*ನೀವು ಕನಸು ಕಂಡಾಗ ಮಾತ್ರ ನೀವು ಅದನ್ನು ನನಸಾಗಿಸಬಹುದು!
*ನಾನು ಯಾವಾಗಲೂ ನೀಲಿ ಜರ್ಸಿಯನ್ನು ಧರಿಸಲು ಬಯಸುತ್ತೇನೆ
*ನನ್ನ ಸಾಧನೆಗಳು ಇತರ ಯುವತಿಯರಿಗೂ ಸ್ಫೂರ್ತಿಯಾಗಲಿ: ರಾಜ್

Hope My Journey Inspires Young Girls To Pursue Their Dreams said Khel Ratna Mithali Raj via twitter mnj
Author
Bengaluru, First Published Nov 14, 2021, 1:35 AM IST
  • Facebook
  • Twitter
  • Whatsapp

ನವದೆಹಲಿ(ನ.13): ಪ್ರತಿಷ್ಠಿತ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು (Khel Ratna Award) ಪಡೆದ ಮೊದಲ ಮಹಿಳಾ ಕ್ರಿಕೆಟ್‌ ಆಟಗಾರ್ತಿ, ಮಿಥಾಲಿ ರಾಜ್ (Mithali Raj) ಶನಿವಾರ ತಮ್ಮ ಸಾಧನೆಗಳು ದೇಶದ ಯುವತಿಯರಿಗೆ ಮಾದರಿಯಾಗಲಿ  ಎಂದು ಹೇಳಿದ್ದಾರೆ. ಯುವತಿಯರಿಗೆ ತಮ್ಮ ಕನಸುಗಳನ್ನು ಮುಂದುವರಿಸಲು ಮತ್ತು ಬದಲಾವಣೆ ನಿಟ್ಟಿನಲ್ಲಿ ಇದು ಪ್ರೇರೇಪಿಸಲಿ ಎಂದು ಅವರು ಆಶಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ (Ram Nath Kovind) ಅವರಿಂದ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನವನ್ನು ಸ್ವೀಕರಿಸಿದ 12 ಕ್ರೀಡಾಪಟುಗಳಲ್ಲಿ 38 ವರ್ಷದ ಭಾರತೀಯ ಮಹಿಳಾ ಕ್ರಿಕೆಟ್‌ನ ಧೀಮಂತ ಆಟಗಾರ್ತಿ ಮಿಥಾಲಿ ಕೂಡ ಒಬ್ಬರು. 

ನೀರಜ್ ಚೋಪ್ರಾ, ಲೊವ್ಲಿನಾ ಸೇರಿ 12 ಮಂದಿಗೆ ಖೇಲ್ ರತ್ನ ಪ್ರಶಸ್ತಿ ಪ್ರದಾನ!

"ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಮಹಿಳೆಯರು (Women) ಶಕ್ತಿಯುತ ಬದಲಾವಣೆ ತರಬಲ್ಲರು  ಮತ್ತು ಅವರು ಮೆಚ್ಚುಗೆಯನ್ನು ಪಡೆದಾಗ, ಅದು ತಮ್ಮ ಕನಸುಗಳನ್ನು ಸಾಧಿಸಲು ಬಯಸುವ  ಹಲವಾರು ಇತರ ಮಹಿಳೆಯರಲ್ಲಿ ಬದಲಾವಣೆಯನ್ನು ಪ್ರೇರೇಪಿಸುತ್ತದೆ" ಎಂದು ರಾಜ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೀವು ಕನಸು ಕಂಡಾಗ ಮಾತ್ರ ನೀವು ಅದನ್ನು ನನಸಾಗಿಸಬಹುದು!

"ನನ್ನ ಜೀವನಗಾಥೆ ದೇಶದಾದ್ಯಂತದ ಯುವತಿಯರಿಗೆ ಅವರ ಕನಸುಗಳನ್ನು (Dream) ಮುಂದುವರಿಸಲು ಪ್ರೇರೇಪಿಸುತ್ತದೆ ಮತ್ತು ನೀವು ಕನಸು ಕಂಡಾಗ ಮಾತ್ರ ನೀವು ಅದನ್ನು ನನಸಾಗಿಸಬಹುದು ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ." ದೇಶವನ್ನು ಪ್ರತಿನಿಧಿಸುವುದು ತನ್ನ ಕನಸಾಗಿತ್ತು ಮತ್ತು 1999 ರಿಂದ ಆರಂಭಗೊಂಡು ಎರಡು ದಶಕಗಳ ಸುದೀರ್ಘವೃತ್ತಿಜೀವನದಲ್ಲಿ ತಾನು ಮಾಡಿದ ಕಠಿಣ ಪರಿಶ್ರಮದ  ಫಲವೇ ಈ ಪ್ರಶಸ್ತಿಯಾಗಿದೆ ಎಂದು ಅವರು ಹೇಳಿದರು.

 

 

ನಾನು ಯಾವಾಗಲೂ ನೀಲಿ ಜರ್ಸಿಯನ್ನು ಧರಿಸಲು ಬಯಸುತ್ತೇನೆ

"ನಾನು ಬೆಳೆಯುತ್ತಿರುವಾಗ ಮತ್ತು ಈ ಅದ್ಭುತ ಆಟವನ್ನು ಆಡಲು ಕಲಿಯುತ್ತಿರುವಾಗ, ನನ್ನ ದೇಶವನ್ನು ಪ್ರತಿನಿಧಿಸುವುದು ನನ್ನ ಕನಸಾಗಿತ್ತು. ನಾನು ಯಾವಾಗಲೂ ನೀಲಿ ಜರ್ಸಿಯನ್ನು (Blue Jersey) ಧರಿಸಲು ಬಯಸುತ್ತೇನೆ, ಅದು ನಮ್ಮ ರಾಷ್ಟ್ರದ ಹೆಮ್ಮೆಯನ್ನು ಪ್ರತಿನಿಧಿಸುತ್ತದೆ. "ಪ್ರತಿಯೊಬ್ಬರು ಯಶಸ್ಸಿಗಾಗಿ ಶ್ರಮಿಸುತ್ತಾರೆ ಆದರೆ ಈ ಮಧ್ಯೆ ಹಲವಾರು ಅಸ್ಥಿರತೆ ಮತ್ತು ಕಷ್ಟಗಳನ್ನು ಅನುಭವಿಸುತ್ತಾರೆ,  ಯಶಸ್ಸು ಬಂದಾಗ, ಅದು ಪ್ರತಿದಿನ ಅವರ ಪಟ್ಟ ಶ್ರಮದ ಫಲವಾಗಿರುತ್ತದೆ" ಎಂದು ಮಿಥಾಲಿ ಹೇಳಿದ್ದಾರೆ. ಮಿಥಾಲಿ ರಾಜ್‌ ಒಟ್ಟು 12 ಟೆಸ್ಟ್‌ಗಳು, 220 ODIಗಳು ಮತ್ತು 89 T20I ಗಳಲ್ಲಿ ಆಡಿದ್ದಾರೆ.

ಏಕದಿನ ನಾಯಕತ್ವದಿಂದಲೂ ಕೊಹ್ಲಿ ದೂರ, ಸುಳಿವು ನೀಡಿದ ರವಿ ಶಾಸ್ತ್ರಿ!

"ಈ ಪ್ರಶಸ್ತಿಯು ಪರಿಶ್ರಮ ಪಟ್ಟ ಸಮಯಗಳ ಪ್ರತಿಫಲ , ಆಟಗಾರ್ತಿ ತನ್ನ ಇಡೀ ಜೀವನದಲ್ಲಿ ಮಾಡುವ ಎಲ್ಲಾ ತ್ಯಾಗಗಳ ಫಲಿತಾಂಶ. ನಾನು ಕ್ರಿಕೆಟ್‌ಗೆ ನನ್ನಲ್ಲಿದ್ದ ಎಲ್ಲವನ್ನೂ ನೀಡಲು ಬಯಸುತ್ತೇನೆ ಮತ್ತು ಈ ಮಹತ್ವದ ಸ್ಥಾನವನ್ನು ಪಡೆಯಲು ನಾನು ಹೆಚ್ಚು ಕಷ್ಟಪಟ್ಟಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದು ಮಿಥಾಲಿ ಹೇಳಿದ್ದಾರೆ. 

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ - National Sports Award!

ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಹಾಗೂ 35 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಪ್ರಕಟಿಸಿತ್ತು. ಐವರು ಕೋಚ್‌ಗಳಿಗೆ  ದ್ರೋಣಾಚಾರ್ಯ ಪ್ರಶಸ್ತಿ ಹಾಗೂ ಟೊಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಚಿನ್ನದ ಪದಕ ಸಾಧನೆ ಮಾಡಿದ ನೀರಜ್ ಚೋಪ್ರಾ(Neeraj Chopra) ಸೇರಿದಂತೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ಪ್ರಕಟಿಸಿತ್ತು. 

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶನಿವಾರ ನವದೆಹಲಿಯಲ್ಲಿ ಕ್ರೀಡಾ ಪ್ರಶಸ್ತಿ ಪ್ರದಾನ (National Sports Award) ಮಾಡಿದ್ದಾರೆ. ಶನಿವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ (Ramanath Kovind) ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್ (Tokyo Olympics) 2020 ರಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಸೇರಿದಂತೆ ಒಟ್ಟು 12 ಆಟಗಾರರಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ.

Follow Us:
Download App:
  • android
  • ios