ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ , ಸ್ಪಿನ್ನರ್ ಹರ್ಭಜನ್ ಸಿಂಗ್ ಮನವಿ ಮಾಡಿದ್ದಾರೆ. ಇಷ್ಟೇ ಅಲ್ಲ ಗಂಗೂಲಿ ನಿರ್ಧಾರ ಭಾರತೀಯ ಕ್ರಿಕೆಟ್‌ಗೆ ಒಳಿತಾಗಲಿದೆ ಎಂದಿದ್ದಾರೆ. ಹಾಗಾದರೆ ಭಜ್ಜಿ ಮನವಿ ಏನು? ಇಲ್ಲಿದೆ.

ಮುಂಬೈ(ನ.25): ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಹಲವು ಮನವಿಗಳು ಬಂದಿದೆ. ಕ್ರಿಕೆಟ್ ಅಭಿವೃದ್ದಿ, ಬದಲಾವಣೆ ಸೇರಿದಂತೆ ಮಾಜಿ ಕ್ರಿಕೆಟಿಗರು ಗಂಗೂಲಿಗೆ ಮನವಿ ಮಾಡಿದ್ದಾರೆ. ಇದೀಗ ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್ ವಿಶೇಷ ಮನವಿ ಮಾಡಿದ್ದಾರೆ. ಕಳೆದೆರಡು ವರ್ಷದಿಂದ ರೋಸಿಹೋಗಿರುವ ಭಜ್ಜಿ, ಕೊನೆಗೆ ಪರಿಹಾರಕ್ಕಾಗಿ ದಾದಾ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಕಲಿತಿದ್ದು ನಿಮ್ಮಿಂದಲೇ; ಸೌರವ್ ಗಂಗೂಲಿಗೆ ಪುತ್ರಿ ಟಕ್ಕರ್!

ಹರ್ಭಜನ್ ಸಿಂಗ್ ಧನಿ ಎತ್ತಿರುವುದು ಟೀಂ ಇಂಡಿಯಾ ಆಯ್ಕೆ ಸಮಿತಿ ವಿರುದ್ಧ. ಆಯ್ಕೆ ಸಮಿತಿ ಸದಸ್ಯರ ಎಡವಟ್ಟಿನಿಂದ ಹಲವು ಕ್ರಿಕೆಟಿಗರ ಕರಿಯರ್ ಅಂತ್ಯವಾಗಿದೆ. ದೇಸಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರೂ ಕೆಲ ಕ್ರಿಕೆಟಿಗರಿಗೆ ಅವಕಾಶವೇ ಸಿಗುತ್ತಿಲ್ಲ. ಇತ್ತೀಚೆಗಷ್ಟೇ ಮಾಜಿ ಸಚಿವ ಶಶಿ ತರೂರ್ ಸಂಜು ಸಾಮ್ಸನ್ ನಿರ್ಲಕ್ಷ್ಯ ಕುರಿತು ಅಸಮಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಹರ್ಭಜನ್ ಸಿಂಗ್ ಧನಿ ಗೂಡಿಸಿದ್ದಾರೆ.

Scroll to load tweet…

ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷನ ಮೆಚ್ಚಿಸಲು ಹೇಳಿಕೆ ನೀಡಬೇಡಿ; ಕೊಹ್ಲಿಗೆ ಗವಾಸ್ಕರ್ ತಿರುಗೇಟು!

ಆಯ್ಕೆ ಸಮಿತಿಯಲ್ಲಿ ಬಲಿಷ್ಠ ಹಾಗೂ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸದಸ್ಯರು ಆಗತ್ಯ. ಆಯ್ಕೆ ಸಮಿತಿ ಸದಸ್ಯರನ್ನು ಬದಲಾಯಿಸಬೇಕಿದೆ. ನೂತನ ಅಧ್ಯಕ್ಷ ಸೌರವ್ ಗಂಗೂಲಿ ಬದಲಾವಣೆ ತರುತ್ತಾರೆ ಅನ್ನೋ ನಿರೀಕ್ಷೆಯಲ್ಲಿ ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ತಂಡ ಆಯ್ಕೆಯಾದಾಗ ಶಶಿ ತರೂರ್ ಅಸಮಧಾನ ಹೊರಹಾಕಿದ್ದರು. ಬಾಂಗ್ಲಾ ಸರಣಿಯಲ್ಲಿ ಬೆಂಚ್ ಕಾದಿದ್ದ ಸಾಮ್ಸನ್, ವಿಂಡೀಸ್ ಸರಣಿಗೆ ಆಯ್ಕೆಯಾಗಿಲ್ಲ. ಸಮಿತಿ ಲಾಜಿಕ್ ಅರ್ಥವಾಗುತ್ತಿಲ್ಲ. ಪ್ರದರ್ಶನ ನೋಡಿ ಆಯ್ಕೆ ಮಾಡುತ್ತಾರೋ ಇಲ್ಲಾ ಹೃದಯ ನೋಡಿ ಆಯ್ಕೆ ಮಾಡುತ್ತಾರೋ ಎಂದು ಟ್ವೀಟ್ ಮಾಡಿದ್ದರು.

Scroll to load tweet…