ಏಷ್ಯಾಕಪ್‌ಗೆ ಭಾರತ ತಂಡದಲ್ಲಿ ಶುಭ್‌ಮನ್ ಗಿಲ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಸಂಜು ಸ್ಯಾಮ್ಸನ್ ಓಪನರ್ ಆಗಿ ಉಳಿದಿದ್ದರೂ, ಗಿಲ್ ಆಗಮನದಿಂದ ಅವರ ಸ್ಥಾನಮಾನದ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಗಿಲ್ ಉಪನಾಯಕತ್ವ ಭವಿಷ್ಯದ ನಾಯಕತ್ವಕ್ಕೆ ಸೂಚನೆಯೇ?
ಮುಂಬೈ: ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟವಾದಾಗ ಶುಭ್‌ಮನ್ ಗಿಲ್ ಉಪನಾಯಕರಾಗಿ ಆಯ್ಕೆಯಾಗಿದ್ದು ಅಚ್ಚರಿ ಮೂಡಿಸಿದೆ. ಶುಭ್‌ಮನ್ ಗಿಲ್ ತಂಡದಲ್ಲಿ ಇರ್ತಾರೆ ಅಂತ ಹೇಳಲಾಗಿತ್ತಾದ್ರೂ ಯಶಸ್ವಿ ಜೈಸ್ವಾಲ್ ಮೂರನೇ ಓಪನರ್ ಆಗಿರ್ತಾರೆ ಅಂತಾನೂ ಸುದ್ದಿ ಇತ್ತು. ಆದ್ರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಮಿಂಚಿದ್ದ ಶುಭ್‌ಮನ್ ಗಿಲ್‌ಗೆ ಟಿ20 ಉಪನಾಯಕ ಸ್ಥಾನ ಕೊಟ್ಟಿರೋದು ಆಯ್ಕೆ ಸಮಿತಿಯ ಉದ್ದೇಶ ಸ್ಪಷ್ಟಪಡಿಸುತ್ತೆ. ಮೂರು ಮಾದರಿಯಲ್ಲೂ ಒಬ್ಬರೇ ನಾಯಕ ಅನ್ನೋ ಯೋಜನೆ ಹಿನ್ನೆಲೆಯಲ್ಲಿ ಶುಭ್‌ಮನ್ ಗಿಲ್‌ಗೆ ಈ ಸ್ಥಾನ ಸಿಕ್ಕಿದೆ. ಮುಂದಿನ ವರ್ಷ ಭಾರತ-ಶ್ರೀಲಂಕಾದಲ್ಲಿ ನಡೆಯೋ ಟಿ20 ವಿಶ್ವಕಪ್‌ನಲ್ಲಿ ಗಿಲ್ ನಾಯಕರಾಗ್ತಾರೆ ಅನ್ನೋದಕ್ಕೆ ಇದು ಸೂಚನೆ. ಅಕ್ಷರ್ ಪಟೇಲ್ ಬದಲು ಗಿಲ್ ಈಗ ಉಪನಾಯಕರಾಗಿ ನೇಮಕಗೊಂಡಿದ್ದಾರೆ.
ಇನ್ನು ಸಂಜು ಸ್ಯಾಮ್ಸನ್ ಏಷ್ಯಾಕಪ್ ತಂಡದಲ್ಲಿ ಓಪನರ್ ಆಗಿ ಉಳಿದಿದ್ದಾರೆ. ಆದ್ರೆ ಶುಭ್‌ಮನ್ ಗಿಲ್ ಬಂದ್ಮೇಲೆ ಸಂಜು ಮೂರನೇ ಓಪನರ್ ಆಗಿ ಉಳಿತಾರಾ ಅನ್ನೋ ಪ್ರಶ್ನೆಗೆ, ಇಬ್ಬರೂ ಚೆನ್ನಾಗಿ ಓಪನ್ ಮಾಡ್ತಾರೆ, ದುಬೈ ಪರಿಸ್ಥಿತಿ ನೋಡ್ಕೊಂಡು ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ತೀರ್ಮಾನ ಮಾಡ್ತಾರೆ ಅಂತ ಅಗರ್ಕರ್ ಹೇಳಿದ್ದಾರೆ.
ಅಭಿಷೇಕ್ ಶರ್ಮ ಓಪನರ್ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ಹಾಗಾಗಿ ಎರಡನೇ ಓಪನರ್ ಆಗಿ ಉಪನಾಯಕ ಗಿಲ್ ಬರ್ತಾರೆ. ಸಂಜು ಮುಖ್ಯ ವಿಕೆಟ್ ಕೀಪರ್ ಅಲ್ಲ ಅನ್ನೋದನ್ನೂ ಅಗರ್ಕರ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ತಂಡ ಪ್ರಕಟಣೆಯಲ್ಲಿ ಜಿತೇಶ್ ಶರ್ಮ ನಂತರ ಸಂಜು ಹೆಸರು ಹೇಳಿದ್ರು. ಶುಭ್‌ಮನ್ ಗಿಲ್, ಅಭಿಷೇಕ್ ಓಪನರ್ ಆದ್ರೆ ಜಿತೇಶ್ ಫಿನಿಷರ್ ಮತ್ತು ವಿಕೆಟ್ ಕೀಪರ್ ಆಗಿರ್ತಾರೆ. ಸಂಜು ಓಪನರ್ ಆಗಿ ಮಾತ್ರ ಆಡ್ತಾರೆ. ರಿಂಕು ಸಿಂಗ್, ಶಿವಂ ದುಬೆ ಫಿನಿಷರ್ ಆಗಿರೋದ್ರಿಂದ ಸಂಜು ಮಧ್ಯಮ ಕ್ರಮಾಂಕದಲ್ಲಿ ಆಡೋದು ಕಷ್ಟ. ತಿಲಕ್ ವರ್ಮ ಮೂರನೇ ಕ್ರಮಾಂಕ, ಸೂರ್ಯಕುಮಾರ್ ನಾಲ್ಕನೇ ಕ್ರಮಾಂಕ, ಹಾರ್ದಿಕ್ ಪಾಂಡ್ಯ ಐದನೇ ಕ್ರಮಾಂಕದಲ್ಲಿ ಆಡ್ತಾರೆ. ಹಾಗಾಗಿ ಸಂಜು ಓಪನರ್ ಆಗಿ ಮಾತ್ರ ಆಡಬಹುದು.
2024ರ ಐಸಿಸಿ ಟಿ20 ವಿಶ್ವಕಪ್ ಬಳಿಕ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಭಾರತ ಟಿ20 ತಂಡದಲ್ಲಿ ಆರಂಭಿಕರಾಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದರು. ಆದರೆ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ನಾಯಕರಾಗಿದ್ದ ಶುಭ್‌ಮನ್ ಗಿಲ್ 5 ಟೆಸ್ಟ್ ಪಂದ್ಯಗಳನ್ನಾಡಿ 754 ರನ್ ಸಿಡಿಸುವ ಮೂಲಕ ಭರ್ಜರಿ ಫಾರ್ಮ್‌ಗೆ ಮರಳಿದ್ದರು. ಹೀಗಾಗಿ ಗಿಲ್ ಇದೀಗ ಟಿ20 ತಂಡದಲ್ಲೂ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಬ್ಯಾಟರ್‌ಗಳು: ಸೂರ್ಯಕುಮಾರ್ ಯಾದವ್, ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್ ಹಾಗೂ ತಿಲಕ್ ವರ್ಮಾ, ರಿಂಕು ಸಿಂಗ್
ವಿಕೆಟ್ ಕೀಪರ್: ಸಂಜು ಸ್ಯಾಮ್ಸನ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್. ಎರಡನೇ ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಕ್ಕೆ ಜಿತೇಶ್ ಶರ್ಮಾ.
ಆಲ್ರೌಂಡರ್: ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್.
ಬೌಲಿಂಗ್ ವಿಭಾಗ: ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ.
ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ:
ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಕುಮಾರ್(ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹರ್ಷಿತ್ ರಾಣಾ, ರಿಂಕು ಸಿಂಗ್.
