IPL ಹರಾಜು: KKR ತಂಡದ ಆಯ್ಕೆ ಬಗ್ಗೆ ಕಿಡಿಕಾರಿದ ಗೌತಮ್ ಗಂಭೀರ್!

13ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ತಂಡದ ಆಯ್ಕೆಯ ಬಗ್ಗೆ ಮಾಜಿ ನಾಯಕ ಗೌತಮ್ ಗಂಭೀರ್ ಕಿಡಿಕಾರಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

IPL Player Auction 2020 Former Captain Gautam Gambhir Slams KKR For Lack Of Squad Depth

ಕೋಲ್ಕತಾ[ಡಿ.20]: 2020ರ ಐಪಿಎಲ್ಟೂರ್ನಿಗೆ ನಡೆದ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮಾಡಿದ ಎಡವಟ್ಟು ಮಾಡಿದೆ ಎಂದು ಕೆಕೆಆರ್ ಮಾಜಿ ನಾಯಕ ಗೌತಮ್ ಗಂಭೀರ್ ಕಿಡಿಕಾರಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಅಗ್ರ ಕ್ರಮಾಂಕದ ಬ್ಯಾಟ್ಸ್’ಮನ್’ಗಳು ಗಾಯಕ್ಕೆ ತುತ್ತಾದರೆ, ಮೀಸಲು ಆಟಗಾರರನ್ನೇ ಖರೀದಿಸಿಲ್ಲ ಎಂದು ಗಂಭೀರ್ ಅಸಮಾದಾನ ಹೊರಹಾಕಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡವು ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ಅವರನ್ನು 15.5 ಕೋಟಿ ನೀಡಿ ಖರೀದಿಸಿತ್ತು. ಹಾಗೆಯೇ ಇಂಗ್ಲೆಂಡ್’ಗೆ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಇಯಾನ್ ಮಾರ್ಗನ್ ಅವರನ್ನು 5.25 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.

IPL 2020: ಹರಾಜಿನ ಬಳಿಕ KKR ತಂಡದ ಸಂಪೂರ್ಣ ವಿವರ!

ಪ್ಯಾಟ್ ಕಮಿನ್ಸ್ ಅವರನ್ನು ಕೆಕೆಆರ್ ಖರೀದಿಸಿದ್ದು ಒಳ್ಳೆಯ ನಿರ್ಧಾರವಾಗಿದೆ. ಏಕೆಂದರೆ ಕಮಿನ್ಸ್ ಹೊಸ ಚೆಂಡಿನಲ್ಲಿ ವಿಕೆಟ್ ಕಬಳಿಸುವ ಸಾಮರ್ಥ್ಯ ಹೊಂದಿದ್ದಾರೆ. 2014ರಲ್ಲೂ ಕಮಿನ್ಸ್ ಕೆಕೆಆರ್ ತಂಡ ಸೇರಿಕೊಂಡಿದ್ದರು, ಅಲ್ಲಿಂದ ಇಲ್ಲಿಯವರೆಗೆ ಕಮಿನ್ಸ್ ಸಾಕಷ್ಟು ಪ್ರಬುದ್ಧರಾಗಿದ್ದಾರೆ. ಅವರು ಕೆಕೆಆರ್ ಪರ ಎಲ್ಲಾ ಪಂದ್ಯಗಳನ್ನು ಆಡಲಿದ್ದಾರೆ, ಅಲ್ಲದೇ ಮೂರ್ನಾಲ್ಕು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಲಿದ್ದಾರೆಂದು ಭಾವಿಸಿದ್ದೇನೆ. ಏಕೆಂದರೆ ಅಷ್ಟೊಂದು ಮೊತ್ತವನ್ನು ಜೇಬಿಗಿಳಿಸಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.

ಅನ್ ಸೋಲ್ಡ್ ಆಗಿ ಅಚ್ಚರಿ ಮೂಡಿಸಿದ ಟಾಪ್ 10 ಕ್ರಿಕೆಟಿಗರು

ಆದರೆ ಒಟ್ಟಾರೆ ತಂಡವನ್ನು ನೋಡಿದಾಗ ಆಂಡ್ರೆ ರಸೆಲ್, ಇಯಾನ್ ಮಾರ್ಗನ್, ಸುನಿಲ್ ನರೈನ್ ಅವರಂತಹ ಆಟಗಾರರಿಗೆ ಬ್ಯಾಕ್ ಅಪ್ ಆಟಗಾರರು ಬೇಕಾಗಿತ್ತು. ಇಯಾನ್ ಮಾರ್ಗನ್ ಗಾಯಕ್ಕೆ ತುತ್ತಾದರೆ, ಮಧ್ಯಮ ಕ್ರಮಾಂಕ ದುರ್ಬಲವಾಗಲಿದೆ ಎಂದು ಗಂಭೀರ್ ಹೇಳಿದ್ದಾರೆ. ತಂಡವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಕೆಆರ್ ಫ್ರಾಂಚೈಸಿ ಮಿಚೆಲ್ ಮಾರ್ಷ್ ಇಲ್ಲವೇ ಮಾರ್ಕಸ್ ಸ್ಟೋನಿಸ್ ಅವರನ್ನು ಖರೀದಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ಯಾಟ್ ಕಮಿನ್ಸ್ ಗಾಯಕ್ಕೆ ತುತ್ತಾದರೆ ಲೂಕಿ ಫರ್ಗ್ಯೂಸನ್ ಅವರ ಸ್ಥಾನವನ್ನು ತುಂಬಬಹುದು ಎಂದು ಹೇಳಿದ್ದಾರೆ. 

ಗೌತಮ್ ಗಂಭೀರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು 2012 ಹಾಗೂ 2014ರಲ್ಲಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 

Latest Videos
Follow Us:
Download App:
  • android
  • ios