40 ವರ್ಷಗಳ ಹಿಂದಿನ ಕಪಿಲ್ ದೇವ್ ದಾಖಲೆ ಮುರಿದ ಗ್ಲೆನ್ ಮ್ಯಾಕ್ಸ್‌ವೆಲ್!
ತಮ್ಮ ಐತಿಹಾಸಿಕ ಅಜೇಯ 201 ರನ್‌ಗಳ ಹಾದಿಯಲ್ಲಿ ಕಪಿಲ್ ದೇವ್ ಅವರ 40 ವರ್ಷಗಳ ಹಿಂದಿನ ಅಭೇದ್ಯ ದಾಖಲೆಯನ್ನೂ ಗ್ಲೆನ್ ಮ್ಯಾಕ್ಸ್‌ವೆಲ್ ಮುರಿದಿದ್ದಾರೆ. 6ನೇ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್ ಒಬ್ಬರ ಗರಿಷ್ಠ ಮೊತ್ತದ ದಾಖಲೆಯನ್ನು ಮ್ಯಾಕ್ಸ್‌ವೆಲ್ ಬರೆದಿದ್ದಾರೆ.
ಬೆಂಗಳೂರು (ನ.7): ಆಸೀಸ್‌ನ ಗ್ಲೆನ್ ಮ್ಯಾಕ್ಸ್‌ವೆಲ್ ರೌದ್ರಾವತಾರಕ್ಕೆ ಅಫ್ಘಾನಿಸ್ತಾನ ಬೆಚ್ಚಿಬಿದ್ದಿದೆ. ತಮ್ಮ ಅಜೇಯ 201 ರನ್‌ಗಳ ಮಹಾನ್ ಇನ್ನಿಂಗ್ಸ್‌ನೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಬಹಳ ಅಪರೂಪದ ದಾಖಲೆಗಳನ್ನು ಮುರಿದಿದ್ದಾರೆ. ಅದರಲ್ಲಿ ಪ್ರಮುಖವಾಗಿರುವುದು ಭಾರತದ ಕಪಿಲ್ ದೇವ್ ಅವರ ,40 ವರ್ಷಗಳ ಹಿಂದಿನ ದಾಖಲೆ. ಇಲ್ಲಿಯವರೆಗೂ ಅಭೇದ್ಯವಾಗಿದ್ದ ಈ ದಾಖಲೆಯನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಮುಂಬೈನ ವಾಂಖೆಡೆ ಮೈದಾನದಲ್ಲಿ ತಮ್ಮ ಸಾಹಸಿಕ ಇನ್ನಿಂಗ್ಸ್ ಮೂಲಕ ಮುರಿದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 6 ಹಾಗೂ 6ಕ್ಕಿಂತ ಕೆಳಗಿನ ಕ್ರಮಾಂಕದ ಬ್ಯಾಟ್ಸ್‌ಮನ್‌ನ ಗರಿಷ್ಠ ಮೊತ್ತದ ದಾಖಲೆಯನ್ನು ಕಪಿಲ್ ದೇವ್ ಹೊಂದಿದ್ದರು. 1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ಧ ಕಪಿಲ್ ದೇವ್ ಬಾರಿಸಿದ್ದ ಅಜೇಯ 175 ರನ್ ಈ ದಾಖಲೆಯನ್ನು ಹೊಂದಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್ 40 ವರ್ಷಗಳ ಹಿಂದಿನ ಈ ದಾಖಲೆಯನ್ನು ಮುರಿದಿದ್ದಾರೆ.
ವಿಶ್ವಕಪ್‌ನಲ್ಲಿ ಗರಿಷ್ಠ ಸಿಕ್ಸರ್: ಪಂದ್ಯದಲ್ಲಿ 10 ಸಿಕ್ಸರ್ ಸಿಡಿಸಿದ ಮ್ಯಾಕ್ಸ್‌ವೆಲ್ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್‌ಗಳನ್ನು ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರು. 49 ಸಿಕ್ಸರ್ ಬಾರಿಸಿರುವ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದರೆ, 45 ಸಿಕ್ಸರ್ ಸಿಡಿಸಿರುವ ರೋಹಿತ್ ಶರ್ಮ 2ನೇ ಸ್ಥಾನದಲ್ಲಿದ್ದರೆ, 43 ಸಿಕ್ಸರ್‌ಗಳೊಂದಿಗೆ ಮ್ಯಾಕ್ಸ್‌ವೆಲ್ 3ನೇ ಸ್ಥಾನಕ್ಕೇರಿದರು.
ರನ್ ಚೇಸ್‌ನಲ್ಲಿ ಗರಿಷ್ಠ ವೈಯಕ್ತಿಕ ಮೊತ್ತ: ಏಕದಿನ ಕ್ರಿಕೆಟ್‌ನ ರನ್ ಚೇಸ್‌ನಲ್ಲಿ ಆಟಗಾರನೊಬ್ಬನ ಗರಿಷ್ಠ ಮೊತ್ತ ಇದಾಗಿದೆ. 2021ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಫಖರ್ ಜಮಾನ್ ಬಾರಿಸಿದ 193 ರನ್ ಸಾಧನೆ 2ನೇ ಸ್ಥಾನಕ್ಕೆ ಕುಸಿದಿದೆ. ಶೇನ್ ವ್ಯಾಟ್ಸನ್ (183*), ಎಂಎಸ್ ಧೋನಿ (183*) ನಂತರದ ಸ್ಥಾನದಲ್ಲಿದ್ದಾರೆ. ಇನ್ನು ವಿಶ್ವಕಪ್‌ನಲ್ಲಿ ಈ ಸಾಧನೆ ಆಂಡ್ರ್ಯೂ ಸ್ಟ್ರಾಸ್ ಹೆಸರಲ್ಲಿತ್ತು. 2011ರ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಅವರು 158 ರನ್ ಸಿಡಿಸಿದ್ದರು.
ಆರಂಭಿಕ ಆಟಗಾರನಲ್ಲದ ಬ್ಯಾಟ್ಸ್‌ಮನ್‌ನ ಗರಿಷ್ಠ ಮೊತ್ತ: ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕನಲ್ಲದ ಆಟಗಾರನ ಗರಿಷ್ಠ ಮೊತ್ತ ಇದಾಗಿದೆ. 2009ರಲ್ಲಿ ಬಾಂಗ್ಲಾದೇಶ ವಿರುದ್ಧ ಜಿಂಬಾಬ್ವೆಯ ಚಾರ್ಲ್ಸ್ ಕಾವೆಂಟ್ರಿ ಅಜೇಯ 194 ರನ್ ಬಾರಿಸಿದ್ದು ಹಿಂದಿನ ದಾಖಲೆಯಾಗಿತ್ತು. ಇನ್ನು ವಿಶ್ವಕಪ್‌ನಲ್ಲಿ 1987ರಲ್ಲಿ ವೆಸ್ಟ್ ಇಂಡೀಸ್‌ನ ವಿವಿಯನ್ ರಿಚರ್ಡ್ಸ್ ಶ್ರೀಲಂಕಾ ವಿರುದ್ಧ ಕರಾಚಿಯಲ್ಲಿ 181 ರನ್ ಬಾರಿಸಿದ್ದು ದಾಖಲೆ ಎನಿಸಿತ್ತು.
2ನೇ ಅತ್ಯಂತ ವೇಗದ ದ್ವಿಶತಕ: ಏಕದಿನ ಕ್ರಿಕೆಟ್‌ನಲ್ಲಿ ಬಾಲ್ ಲೆಕ್ಕಾಚಾರದಲ್ಲಿ 2ನೇ ಅತ್ಯಂತ ವೇಗದ ದ್ವಿಶತಕ ಇದಾಗಿದೆ. 2022ರಲ್ಲಿ ಬಾಂಗ್ಲಾದೇಶ ವಿರುದ್ಧ ಇಶಾನ್ ಕಿಶನ್ 126 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದು ದಾಖಲೆಯಾಗಿದೆ. ಮ್ಯಾಕ್ಸ್‌ವೆಲ್ 128 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದಾರೆ.
ಅತ್ಯುತ್ತಮ ರನ್ ಚೇಸ್: ಮುಂಬೈನ ವಾಂಖೆಡೆ ಮೈದಾನದಲ್ಲಿ ತಂಡವೊಂದರ ಈವರೆಗಿನ ಅತ್ಯಂತ ಯಶಸ್ವಿ ರನ್ ಚೇಸ್ ಇದಾಗಿದೆ. ಇನ್ನು ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ
ಅತ್ಯುತ್ತಮ ರನ್ ಚೇಸ್ ಇದು.
ವಿಶ್ವಕಪ್‌ನಲ್ಲಿ ಎಂದೂ ಕಂಡರಿಯದ ಆಟವಾಡಿದ RCB ಪ್ಲೇಯರ್, ಸೋಲಿನಂಚಿನಲ್ಲಿದ್ದ ಆಸೀಸ್ ಗೆಲ್ಲಿಸಿದ ಮ್ಯಾಕ್ಸ್‌ವೆಲ್!
ಒಂದೇ ಇನ್ನಿಂಗ್ಸ್‌ನಲ್ಲಿ ಗರಿಷ್ಠ ಸಿಕ್ಸರ್: ಒಂದೇ ಇನ್ನಿಂಗ್ಸ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಮ್ಯಾಕ್ಸ್‌ವೆಲ್ ನಿರ್ವಹಣೆ 5ನೇ ಸ್ಥಾನಕ್ಕೇರಿತು. 2019ರಲ್ಲಿ ಅಫ್ಘಾನಿಸ್ತಾನ ವಿರುದ್ಧ ಮಾರ್ಗನ್ 17 ಸಿಕ್ಸರ್ ಸಿಡಿಸಿದ್ದು ದಾಖಲೆ. ನಂತರದ ಸ್ಥಾನದಲ್ಲಿ ಕ್ರಿಸ್f ಗೇಲ್ (16), ಮಾರ್ಟಿನ್ ಗುಪ್ಟಿಲ್ (11), ಫಖರ್ ಜಮಾನ್ (11) ಇದ್ದಾರೆ.
ತನ್ನ ತಾಯಿಗೆ ಇರೋ ಕೊರಗು ಇದೊಂದೇ, ಕೆಎಲ್ ರಾಹುಲ್ ಹೀಗಂದಿದ್ದೇಕೆ!