Asianet Suvarna News Asianet Suvarna News

ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಸ್ಟ್ರೀಕ್‌ ಭ್ರಷ್ಟಾಚಾರ: 8 ವರ್ಷ ನಿಷೇಧ

ಬುಕಿಯೊಬ್ಬನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಭ್ರಷ್ಟಾಷಾರ, ಮಾಹಿತಿ ಮುಚ್ಚಿಟ್ಟಿದ್ದು, ಆಟಗಾರರು, ಕೋಚ್‌ ಇಲ್ಲವೇ ತಂಡದ ಮಾಲಿಕರಿಗೆ ಭ್ರಷ್ಟಾಚಾರದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿದ್ದು ಸೇರಿ ಒಟ್ಟು 5 ನಿಯಮಗಳನ್ನು ಮುರಿದ ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಹೀಥ್ ಸ್ಟ್ರೀಕ್‌ ಮೇಲೆ ಐಸಿಸಿ 8 ವರ್ಷಗಳ ಕಾಲ ನಿಷೇಧ ಹೇರಿದೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ.‌

Former Zimbabwe captain Heath Streak handed 8 year ban for corruption Case kvn
Author
Dubai - United Arab Emirates, First Published Apr 15, 2021, 9:00 AM IST

ದುಬೈ(ಏ.15): ಭಾರತೀಯ ಬುಕಿಯೊಬ್ಬನ ಜೊತೆ ಸಂಪರ್ಕ ಹೊಂದಿದ್ದರ ಜೊತೆಗೆ, ಆತನೊಂದಿಗೆ ಐಪಿಎಲ್‌ ಸೇರಿದಂತೆ ಅನೇಕ ಟೂರ್ನಿಗಳ ಮಾಹಿತಿಯನ್ನು ಹಂಚಿಕೊಂಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ, ಜಿಂಬಾಬ್ವೆ ಕ್ರಿಕೆಟ್‌ ತಂಡದ ಮಾಜಿ ನಾಯಕ ಹೀಥ್‌ ಸ್ಟ್ರೀಕ್‌ರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) 8 ವರ್ಷಗಳ ಕಾಲ ಕ್ರಿಕೆಟ್‌ ಚಟುವಟಿಕೆಗಳಿಂದ ನಿಷೇಧಗೊಳಿಸಿದೆ.

‘ಮಿಸ್ಟರ್‌ ಎಕ್ಸ್‌’(ಬುಕಿ) ಜೊತೆ ಸ್ಟ್ರೀಕ್‌, 15 ತಿಂಗಳಿಗೂ ಹೆಚ್ಚು ಸಮಯ ಸಂಪರ್ಕದ್ದಲ್ಲಿದ್ದರು. ಜೊತೆಗೆ ಆತನಿಂದ 2 ಬಿಟ್‌ ಕಾಯಿನ್‌ (ತಲಾ 35000 ಡಾಲರ್‌ ಮೌಲ್ಯ), ಒಂದು ಐಫೋನ್‌ ಉಡುಗೊರೆಯಾಗಿ ಪಡೆದಿದ್ದರು ಎನ್ನುವುದನ್ನು ಐಸಿಸಿ ಭ್ರಷ್ಟಾಚಾರ ನಿಗ್ರಹ ದಳದಿಂದ ಮುಚ್ಚಿಟ್ಟಿದ್ದರು. ಐಸಿಸಿ ವಿಚಾರಣೆ ವೇಳೆ ಸ್ಟ್ರೀಕ್‌ ತಪ್ಪೊಪ್ಪಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌ (ಬಿಪಿಎಲ್‌)ನಲ್ಲಿ ಮೂವರು ಆಟಗಾರರನ್ನು ಬುಕಿಗೆ ಪರಿಚಯಿಸಿದ್ದ ಸ್ಟ್ರೀಕ್‌, ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ಟಿ20 ಲೀಗ್‌ಗಳಲ್ಲೂ ತಂಡದ ಡ್ರೆಸ್ಸಿಂಗ್‌ ರೂಮ್‌ ಮಾಹಿತಿಗಳನ್ನು ಬುಕ್ಕಿಯೊಂದಿಗೆ ಹಂಚಿಕೊಂಡಿದ್ದರು. ಈ ಲೀಗ್‌ಗಳಲ್ಲಿ ಸ್ಟ್ರೀಕ್‌ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. ಐಪಿಎಲ್‌ನಲ್ಲಿ ಕೆಕೆಆರ್‌ನ ಬೌಲಿಂಗ್‌ ಆಗಿದ್ದ ವೇಳೆ, 2018ರಲ್ಲಿ ನಡೆದಿದ್ದ ಜಿಂಬಾಬ್ವೆ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ತ್ರಿಕೋನ ಸರಣಿ ವೇಳೆಯೂ ಮಾಹಿತಿ ಹಂಚಿಕೆ ನಡೆದಿತ್ತು ಎಂದು ತಿಳಿದುಬಂದಿದೆ.

ಐಸಿಸಿ ಏಕದಿನ ರ‍್ಯಾಂಕಿಂಗ್‌: ಕೊಹ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಬಾಬರ್‌ ಅಜಂ

2017ರಲ್ಲಿ ಬುಕಿ ಜೊತೆ ಸಂಪರ್ಕಕ್ಕೆ ಬಂದಿದ್ದ ಸ್ಟ್ರೀಕ್‌, ಜಿಂಬಾಬ್ವೆಯಲ್ಲಿ ಟಿ20 ಲೀಗ್‌ ಆರಂಭಿಸಲು ಸಹಾಯ ಮಾಡುವಂತೆ ಆತನ ಮನವಿಗೆ ಒಪ್ಪಿದ್ದರು. ಹೊರ ದೇಶದಲ್ಲಿರುವ ತಮ್ಮ ಬ್ಯಾಂಕ್‌ ಖಾತೆಯ ವಿವರಗಳನ್ನು ಬುಕಿ ಜೊತೆ ಹಂಚಿಕೊಂಡಿದ್ದ ಸ್ಟ್ರೀಕ್‌, ವಿವಿಧ ಲೀಗ್‌ಗಳ ಡ್ರೆಸ್ಸಿಂಗ್‌ ರೂಮ್‌ ಮಾಹಿತಿಯನ್ನು ನೀಡಲು ಸಹ ಒಪ್ಪಿದ್ದರು.

ಐಸಿಸಿ ಭ್ರಷ್ಟಾಚಾರ ನಿಗ್ರಹ ದಳ ನಡೆಸಿದ್ದ ವಿಚಾರಣೆ ವೇಳೆ ಯಾವ ರೀತಿ ಹೇಳಿಕೆಗಳನ್ನು ನೀಡಬೇಕು ಎಂದು ಬುಕಿಯಿಂದ ಸಲಹೆ ಪಡೆದಿದ್ದರು ಎನ್ನುವುದ ಸಹ ತಿಳಿದುಬಂದಿದೆ. ಭ್ರಷ್ಟಾಷಾರ, ಮಾಹಿತಿ ಮುಚ್ಚಿಟ್ಟಿದ್ದು, ಆಟಗಾರರು, ಕೋಚ್‌ ಇಲ್ಲವೇ ತಂಡದ ಮಾಲಿಕರಿಗೆ ಭ್ರಷ್ಟಾಚಾರದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿದ್ದು ಸೇರಿ ಒಟ್ಟು 5 ನಿಯಮಗಳನ್ನು ಸ್ಟ್ರೀಕ್‌ ಮುರಿದಿರುವುದಾಗಿ ಐಸಿಸಿ ತಿಳಿಸಿದೆ. 2029ರಲ್ಲಿ ಸ್ಟ್ರೀಕ್‌ ಪುನಃ ಕ್ರಿಕೆಟ್‌ ಚಟುವಟಿಕೆಗೆ ಹಿಂದಿರುಗಬಹುದಾಗಿದೆ.
 

Follow Us:
Download App:
  • android
  • ios