Asianet Suvarna News Asianet Suvarna News

ನಾಲ್ಕುವರೆ ತಿಂಗಳಲ್ಲಿ 22 ಕೋವಿಡ್ ಪರೀಕ್ಷೆಗೆ ಒಳಗಾಗಿದ್ದೇನೆ: ಸೌರವ್ ಗಂಗೂಲಿ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕಳೆದ ನಾಲ್ಕುವರೆ ತಿಂಗಳಲ್ಲಿ 20ಕ್ಕೂ ಹೆಚ್ಚು ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Have undergone 22 Coronavirus tests in past four months Says BCCI president Sourav Ganguly kvn
Author
Mumbai, First Published Nov 25, 2020, 12:21 PM IST

ಮುಂಬೈ(ನ.25): ಕಳೆದ ನಾಲ್ಕೂವರೆ ತಿಂಗಳಲ್ಲಿ 22 ಬಾರಿ ಕೋವಿಡ್‌-19 ಪರೀಕ್ಷೆಗೆ ಒಳಗಾಗಿರುವುದಾಗಿ ಬಿಸಿಸಿಐ ಅಧ್ಯಕ್ಷ, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಹೇಳಿದ್ದಾರೆ. 

ಮಂಗಳವಾರ ಖಾಸಗಿ ಸಂಸ್ಥೆಯೊಂದರ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ಐಪಿಎಲ್‌ ಆಯೋಜನೆ ವೇಳೆ ತಾವು ವಹಿಸಿದ ಎಚ್ಚರಿಕೆ ಕುರಿತು ತಿಳಿಸಿದರು. ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೂ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಆಯೋಜನೆಗಾಗಿ ಗಂಗೂಲಿ ಅರಬ್ಬರ ನಾಡಿನಲ್ಲಿ ನೆಲೆಸಿದ್ದರು.

ನಾನು ನಿಮಗೊಂದು ವಿಚಾರವನ್ನು ಹೇಳಲೇ ಬೇಕು. ಕಳೆದ ನಾಲ್ಕುವರೆ ತಿಂಗಳ ಅವಧಿಯಲ್ಲಿ 22 ಬಾರಿ ಕೊರೋನಾ ಟೆಸ್ಟ್‌ಗೆ ಒಳಗಾಗಿದ್ದೇನೆ.ಅದೃಷ್ಟವಶಾತ್ ಒಮ್ಮೆಯೂ ನನಗೆ ಕೊರೋನಾ ಪಾಸಿಟಿವ್ ಬಂದಿಲ್ಲ. ನನ್ನ ಸುತ್ತಮುತ್ತ ಕೊರೋನಾ ಪ್ರಕರಣಗಳಿದಿದ್ದರಿಂದ ನಾನು ಹೆಚ್ಚು ಹೆಚ್ಚು ಕೋವಿಡ್ ಟೆಸ್ಟ್‌ಗೆ ಒಳಗಾಗಿದ್ದೆ ಎಂದು ಬಿಸಿಸಿಐ ಬಾಸ್ ಸೌರವ್ ಗಂಗೂಲಿ ಹೇಳಿದ್ದಾರೆ.

ಸ್ಟೀವ್ ಸ್ಮಿತ್‌ ಔಟ್‌ ಮಾಡೋದು ಹೇಗೆ? ಸಚಿನ್‌ ಕೊಟ್ರು ಉಪಯುಕ್ತ ಸಲಹೆ

ಇದೇ ವೇಳೆ ಸೌರವ್ ಗಂಗೂಲಿ ಟೀಂ ಇಂಡಿಯಾ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿರುವುದು ತಂಡಕ್ಕೆ ಸಾಕಷ್ಟು ಉಪಯೋಗವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ನವೆಂಬರ್ 27ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ.

Follow Us:
Download App:
  • android
  • ios