ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬೌಲಿಂಗ್ ಆಯ್ಕೆ ಬೆಂಗಳೂರು ತಂಡದಲ್ಲಿ ಒಂದು ಬದಲಾವಣೆ ಮಾಡಿದ ನಾಯಕ ಗುಜರಾತ್ ತಂಡದಲ್ಲೂ ಒಂದು ಬದಲಾವಣೆ  

ಮುಂಬೈ(ಮೇ.19): ರಾಯಲ್ ಚಾಲೆಂಜರ್ಸ್ ತಂಡಕ್ಕೆ ಪ್ಲೇ ಆಫ್ ಪ್ರವೇಶಕ್ಕೆ ಇದು ಅತ್ಯಂತ ಮಹತ್ವದ ಪಂದ್ಯ, ಇತ್ತ ಗುಜರಾತ್ ಟೈಟಾನ್ಸ್ ಈಗಾಗಲೇ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡರು ಆತ್ಮವಿಶ್ವಾಸ ಹೆಚ್ಚಿಸಲು ತಾಲೀಮು. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಮೊಹಮ್ಮದ್ ಸಿರಾಜ್ ಬದಲು ಸಿದ್ದಾರ್ಥ್ ಕೌಲ್ ತಂಡ ಸೇರಿಕೊಂಡಿದ್ದಾರೆ. ಇತ್ತ ಗುಜರಾತ್ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದೆ. ಅಲ್ಜಾರಿ ಜೊಸೆಫ್ ಬದಲು ಲ್ಯೂಕಿ ಫರ್ಗ್ಯೂಸನ್ ತಂಡ ಸೇರಿಕೊಂಡಿದ್ದಾರೆ 

ಕ್ರಿಕೆಟ್​​ ಬಿಟ್ಟು ಸಿನಿ ಲೋಕದತ್ತ ಮುಖ ಮಾಡಿದ್ರಾ ಶಿಖರ್​ ಧವನ್​​..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11
ವಿರಾಟ್ ಕೊಹ್ಲಿ, ಫಾಫ್ ಡುಪ್ಲಸಿಸ್(ನಾಯಕ), ರಜತ್ ಪಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲಮ್ರೊರ್, ದಿನೇಶ್ ಕಾರ್ತಿಕ್, ಶಹಬಾಜ್ ಅಹಮ್ಮದ್, ವಾನಿಂಡು ಹಸರಂಗ, ಹರ್ಷಲ್ ಪಟೇಲ್, ಸಿದ್ದಾರ್ಥ್ ಕೌಲ್, ಜೋಶ್ ಹೇಜಲ್‌ವುಡ್

ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11
ವೃದ್ಧಿಮಾನ್ ಸಾಹ, ಶುಬಮನ್ ಗಿಲ್, ಮಾಥ್ಯೂವೇಡ್, ಹಾರ್ದಿಕ್ ಪಾಂಡ್ಯ(ನಾಯಕ),ಡೇವಿಡ್ ಮಿಲ್ಲರ್, ರಾಹಲ್ ತಿವಾಟಿಯಾ, ರಶೀದ್ ಖಾನ್, ರವಿ ಶ್ರೀನಿವಾಸನ್ ಸಾಯಿ ಕಿಶೋರ್, ಲ್ಯೂಕಿ ಫರ್ಗ್ಯೂಸನ್, ಯಶ್ ದಯಾಳ್, ಮೊಹಮ್ಮದ್ ಶಮಿ

ಪ್ಲೇ-ಆಫ್‌ಗೇ ಲಖನೌ ಎಂಟ್ರಿ
15ನೇ ಆವೃತ್ತಿಯ ಐಪಿಎಲ್‌ನ ಪ್ಲೇ-ಆಫ್‌ಗೆ ಲಖನೌ ಸೂಪರ್‌ಜೈಂಟ್ಸ್‌ ಅಧಿಕೃತವಾಗಿ ಪ್ರವೇಶಿಸಿದೆ. ಬುಧವಾರ ನಡೆದ ಕೋಲ್ಕತಾ ನೈಟ್‌ರೈಡ​ರ್‍ಸ್ ವಿರುದ್ಧದ ಪಂದ್ಯದಲ್ಲಿ 2 ರನ್‌ ರೋಚಕ ಗೆಲುವು ಸಾಧಿಸಿತು. ಈ ಸೋಲಿನೊಂದಿಗೆ ಕೆಕೆಆರ್‌ ಟೂರ್ನಿಯಿಂದ ಹೊರಬಿತ್ತು. ಲಖನೌ ಅಂಕಪಟ್ಟಿಯಲ್ಲಿ ಮತ್ತೆ 2ನೇ ಸ್ಥಾನಕ್ಕೇರಿದ್ದು, ಚೆನ್ನೈ-ರಾಜಸ್ಥಾನ ಪಂದ್ಯದ ಬಳಿಕ ತಂಡ 2ನೇ ಸ್ಥಾನಿಯಾಗೇ ಕ್ವಾಲಿಫೈಯರ್‌-1ಗೆ ಅರ್ಹತೆ ಪಡೆಯಲಿದೆಯೋ ಅಥವಾ 3ನೇ ಸ್ಥಾನಕ್ಕೆ ಕುಸಿದು ಎಲಿಮಿನೇಟರ್‌ ಪಂದ್ಯ ಆಡಲಿದೆಯೋ ಎನ್ನುವುದು ನಿರ್ಧಾರವಾಗಲಿದೆ.

ಮುಂದಿನ ಐಪಿಎಲ್‌ನಲ್ಲಿ ಈ ಇಬ್ಬರು ನಾಯಕರಾಗಿ ಉಳಿಯೋದು ಡೌಟ್..!

ಮೊದಲು ಬ್ಯಾಟ್‌ ಮಾಡಿದ ಲಖನೌ ಡಿ ಕಾಕ್‌(140*), ರಾಹುಲ್‌(68*) ಅಮೋಘ ಬ್ಯಾಟಿಂಗ್‌ ನೆರವಿನಿಂದ 20 ಓವರಲ್ಲಿ ವಿಕೆಟ್‌ ನಷ್ಟವಿಲ್ಲದೆ 210 ರನ್‌ ಗಳಿಸಿತು. ಕಠಿಣ ಗುರಿ ಬೆನ್ನತ್ತಿದ ಕೆಕೆಆರ್‌, ನಾಯಕ ಶ್ರೇಯಸ್‌ ಅಯ್ಯರ್‌(50), ನಿತೀಶ್‌ ರಾಣಾ(42), ಸ್ಯಾಮ್‌ ಬಿಲ್ಲಿಂಗ್‌್ಸ(36) ಹೋರಾಟದ ನೆರವಿನಿಂದ ಗೆಲುವಿನ ಸನಿಹಕ್ಕೆ ತಲುಪಿತು.

ಕೊನೆ ಓವರ್‌ ಡ್ರಾಮಾ: ಕೊನೆ ಓವರಲ್ಲಿ ಗೆಲ್ಲಲು 21 ರನ್‌ ಬೇಕಿತ್ತು. ಮಾರ್ಕಸ್‌ ಸ್ಟೋಯ್ನಿಸ್‌ ಎಸೆದ ಓವರ್‌ನ ಮೊದಲ 4 ಎಸೆತಗಳಲ್ಲಿ ರಿಂಕು ಸಿಂಗ್‌ 18 ರನ್‌ ಗಳಿಸಿ ತಂಡವನ್ನು ಗೆಲುವಿನ ಹೊಸ್ತಿಲು ತಲುಪಿಸಿದರು. 5ನೇ ಎಸೆತದಲ್ಲಿ ರಿಂಕು ಹೊಡೆತ ಚೆಂಡನ್ನು ಎವಿನ್‌ ಲೆವಿಸ್‌ ಅತ್ಯಮೋಫವಾಗಿ ಕ್ಯಾಚ್‌ ಹಿಡಿದರು. ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ಕ್ಯಾಚ್‌ಗಳಲ್ಲಿ ಒಂದೆನಿಸಿಕೊಂಡಿತು. ಕೊನೆ ಎಸೆತದಲ್ಲಿ 3 ರನ್‌ ಬೇಕಿದ್ದಾಗ, ಉಮೇಶ್‌ ಯಾದವ್‌ರನ್ನು ಬೌಲ್ಡ್‌ ಮಾಡಿದ ಸ್ಟೋಯ್ನಿಸ್‌, ಲಖನೌಗೆ ರೋಚಕ ಗೆಲುವು ತಂದುಕೊಟ್ಟರು. 15 ಎಸೆತದಲ್ಲಿ 40 ರನ್‌ ಸಿಡಿಸಿ ರಿಂಕು ತೋರಿದ ಹೋರಾಟ ವ್ಯರ್ಥವಾಯಿತು.