Asianet Suvarna News Asianet Suvarna News

ಟೆರೇಸ್ ಮೇಲೆ ಕ್ರಿಕೆಟ್ ಆಡಿದ ಹರ್ಭಜನ್ ಸಿಂಗ್, ಕೈಫ್‌, ವಿಡಿಯೋ ವೈರಲ್..!

* ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಭಜ್ಜಿ-ಕೈಫ್

* ಟೆರೇಸ್ ಮೇಲೆ ಕ್ರಿಕೆಟ್ ಆಡಿ ಗಮನ ಸೆಳೆದ ಉಭಯ ಕ್ರಿಕೆಟಿಗರು

* ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡ ಹರ್ಭಜನ್ ಸಿಂಗ್

Harbhajan Singh and Mohammad Kaif Play hilarious cricket video goes viral kvn
Author
Bengaluru, First Published Apr 29, 2022, 4:48 PM IST

ಮುಂಬೈ(ಏ.29): ಹರ್ಭಜನ್ ಸಿಂಗ್ (Harbhajan Singh) ಹಾಗೂ ಮೊಹಮ್ಮದ್ ಕೈಫ್‌ (Mohammad Kaif) ಭಾರತ ಕ್ರಿಕೆಟ್ ಕಂಡ ಅದ್ಭುತ ಆಟಗಾರರು ಎನ್ನುವುದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ಈ ಇಬ್ಬರು ಆಟಗಾರರು ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಹರ್ಭಜನ್ ಸಿಂಗ್ ದಶಕಗಳ ಕಾಲ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಮಿಂಚಿದ್ದಾರೆ. ಇನ್ನೊಂದೆಡೆ ಮೊಹಮ್ಮದ್ ಕೈಫ್, ಭಾರತ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಹಾಗೂ ಅದ್ಭುತ ಕ್ಷೇತ್ರರಕ್ಷಣೆಯ ಮೂಲಕ ಮನೆ ಮಾತಾಗಿದ್ದರು.

ಸದ್ಯ ಈ ಇಬ್ಬರು ಕ್ರಿಕೆಟಿಗರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ವೀಕ್ಷಕ ವಿವರಣೆಗಾರಿಕೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹರ್ಭಜನ್ ಸಿಂಗ್ ಹಾಗೂ ಮೊಹಮ್ಮದ್ ಕೈಫ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರೂ ಸಹಾ, ಕ್ರಿಕೆಟ್ ಆಡುವುದನ್ನು ಮಾತ್ರ ನಿಲ್ಲಿಸಿಲ್ಲ. ಮೈದಾನದೊಳಗೆ ಹಾಗೂ ಮೈದಾನದಾಚೆಗೆ ಉತ್ತಮ ಗೆಳೆತನ ಹೊಂದಿರುವ ಈ ಇಬ್ಬರು ಆಟಗಾರರು ಇದೀಗ ಟೆರೇಸ್ ಮೇಲೆ ಕ್ರಿಕೆಟ್ ಆಡಿ, ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. 

ಈ ಕುರಿತಂತೆ ಹರ್ಭಜನ್ ಸಿಂಗ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಟೆರೇಸ್ ಮೇಲೆ ಕ್ರಿಕೆಟ್ ಆಡಿ ಎಂಜಾಯ್ ಮಾಡುತ್ತಿರುವ ಸುಂದರ ಕ್ಷಣಗಳನ್ನು ಶೇರ್ ಮಾಡಿದ್ದಾರೆ. ಕೊನೆಯ ಒಂದು ಎಸೆತದಲ್ಲಿ ನಾಲ್ಕು ರನ್ ಅಗತ್ಯವಿದ್ದಾಗ ಹೇಗೆ ರನ್ ಕದಿಯಬಹುದು ಎನ್ನುವುದನ್ನು ಹಾಸ್ಯ ಶೈಲಿಯಲ್ಲಿಯೇ ಹರ್ಭಜನ್ ಸಿಂಗ್ ತೋರಿಸಿಕೊಟ್ಟಿದ್ದಾರೆ. ಹರ್ಭಜನ್ ಸಿಂಗ್ ಜತೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್‌ ಕೂಡಾ ಕ್ರಿಕೆಟ್ ಆಡಿ ಎಂಜಾಯ್ ಮಾಡಿದ್ದಾರೆ.

ಟೀಂ ಇಂಡಿಯಾ (Team India) ಮಾಜಿ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್, ಭಾರತ ಕ್ರಿಕೆಟ್ ತಂಡದ (Indian Cricket Team) ಪರ 103 ಟೆಸ್ಟ್, 236 ಏಕದಿನ ಹಾಗೂ 28 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 417, 269 ಹಾಗೂ 25 ವಿಕೆಟ್ ಕಬಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನ್ನುವ ಹೆಗ್ಗಳಿಕೆ ಹರ್ಭಜನ್ ಸಿಂಗ್ ಹೆಸರಿನಲ್ಲಿದೆ. ಇನ್ನು ಹರ್ಭಜನ್ ಸಿಂಗ್, 2007ರ ಚೊಚ್ಚಲ ಟಿ20 ವಿಶ್ವಕಪ್ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್‌ ವಿಜೇತ ತಂಡದ ಸದಸ್ಯರೂ ಕೂಡಾ ಹೌದು. ಇದಷ್ಟೇ ಐಪಿಎಲ್‌ನಲ್ಲಿ ಹರ್ಭಜನ್ ಸಿಂಗ್, ಮುಂಬೈ ಇಂಡಿಯನ್ಸ್‌ (Mumbai Indians), ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡವನ್ನು ಪ್ರತಿನಿಧಿಸಿದ್ದಾರೆ. ಒಟ್ಟಾರೆ 163 ಐಪಿಎಲ್ (Indian Premier League) ಪಂದ್ಯಗಳನ್ನಾಡಿರುವ ಭಜ್ಜಿ 150 ಬಲಿ ಪಡೆದಿದ್ದಾರೆ.

ಸಾರ್ವಕಾಲಿನ ಕನಸಿನ ಐಪಿಎಲ್ ತಂಡವನ್ನು ಪ್ರಕಟಿಸಿದ ಹರ್ಭಜನ್ ಸಿಂಗ್..!

ಇನ್ನೊಂದೆಡೆ ಮೊಹಮ್ಮದ್ ಕೈಫ್‌ ಭಾರತ ತಂಡದ ಪರ 13 ಟೆಸ್ಟ್ ಹಾಗೂ 125 ಏಕದಿನ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 624 ಹಾಗೂ 2,753 ರನ್‌ ಬಾರಿಸಿದ್ದಾರೆ. 2003ರ ನಾಟ್‌ವೆಸ್ಟ್ ಸೀರಿಸ್ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಅಮೋಘ ಪ್ರದರ್ಶನ ತೋರಿ ರೋಚಕವಾಗಿ ಕೈಫ್‌ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ದು, ಯಾರೂ ಮರೆಯಲು ಸಾಧ್ಯವಿಲ್ಲ.

Follow Us:
Download App:
  • android
  • ios