* ಬಾಲಿವುಡ್‌ನತ್ತ ಮುಖ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್* ಐಪಿಎಲ್‌ಗೂ ಮುನ್ನವೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಗಬ್ಬರ್ ಸಿಂಗ್* ಸದ್ಯದಲ್ಲೇ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಗುಡ್ ಬೈ ಹೇಳ್ತಾರಾ
ಮುಂಬೈ(ಮೇ.19): ಶಿಖರ್ ಧವನ್ ಆಟವೇ ಚೆಂದ. ಟೀಂ ಇಂಡಿಯಾ (Team India) ಆರಂಭಿಕನಾಗಿ ಶಿಖರ್ ಧವನ್ ಸಕ್ಸಸ್ ಕಂಡಿದ್ದಾರೆ. ಪ್ರಸಕ್ತ ಐಪಿಎಲ್ನಲ್ಲೂ ಗಬ್ಬರ್ ಸಿಂಗ್ ಅಬ್ಬರ ಜೋರಾಗಿದ್ದು, ಆರೆಂಜ್ ಕ್ಯಾಪ್ ರೇಸ್ನಲ್ಲಿದ್ದಾರೆ. ಇಂತಹ ಸ್ಟಾರ್ ಓಪನರ್ ಕ್ರಿಕೆಟ್‌ಗೆ ಶೀಘ್ರದಲ್ಲೇ ಗುಡ್ಬೈ ನೀಡ್ತಾರಾ ಅನ್ನೋ ಕಾಡ್ತಿದೆ. ಇಂತಹದೊಂದು ಗುಮಾನಿಗೆ ಕಾರಣ ಮೀಸೆ ರಾಜನ ಸಿನಿಮಾ ಆಸಕ್ತಿ. ಯೆಸ್, ಆನ್ ಫಿಲ್ಡ್ ನಲ್ಲಿ ಹೆಚ್ಚು ಸದ್ದು ಮಾಡ್ತಿದ್ದ ಶಿಖರ್ ಧವನ್ ಬಾಲಿವುಡ್ನಲ್ಲಿ ಘರ್ಜಿಸಲು ರೆಡಿಯಾಗಿದ್ದಾರೆ. ಸದ್ದಿಲ್ಲದೇ ಮುಖಕ್ಕೆ ಬಣ್ಣ ಹಚ್ಚಿದ್ದು, ಬಿಟೌನ್ಗೆ ದಾಂಗುಡಿ ಇಟ್ಟಿದ್ದಾರೆ. ಇದು ಅಚ್ಚರಿ ಅನ್ನಿಸಿದ್ರೂ ಸತ್ಯ. ಹಿಂದಿ ಚಿತ್ರವೊಂದರಲ್ಲಿ ಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. ಇದು ಗಬ್ಬರ್ ಸಿಂಗ್ ಅಭಿಮಾನಿಗಳಿಗೆ ನಿಜಕ್ಕೂ ಡಬಲ್ ಧಮಾಕ.
ಒಂದು ಚಿತ್ರದ ಶೂಟಿಂಗ್ ಕಂಪ್ಲೀಟ್:
ಸದ್ಯ ಮಾಹಿತಿ ಪ್ರಕಾರ ಶಿಖರ್ ಧವನ್ (Shikhar Dhawan) ಐಪಿಎಲ್ ಆರಂಭಕ್ಕೂ ಮುನ್ನವೇ ಒಂದು ಚಿತ್ರದಲ್ಲಿ ನಟಿಸಿದ್ದಾರೆ. ಈಗ ಬಿಗ್ ಬಜೆಟ್ ಚಿತ್ರದಲ್ಲಿ ನಟಿಸುವುದಾಗಿ ತಿಳಿದು ಬಂದಿದೆ. ಆದರೆ ಅವರು ನಟನೆಯ ಚಿತ್ರದ ಹೆಸರಾಗಲಿ, ಅದರ ಪಾತ್ರವಾಗಲಿ ಯಾವುದು ಅನ್ನೋದರ ಗುಟ್ಟು ಬಿಟ್ಟುಕೊಟ್ಟಿಲ್ಲ. ಇನ್ನು ಈ ಚಿತ್ರ ಇದೇ ವರ್ಷದಲ್ಲಿ ಬಿಡುಗಡೆಯಾಗಲಿದೆಯಂತೆ.
ಮುಂದಿನ ಐಪಿಎಲ್‌ನಲ್ಲಿ ಈ ಇಬ್ಬರು ನಾಯಕರಾಗಿ ಉಳಿಯೋದು ಡೌಟ್..!
ಇನ್ನು ಶಿಖರ್ ಧವನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಅವರ ಪಾತ್ರವು ಚಿತ್ರದಲ್ಲಿ ಪ್ರಮುಖವಾಗಿದ್ದು, ಮೊದಲಿನಿಂದ ಕೊನೆಯವರೆಗೂ ಅವರು ಇರಲಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಶಿಖರ್ ಧವನ್ ಅಭಿನಯದ ಚಿತ್ರದ ಮೇಲೆ ಈಗಾಗಲೇ ನಿರೀಕ್ಷೆಗಳು ಹೆಚ್ಚಿವೆ.
ರಾಮ್ ಸೇತು ಚಿತ್ರದಲ್ಲಿ ಗಬ್ಬರ್ ಸಿಂಗ್..?:
ಕೆಲ ದಿನಗಳ ಹಿಂದಷ್ಟೇ ಧವನ್ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಜೊತೆ ಕಾಣಿಸಿಕೊಂಡಿದ್ರು. ಹೀಗಾಗಿ ಎಲ್ಲರೂ ಅಕ್ಷಯ್ ಕುಮಾರ್ ಜೊತೆ ಧವನ್ ಸಿನಿಮಾ ಮಾಡುತ್ತಿದ್ದು, ರಾಮ್ ಸೇತು ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿಕೊಡಲಿದ್ದಾರೆ ಎನ್ನಲಾಗ್ತಿತ್ತು. ಆದ್ರೀಗ ಡೆಲ್ಲಿ ಬ್ಯಾಟರ್ ಆ ಸಿನಿಮಾದಲ್ಲಿ ನಟಿಸ್ತಿಲ್ಲ. ಬೇರೆಯದ್ದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಧವನ್ ನಟನೆಯ ಚಿತ್ರದ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಬೀಲ್ಡ್ ಆಗಿದೆ. ಆ ಚಿತ್ರ ಯಾವುದು..? ಯಾವಾಗ ರಿಲೀಸ್ ಅಗಲಿದೆ ಎಂಬುದಕ್ಕೆ ಶೀಘ್ರವೇ ಆನ್ಸರ್ ಸಿಗಲಿದೆ.
