Asianet Suvarna News Asianet Suvarna News

'ಮರಿ' ಮ್ಯಾಕ್ಸ್‌ವೆಲ್‌ಗೆ ಜನ್ಮಕೊಟ್ಟ ವಿನಿ ರಾಮನ್‌, ಆಸೀಸ್ ಆಲ್ರೌಂಡರ್‌ ಮಗುವಿಗೆ ಮುದ್ದಾದ ಹೆಸರು!

ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ವಿನಿ ರಾಮನ್‌ ದಂಪತಿ 11-09-2023ರಂದು 'ಲೊಗಾನ್ ಮಾವೆರಿಕ್‌ ಮ್ಯಾಕ್ಸ್‌ವೆಲ್' ಅವರನ್ನು ತಮ್ಮ ಕುಟುಂಬದೊಳಗೆ ಸ್ವಾಗತಿಸಿದ್ದು, ಇಂದು ಈ ವಿಷಯವನ್ನು ಹೊರ ಜಗತ್ತಿಗೆ ತಿಳಿಸಿದ್ದಾರೆ. ವಿನಿ ರಾಮನ್‌ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್‌ ತಮ್ಮ ಮಗನ ಕೈಹಿಡಿದಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Glenn Maxwell Wife Vini Raman Blessed With A Baby Boy kvn
Author
First Published Sep 15, 2023, 2:14 PM IST

ಮೆಲ್ಬರ್ನ್‌(ಸೆ.15): ಆಸ್ಟ್ರೇಲಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ ಮತ್ತು ಪತ್ನಿ ವಿನಿ ರಾಮನ್‌ ತಮ್ಮ ಕುಟುಂಬಕ್ಕೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. ಭಾರತೀಯ ಮೂಲದ ವಿನಿ ರಾಮನ್, ಇದೀಗ ಮರಿ ಮ್ಯಾಕ್ಸ್‌ವೆಲ್‌ಗೆ ಜನ್ಮ ನೀಡಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ತಾವು ತಂದೆಯಾಗಿರುವ ವಿಷಯವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ. 

ಹೌದು, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ವಿನಿ ರಾಮನ್‌ ದಂಪತಿ 11-09-2023ರಂದು 'ಲೊಗಾನ್ ಮಾವೆರಿಕ್‌ ಮ್ಯಾಕ್ಸ್‌ವೆಲ್' ಅವರನ್ನು ತಮ್ಮ ಕುಟುಂಬದೊಳಗೆ ಸ್ವಾಗತಿಸಿದ್ದು, ಇಂದು ಈ ವಿಷಯವನ್ನು ಹೊರ ಜಗತ್ತಿಗೆ ತಿಳಿಸಿದ್ದಾರೆ. ವಿನಿ ರಾಮನ್‌ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್‌ ತಮ್ಮ ಮಗನ ಕೈಹಿಡಿದಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

'ಅದೃಷ್ಟವಂತ' ಯುವ ಕ್ರಿಕೆಟಿಗನಿಗೆ Yamaha RD350 ಬೈಕ್‌ನಲ್ಲಿ ಲಿಫ್ಟ್‌ ಕೊಟ್ಟ ಧೋನಿ..! ವಿಡಿಯೋ ವೈರಲ್

 
 
 
 
 
 
 
 
 
 
 
 
 
 
 

A post shared by Vini Maxwell (@vini.raman)

ಕಳೆದ ತಿಂಗಳಷ್ಟೇ ವಿನಿ ರಾಮನ್ ತಾವು ಸೆಪ್ಟೆಂಬರ್‌ನಲ್ಲಿ ತಾಯಿಯಾಗಲಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕಳೆದ ತಿಂಗಳಷ್ಟೇ ವಿನಿ ರಾಮನ್ ಅವರಿಗೆ ಭಾರತೀಯ ಸಂಪ್ರದಾಯದಂತೆ ಸೀಮಂತವನ್ನು ಮಾಡಲಾಗಿತ್ತು. ಆ ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದವು.

ಹೆಂಡತಿಗೆ ಭಾರತೀಯ ಸಂಪ್ರದಾಯದಂತೆ ಸೀಮಂತ ಮಾಡಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌!

ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ತಾವು ತಂದೆಯಾಗಿರುವುದು ಗ್ಲೆನ್ ಮ್ಯಾಕ್ಸ್‌ವೆಲ್ ಪಾಲಿಗೆ ತುಂಬಾ ಖುಷಿಯ ಸಂಗತಿಯಾಗಿದೆ. ಅಕ್ಟೋಬರ್ 05ರಿಂದ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಇದಕ್ಕೂ ಮುನ್ನ ಕೆಲಕಾಲ ತನ್ನ ಪತ್ನಿ ಹಾಗೂ ಮಗನ ಜತೆ ಖುಷಿಯ ಕ್ಷಣಗಳನ್ನು ಕಳೆಯಲು ಅವಕಾಶ ಸಿಕ್ಕಂತೆ ಆಗಿದೆ. ಗ್ಲೆನ್ ಮ್ಯಾಕ್ಸ್‌ವೆಲ್, ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದು, ಇದೀಗ ಹೈವೋಲ್ಟೇಜ್ ಟೂರ್ನಿಗೆ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ಮ್ಯಾಕ್ಸಿ ಎದುರು ನೋಡುತ್ತಿದ್ದಾರೆ.

ಯಾರು ಈ ವಿನಿ ರಾಮನ್?

ಭಾರತೀಯ ಮೂಲದ ವಿನಿ ರಾಮನ್ ಮಾರ್ಚ್ 03, 1993ರಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಜನಿಸಿದ್ದರು. ಅವರು ಮೆಡಿಕಲ್ ಸೈನ್ಸ್ ವ್ಯಾಸಂಗ ಮಾಡಿ ವೃತ್ತಿಯಲ್ಲಿ ಫಾರ್ಮಾಸಿಸ್ಟ್ ಆಗಿದ್ದಾರೆ. ವಿನಿ ರಾಮನ್, ಆಸೀಸ್ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ಜತೆ ಕೆಲಕಾಲ ಡೇಟಿಂಗ್ ನಡೆಸಿ ಮಾರ್ಚ್ 18, 2022ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಹಾಗೂ ಮಾರ್ಚ್ 27ರಂದು ತಮಿಳು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

Follow Us:
Download App:
  • android
  • ios