ಹಾರ್ದಿಕ್ ಪಾಂಡ್ಯ ಅವರ ಹೊಸ ಅವತಾರ  ಬಾಂಬ್ ತಜ್ಞನಾಗಿ ಕಾಣಿಸಿಕೊಂಡು ಹಾರ್ದಿಕ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ ಪ್ರೋಮೋ  

ಮುಂಬೈ(ಮಾ.12): ಐಪಿಎಲ್ 2022 ಟೂರ್ನಿ ಆರಂಭಕ್ಕೆ ಕೆಲ ದಿನಗಳು ಮಾತ್ರ ಬಾಕಿ. ಈಗಾಗಲೇ ಅಭಿಮಾನಿಗಳು ಚುಟುಕು ಕ್ರೀಡಾ ಹಬ್ಬಕ್ಕಾಗಿ ಕಾಯುತ್ತಿದ್ದಾರೆ. ಇದರ ನಡುವೆ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಂಬ್ ನಿಷ್ಕ್ರೀಯ ತಜ್ಞನಾಗಿ ಕಾಣಿಸಿಕೊಂಡಿರುವ ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. 

ದೇಶದ ಮೊದಲ ಬಹುಭಾಷಾ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಅಪ್ಲಿಕೇಶನ್‌ನಲ್ಲಿನ ವೀಡಿಯೊ ಕಡಿಮೆ ಸಮಯದಲ್ಲೇ ಸಾಕಷ್ಟು ಸದ್ದು ಮಾಡುತ್ತಿದೆ. ಈ ವೀಡಿಯೊದಲ್ಲಿ, ಹಾರ್ದಿಕ್ ಪಾಂಡ್ಯವನ್ನು ಬಾಂಬ್ ತಜ್ಞ ಎಂದು ಚಿತ್ರೀಕರಿಸಲಾಗಿದೆ. “ಹೊಸದನ್ನು ಎಂದಿಗೂ ಕಡೆಗಣಿಸಬೇಡಿ. ನೀವು ನಿಷ್ಕ್ರೀಯ ಮಾಡಲು ಕತ್ತರಿಸಿದರೆ 100ರ ವರೆಗೆ ಹೋಗಲಿದೆ ಎಂದು ಪಾಂಡ್ಯ ಸಂದೇಶ ನೀಡಿದ್ದಾರೆ.ಈ ಐಪಿಎಲ್ ಪ್ರೋಮೋ ವೀಡಿಯೋ ಇದೀಗ ಐಪಿಎಲ್ ಕ್ರೇಜ್ ಮತ್ತಷ್ಟು ಹೆಚ್ಚುವಂತೆ ಮಾಡಿದೆ. 

IPL 2022: ಆರ್‌ಸಿಬಿ ನೂತನ ನಾಯಕರಾಗಿ ಫಾಫ್ ಡು ಪ್ಲೆಸಿಸ್‌ ನೇಮಕ

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಎರಡು ಹೊಸ ತಂಡಗಳನ್ನು ಸೇರಿಸಿದ ನಂತರ ಈಗ ಅದು 10 ತಂಡಗಳಾಗಿ ಮಾರ್ಪಟ್ಟಿದೆ. ಈ ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ, ಐಪಿಎಲ್‌ನ ಹೊಸ ಋತುವಿನಲ್ಲಿ ಏನು ಸ್ಫೋಟಗೊಳ್ಳಲಿದೆ ಎಂಬುದನ್ನು ಪಾಂಡ್ಯ ವಿವರಿಸಿದ್ದಾರೆ. 

ಸ್ಥಳೀಯ ಸಾಮಾಜಿಕ ಜಾಲತಾಣ ಕೂ ಆಪ್‌ನಲ್ಲಿ ವೈರಲ್ ಆಗಿರುವ ಈ ವೀಡಿಯೊದಲ್ಲಿ ಹೇಳಲಾದ ಮುಖ್ಯ ವಿಷಯವೆಂದರೆ, ಈಗ ಎಂಟು ತಂಡಗಳ ಬದಲಿಗೆ 10 ತಂಡಗಳನ್ನು ಸೇರಿಸಲಾಗಿದ್ದು, ಈ ಚುಟುಕು ಆಟದ ರೋಮಾಂಚನವು ತುಂಬಾ ವೇಗವಾಗಿರುತ್ತದೆ.

IPL 2022: ಮುಂಬೈ ಇಂಡಿಯನ್ಸ್‌ಗೆ ಟಕ್ಕರ್ ನೀಡಿ ಲಸಿತ್ ಮಾಲಿಂಗರನ್ನು ಸೆಳೆದುಕೊಂಡ ರಾಜಸ್ಥಾನ ರಾಯಲ್ಸ್..!

ಭಾರತದಲ್ಲಿ ಕ್ರೀಡೆಯ ಅತಿದೊಡ್ಡ ಹಬ್ಬವೆಂದು ಪರಿಗಣಿಸಲಾದ ಇಂಡಿಯನ್ ಪ್ರೀಮಿಯರ್ ಲೀಗ್ 2022 (ಐಪಿಎಲ್ 2022) ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಈ ಕ್ರಿಕೆಟ್ ಲೀಗ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಮಾರ್ಚ್ 26ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ಕ್ರೇಜ್ ಹುಟ್ಟಿಕೊಂಡಿದೆ. ಇದರ ಅಂತಿಮ ಪಂದ್ಯ ಮೇ 29 ರಂದು ನಡೆಯಲಿದೆ. ಈ ಟೂರ್ನಿಯಲ್ಲಿ ಸಾಕಷ್ಟು ಹೊಸತನಗಳನ್ನು ಬದಲಾವಣೆಗಳನ್ನು ಕಾಣುವಿರಿ, ಈ ವರ್ಷ ಎರಡು ಹೊಸ ತಂಡಗಳು ಐಪಿಎಲ್‌ನಲ್ಲಿ ಆಡುವುದನ್ನು ಕಾಣಬಹುದು.

ಲೀಗ್‌ ಹಂತದ ಪಂದ್ಯಗಳನ್ನು ಮುಂಬೈ ಹಾಗೂ ಪುಣೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಮುಂಬೈನ 3 ಕ್ರೀಡಾಂಗಣ ಹಾಗೂ ಪುಣೆಯ 1 ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದೆ. ಮುಂಬೈಯಲ್ಲಿರುವ ವಾಂಖೆಡೆ ಕ್ರೀಡಾಂಗಣದಲ್ಲಿ 20, ಬ್ರಬೋರ್ನ್‌ 15 ಹಾಗೂ ಡಿ.ವೈ.ಪಾಟೀಲ್‌ ಕ್ರೀಡಾಂಗಣದಲ್ಲಿ 20 ಪಂದ್ಯಗಳು ನಿಗದಿಯಾಗಿವೆ. ಪುಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ 15 ಪಂದ್ಯಗಳು ನಡೆಯಲಿವೆ ಎಂದು ತಿಳಿದುಬಂದಿದೆ.

ಪ್ರೇಕ್ಷಕರಿಗೆ ಅನುಮತಿ
ಕಳೆದೆರಡು ಆವೃತ್ತಿಗಳಲ್ಲಿ ಐಪಿಎಲ್‌ ಪಂದ್ಯ ವೀಕ್ಷಣೆಗೆ ಅವಕಾಶ ಸಿಗದೆ ನಿರಾಸೆ ಅನುಭವಿಸಿದ್ದ ಕ್ರೀಡಾಭಿಮಾನಿಗಳಿಗೆ ಈ ಬಾರಿ ಸಿಹಿ ಸುದ್ದಿ ಸಿಕ್ಕಿದೆ. ಈ ಬಗ್ಗೆ ಮತನಾಡಿರುವ ಐಪಿಎಲ್‌ ಮುಖ್ಯಸ್ಥ ಬ್ರಿಜೇಶ್‌ ಪಟೇಲ್‌, ಪ್ರೇಕ್ಷಕರಿಗೆ ಅನುಮತಿ ಸಿಗುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಮಾ.26ಕ್ಕೆ ಐಪಿಎಲ್‌ ಆರಂಭವಾಗಲಿದ್ದು, ವೇಳಾಪಟ್ಟಿಶೀಘ್ರ ಬಿಡುಗಡೆಯಾಗಲಿದೆ. ಈ ಬಾರಿ ಪ್ರೇಕ್ಷಕರಿಗೆ ಅವಕಾಶ ನೀಡಲು ಉದ್ದೇಶಿಸಿದ್ದೇವೆ. ಸರ್ಕಾರದ ನಿಯಮ ಪ್ರಕಾರ ಶೇ.25 ಅಥವಾ 50ರಷ್ಟುಪ್ರೇಕ್ಷಕರಿಗೆ ಅನುಮತಿ ಸಿಗುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

15ನೇ ಆವೃತ್ತಿಯ ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಯಾಗಿರುವ ಗುಜರಾತ್‌ ಟೈಟಾನ್ಸ್‌ ತಂಡ, ಪಿರಮಿಡ್‌ ಆಕಾರದಲ್ಲಿ ತಯಾರಿಸಲಾಗಿರುವ ಲೋಗೋವನ್ನು ಸಾಮಾಜಿಕ ತಾಣದಲ್ಲಿ ಬಿಡುಗಡೆ ಮಾಡಲಾಯಿತು. ಬಿಳಿ, ನೀಲಿ ಹಾಗೂ ಬಂಗಾರದ ಬಣ್ಣದ ಲೋಗೋದಲ್ಲಿ ‘ಗುಜರಾತ್‌ ಟೈಟಾನ್ಸ್‌’ ಎಂದು ಬರೆಯಲಾಗಿದೆ. ಹರಾಜಿನಲ್ಲಿ 5625 ಕೋಟಿ ರು.ಗೆ ಸಿವಿಸಿ ಕ್ಯಾಪಿಟಲ್ಸ್‌ ಸಂಸ್ಥೆ ಖರೀದಿಸಿರುವ ತಂಡವನ್ನು ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಮುನ್ನಡೆಸಲಿದ್ದು, ಭಾರತದ ಮಾಜಿ ವೇಗಿ ಆಶಿಶ್‌ ನೆಹ್ರಾ ಪ್ರಧಾನ ಕೋಚ್‌ ಆಗಿ ಕಾರ‍್ಯನಿರ್ವಹಿಸಲಿದ್ದಾರೆ.