ನೀವು ಯಾವ ನಶೆಯಲ್ಲಿ ಮಾತನಾಡುತ್ತಿದ್ದೀರಾ? 'ಮತಾಂತರದ' ವಿಚಾರವಾಗಿ ಇಂಜಮಾಮ್ ಮೇಲೆ ಕಿಡಿಕಾರಿದ ಭಜ್ಜಿ
ಹರ್ಭಜನ್ ಸಿಂಗ್ ಕಳೆದ 2021ರ ಡಿಸೆಂಬರ್‌ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದೀಗ ಭಜ್ಜಿ ನಿವೃತ್ತಿಯ ಬಳಿಕ ಹಲವು ಟಿವಿಗಳಲ್ಲಿ ಕ್ರಿಕೆಟ್ ವಿಶ್ಲೇಷಕರಾಗಿ ಗಮನ ಸೆಳೆಯತ್ತಿದ್ದಾರೆ. ಇನ್ನು ಹರ್ಭಜನ್ ಸಿಂಗ್ ತವರಿನಲ್ಲೇ ನಡೆಯತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ವೀಕ್ಷಕವಿವರಣೆಗಾರರಾಗಿ ಕೂಡಾ ಕಾಣಿಸಿಕೊಳ್ಳುತ್ತಿದ್ದಾರೆ.
ಮುಂಬೈ(ನ.15): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಇಸ್ಲಾಂಗೆ ಮತಾಂತರವಾಗುವ ಹೊಸ್ತಿಲಲ್ಲಿದ್ದರು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್, ಅಚ್ಚರಿಯ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಇದೀಗ ಇಂಜಿ ಹೇಳಿಕೆಗೆ ಭಜ್ಜಿ ಖಡಕ್ ಆಗಿ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣವಾದ ಎಕ್ಸ್(ಟ್ವಿಟರ್)ನಲ್ಲಿ ಮಾಜಿ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ ಕಟು ಶಬ್ದಗಳಲ್ಲಿ ಪಾಕಿಸ್ತಾನದ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಿಯನ್ನು ಲೇವಡಿ ಮಾಡಿದ್ದಾರೆ.
ಇಂಜಮಾಮ್ ಉಲ್ ಹಕ್ ಅವರು ಮಾತನಾಡಿರುವ ವಿಡಿಯೋಗೆ ಎಕ್ಸ್ ಮೂಲಕವೇ ಪ್ರತಿಕ್ರಿಯೆ ನೀಡಿರುವ ಹರ್ಭಜನ್ ಸಿಂಗ್, "ಇವರು ಯಾವ ನಶೆಯಲ್ಲಿ ಮಾತನಾಡುತ್ತಿದ್ದಾರೆ ಅರ್ಥವಾಗುತ್ತಿಲ್ಲ. ನಾನೊಬ್ಬ ಹೆಮ್ಮೆಯ ಭಾರತೀಯ ಹಾಗೂ ಹೆಮ್ಮೆಯ ಸಿಖ್ ಆಗಿದ್ದೇನೆ. ಈ ಕೆಲಸವಿಲ್ಲದವರು ಏನು ಬೇಕಾದರೂ ಮಾತನಾಡುತ್ತಾರೆ" ಎಂದು ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ.
ವಿಡಿಯೋದಲ್ಲಿ ಇಂಜಮಾಮ್ ಉಲ್ ಹಕ್, ಪಾಕಿಸ್ತಾನದ ಪ್ರಖ್ಯಾತ ಇಸ್ಲಾಮಿಕ್ ಮೌಲ್ವಿಯಾದ ಮೌಲಾನ ತಾರಿಖ್ ಜಮೀಲ್ ಅವರ ಬಗ್ಗೆ ಮಾತನಾಡುತ್ತಾ, "ನಾವು ಕ್ರಿಕೆಟ್ ಆಡುವ ಸಂದರ್ಭದಲ್ಲಿ ಮೌಲಾನ ತಾರಿಖ್ ಜಮೀಲ್ ನಮ್ಮ ಜತೆ ಮಾತನಾಡುತ್ತಿದ್ದರು. ಸಂಜೆ ವೇಳೆ ಆಟಗಾರರಿಗೆ ಇಸ್ಲಾಮಿನ ಪ್ರವಚನ ನೀಡುತ್ತಿದ್ದರು. ನಾವು ಆ ಸಂದರ್ಭದಲ್ಲಿ ಇರ್ಫಾನ್ ಪಠಾಣ್, ಮೊಹಮ್ಮದ್ ಕೈಫ್ ಹಾಗೂ ಜಹೀರ್ ಖಾನ್ ಅವರಿಗೆ ನಮ್ಮ ಜತೆ ನಮಾಜ್ ಮಾಡಲು ಆಹ್ವಾನಿಸುತ್ತಿದ್ದೆವು."
ಭಾರತದ ಸೆಮಿಫೈನಲ್ ಹಾದಿ; ಇಲ್ಲಿದೆ ಟೀಂ ಇಂಡಿಯಾ ವಿಶ್ವಕಪ್ ಹೆಜ್ಜೆಗುರುತು
ಈ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಸೇರಿದಂತೆ ಭಾರತದ ಇತರೇ ಆಟಗಾರರು ಬರುತ್ತಿದ್ದರು. ಅವರು ನಮಾಜ್ ಮಾಡುತ್ತಿರಲಿಲ್ಲ, ಆದರೆ ತಾರಿಖ್ ಜಮೀಲ್ ಅವರ ಪ್ರವಚನಗಳನ್ನು ಕೇಳುತ್ತಿದ್ದರು. ಈ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ನನ್ನ ಬಳಿ ಬಂದು ನಾನೂ ಕೂಡಾ ಮೌಲಾನ ಅವರ ಮಾತುಗಳ ಕೇಳಬೇಕು ಅನಿಸುತ್ತಿದೆ ಎಂದು ಹೇಳಿದ್ದರು ಎಂದು ಇಂಜಮಾಮ್ ಉಲ್ ಹಕ್ ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹರ್ಭಜನ್ ಸಿಂಗ್ ಕಳೆದ 2021ರ ಡಿಸೆಂಬರ್‌ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದೀಗ ಭಜ್ಜಿ ನಿವೃತ್ತಿಯ ಬಳಿಕ ಹಲವು ಟಿವಿಗಳಲ್ಲಿ ಕ್ರಿಕೆಟ್ ವಿಶ್ಲೇಷಕರಾಗಿ ಗಮನ ಸೆಳೆಯತ್ತಿದ್ದಾರೆ. ಇನ್ನು ಹರ್ಭಜನ್ ಸಿಂಗ್ ತವರಿನಲ್ಲೇ ನಡೆಯತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ವೀಕ್ಷಕವಿವರಣೆಗಾರರಾಗಿ ಕೂಡಾ ಕಾಣಿಸಿಕೊಳ್ಳುತ್ತಿದ್ದಾರೆ.
ವಿಶ್ವಕಪ್ ಲೀಗ್ ಹಂತದ ಶ್ರೇಷ್ಠ ತಂಡ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ..! ವಿರಾಟ್ ಕೊಹ್ಲಿಗೆ ನಾಯಕ ಪಟ್ಟ
ಇನ್ನು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್, ಪಿಸಿಬಿ ಆಯ್ಕೆ ಸಮಿತಿ ಮುಖ್ಯಸ್ಥರಾಗಿ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡವನ್ನು ಆಯ್ಕೆ ಮಾಡಿದ್ದರು. ಆದರೆ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ನೀರಸ ಪ್ರದರ್ಶನ ತೋರುವ ಮೂಲಕ ಲೀಗ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿತು. ಇದರ ಬೆನ್ನಲ್ಲೇ ಇತ್ತೀಚೆಗಷ್ಟೇ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಇಂಜಮಾಮ್ ಉಲ್ ಹಕ್ ರಾಜೀನಾಮೆ ನೀಡಿದ್ದರು.