Asianet Suvarna News Asianet Suvarna News

ಸ್ಟೀವ್ ಸ್ಮಿತ್‌ ಔಟ್‌ ಮಾಡೋದು ಹೇಗೆ? ಸಚಿನ್‌ ಕೊಟ್ರು ಉಪಯುಕ್ತ ಸಲಹೆ

ಆಸ್ಟ್ರೇಲಿಯಾದ ನಂಬಿಕಸ್ಥ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಔಟ್ ಮಾಡುವುದು ಹೇಗೆ ಎನ್ನುವ ಸಲಹೆಯನ್ನು ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡುಲ್ಕರ್ ಭಾರತೀಯ ಬೌಲರ್‌ಗಳಿಗೆ ಕಿವಿ ಮಾತು ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Bowl in the fifth stump line to Steven Smith Says Sachin Tendulkar kvn
Author
Mumbai, First Published Nov 25, 2020, 10:55 AM IST

ಮುಂಬೈ(ನ.25): ಮುಂಬರುವ ಆಸ್ಪ್ರೇಲಿಯಾ ವಿರುದ್ಧದ ಸರಣಿಯಲ್ಲಿ ತಾರಾ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ ಅವರನ್ನು ಔಟ್‌ ಮಾಡಲು ಭಾರತೀಯ ಬೌಲರ್‌ಗಳು 5ನೇ ಸ್ಟಂಪ್‌ ಲೈನ್‌ನಲ್ಲಿ ಬೌಲ್‌ ಮಾಡಬೇಕು ಎಂದು ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಸಲಹೆ ನೀಡಿದ್ದಾರೆ. 

‘ಸ್ಮಿತ್‌ ಬ್ಯಾಟಿಂಗ್‌ ಶೈಲಿ ಅಸಾಂಪ್ರದಾಯಿಕವಾಗಿದೆ. ಟೆಸ್ಟ್‌ ಪಂದ್ಯಗಳಲ್ಲಿ ಸಾಮಾನ್ಯವಾಗಿ ನಾವು ಬೌಲರ್‌ಗಳಿಗೆ ಆಫ್‌ಸ್ಟಂಪ್‌ನಿಂದ ಆಚೆ ಇಲ್ಲವೇ 4ನೇ ಸ್ಟಂಪ್‌ ಲೈನ್‌ನಲ್ಲಿ ಬೌಲ್‌ ಮಾಡಲು ಹೇಳುತ್ತೇವೆ. ಆದರೆ ಸ್ಮಿತ್‌ ಕ್ರೀಸ್‌ನಲ್ಲಿ ಹೆಚ್ಚು ಓಡಾಡುವ ಕಾರಣ, ಅವರಿಗೆ 5ನೇ ಸ್ಟಂಪ್‌ ಲೈನ್‌ನಲ್ಲಿ ಬೌಲ್‌ ಮಾಡಿದರೆ ಔಟ್‌ ಮಾಡಬಹುದು. ಮಾನಸಿಕವಾಗಿ ಬೌಲರ್‌ಗಳು ಸಿದ್ಧರಾಗಬೇಕು’ ಎಂದು ಸಚಿನ್‌ ಹೇಳಿದ್ದಾರೆ.

ಡಿಸೆಂಬರ್ 17ರಿಂದ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ಆರಂಭವಾಗಿದೆ. ಅಡಿಲೇಡ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯ ಹಗಲು-ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ಸರಿಯಾದ ಸಮಯದಲ್ಲಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವುದು ಮಹತ್ವದ್ದಾಗುತ್ತದೆ ಎಂದು ಹೇಳಿದ್ದಾರೆ. ನಸುಬೆಳಕಿನಲ್ಲಿ ಬೌಲರ್‌ಗಳಿಗೆ ಪಿಚ್ ಹೆಚ್ಚು ನೆರವಾಗುವ ಸಾಧ್ಯತೆಯಿದೆ. ಎದುರಾಳಿ ತಂಡವನ್ನು ಸಂಜೆ ಬ್ಯಾಟಿಂಗ್‌ ಮಾಡಲು ಅನುವು ಮಾಡಿಕೊಟ್ಟು 2-3 ವಿಕೆಟ್ ಪಡೆದರೆ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದು ಎಂದು ಸಚಿನ್ ತೆಂಡುಲ್ಕರ್ ಅಭಿಪ್ರಾಯ ಪಟ್ಟಿದ್ದಾರೆ 

ವಿರಾಟ್ ಕೊಹ್ಲಿ ಪಡೆಗೆ 92ರ ವಿಶ್ವಕಪ್‌ ಮಾದರಿ ಜೆರ್ಸಿ!

ಟೀಂ ಇಂಡಿಯಾ ಹಿಂದೆಂದಿಗಿಂತಲೂ ಬಲಿಷ್ಠ ಹಾಗೂ ಸಮತೋಲಿತ ಬೌಲಿಂಗ್ ಪಡೆಯನ್ನು ಹೊಂದಿದ್ದು, ಟೆಸ್ಟ್‌ ಸರಣಿಯಲ್ಲಿ ಅಸ್ಟ್ರೇಲಿಯಾದ 20 ವಿಕೆಟ್‌ಗಳನ್ನು ಕಬಳಿಸುವ ಸಾಮರ್ಥ್ಯವನ್ನು ಹೊಂದಿದೆ.

Follow Us:
Download App:
  • android
  • ios