ಮೇರಠ್‌(ಡಿ.16): ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌ ಪ್ರವೀಣ್‌ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಶನಿವಾರ ಇಲ್ಲಿ ತಮ್ಮ ಪಕ್ಕದ ಮನೆಯ ವ್ಯಕ್ತಿ ಹಾಗೂ ಆತನ ಮಗನ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.

ಪದಾರ್ಪಣಾ ಪಂದ್ಯದಲ್ಲಿ ಶತಕ: ಅಪರೂಪದ ದಾಖಲೆ ಬರೆದ ಪಾಕ್ ಕ್ರಿಕೆಟಿಗ..!

ದೀಪಕ್‌ ಶರ್ಮಾ ಎಂಬುವವರು ಹಲ್ಲೆಗೆ ಒಳಗಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ‘ಮಧ್ಯಾಹ್ನ 3 ಗಂಟೆಗೆ ನಾನು ನನ್ನ ಮಗನನ್ನು ಶಾಲಾ ವಾಹನದಿಂದ ಇಳಿಸಿಕೊಳ್ಳುತ್ತಿದ್ದೆ. ಆ ಸಮಯದಲ್ಲಿ ತಮ್ಮ ಕಾರ್‌ನಲ್ಲಿ ಬಂದ
ಪ್ರವೀಣ್‌, ದಾರಿ ಬಿಡುವಂತೆ ಗಲಾಟೆ ಮಾಡಿದರು. ಶಾಲಾ ಬಸ್‌ ನಿಂತಿದ್ದರಿಂದ ಕಾರ್‌ ಹೋಗಲು ಜಾಗವಿರಲಿಲ್ಲ. ಇದಕ್ಕಾಗಿ ಪ್ರವೀಣ್‌ ಕಾರ್‌ನಿಂದ ಕೆಳಕ್ಕಿಳಿದು ನನ್ನ ಮೇಲೆ ಹಲ್ಲೆ ಮಾಡಿದರು. ನನ್ನ ಮಗನನ್ನು
ತಳ್ಳಿದರು. ಇಬ್ಬರಿಗೂ ಗಾಯವಾಗಿದೆ’ ಎಂದು ದೀಪಕ್‌ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಟೀಂ ಇಂಡಿಯಾಗೆ ಗುಡ್ ಬೈ ಹೇಳಿದ ಸ್ವಿಂಗ್ ವೇಗಿ!

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರವೀಣ್ ಕುಮಾರ್, ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾಗಿವೆ. ನಾನು ಮಗುವನ್ನು ತಳ್ಳಿಲ್ಲ, ಬದಲಾಗಿ ಶರ್ಮಾ ನನ್ನ ಕೊರಳಲ್ಲಿರುವ ಚೈನ್ ಹಿಡಿದು ನೂಕಿದರು. ಜತೆಗೆ ಮುಖದ ಮೇಲೆ ಗುದ್ದಿದರು ಎಂದು ಹೇಳಿದ್ದಾರೆ.

ಪ್ರವೀಣ್ ಕುಮಾರ್ ಭಾರತ ಪರ 68 ಏಕದಿನ ಹಾಗೂ 6 ಟೆಸ್ಟ್ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 77 ಹಾಗೂ 27 ವಿಕೆಟ್ ಕಬಳಿಸಿದ್ದರು. ಇನ್ನು ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಿಂಗ್ಸ್ ಇಲೆವನ್ ಪಂಜಾಬ್, ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಪರ ಕಾಣಿಸಿಕೊಂಡಿದ್ದರು.