Asianet Suvarna News Asianet Suvarna News

ಕಣ್ಮನ ಸೆಳೆಯುತ್ತಿದೆ ಪಾಂಡ್ಯ ಪತ್ನಿ ನತಾಶ ಡೈಮಂಡ್ ರಿಂಗ್..!

ಇದೀಗ ಈ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದು ಕ್ರೀಡಾ ಪ್ರೇಮಿಗಳಿಗೆ ಗೊತ್ತೇ ಇರುವ ವಿಚಾರ. ಆದರೆ ಹೊಸ ವಿಷ್ಯಾ ಏನಪ್ಪ ಅಂದ್ರೆ ನತಾಶ ಎಡಗೈ ಬೆರಳಿಗೆ ಪಾಂಡ್ಯ ತೊಡಿಸಿದ್ದ ವಜ್ರದುಂಗುರ ಇದೀಗ ಎಲ್ಲರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ.  ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Hardik Pandya Wife Natasa Stankovic Flaunts Her engagement Diamond Ring
Author
New Delhi, First Published Jul 13, 2020, 7:17 PM IST

ನವದೆಹಲಿ(ಜು.13): ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶ ಸ್ಟಾಂಕೋವಿಚ್ 2020ನೇ ವರ್ಷವನ್ನು ಭರ್ಜರಿಯಾಗಿಯೇ ಎಂಜಾಯ್ ಮಾಡುತ್ತಿದ್ದಾರೆ. 2020ನೇ ವರ್ಷದ ಮೊದಲ ದಿನವೇ ನತಾಶಗೆ ರಿಂಗ್ ತೊಡಿಸುವ ಮೂಲಕ ಹಾರ್ದಿಕ್ ಪಾಂಡ್ಯ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.

ಇದೀಗ ಈ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದು ಕ್ರೀಡಾ ಪ್ರೇಮಿಗಳಿಗೆ ಗೊತ್ತೇ ಇರುವ ವಿಚಾರ. ಆದರೆ ಹೊಸ ವಿಷ್ಯಾ ಏನಪ್ಪ ಅಂದ್ರೆ ನತಾಶ ಎಡಗೈ ಬೆರಳಿಗೆ ಪಾಂಡ್ಯ ತೊಡಿಸಿದ್ದ ವಜ್ರದುಂಗುರ ಇದೀಗ ಎಲ್ಲರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ. ಕೆಲವು ತಿಂಗಳ ಹಿಂದಷ್ಟೇ ನತಾಶ-ಪಾಂಡ್ಯ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದರು.

Hardik Pandya Wife Natasa Stankovic Flaunts Her engagement Diamond Ring

Hardik Pandya Wife Natasa Stankovic Flaunts Her engagement Diamond Ring

ಇದೀಗ ಜುಲೈ 10, 2020ರಂದು ಹಾರ್ದಿಕ್ ಪಾಂಡ್ಯ ಪತ್ನಿ ನತಾಶ ಇನ್‌ಸ್ಟಾಗ್ರಾಂನಲ್ಲಿ ಸೆಲ್ಫಿಯೊಂದನ್ನು ಪೋಸ್ಟ್‌ ಮಾಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಮುದ್ದಾದ ಕಂಗಳ ಜತೆ ಅಧ್ಭುತವಾದ ವಜ್ರದುಂಗುರದ ಫೋಟೋ ಪೋಸ್ಟ್ ಮಾಡಿದ್ದಾರೆ. 

Hardik Pandya Wife Natasa Stankovic Flaunts Her engagement Diamond Ring

Hardik Pandya Wife Natasa Stankovic Flaunts Her engagement Diamond Ring

ಕೊರೋನಾ ಭೀತಿ ಹಾಗೂ ಲಾಕ್‌ಡೌನ್ ನಿಂದಾಗಿ ದೇಶಾದ್ಯಂತ ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿವೆ. ಈ ವರ್ಷ ಐಪಿಎಲ್ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 
 

Follow Us:
Download App:
  • android
  • ios