ಮುಂಬೈ(ಆ.19): 2011ರ ಏಕ​ದಿನ ವಿಶ್ವ​ಕಪ್‌ ಫೈನಲ್‌ನಲ್ಲಿ ಎಂ.ಎಸ್‌.ಧೋನಿ ಬಾರಿ​ಸಿದ ಗೆಲು​ವಿನ ಸಿಕ್ಸರ್‌ ಅನ್ನು ಯಾರು ತಾನೆ ಮರೆ​ಯಲು ಸಾಧ್ಯ. ಇದೀಗ ಅದಕ್ಕೆ ಮತ್ತಷ್ಟು ಗೌರವ ನೀಡಲು ವಾಂಖೆಡೆ ಮೈದಾನ ಸಜ್ಜಾಗಿದೆ 

ಧೋನಿ ಅಂತಾರಾಷ್ಟ್ರೀಯ ​ಕ್ರಿ​ಕೆಟ್‌ನಿಂದ ನಿವೃತ್ತಿ ಪಡೆದ ಬೆನ್ನಲ್ಲೆ, ಮುಂಬೈ ಕ್ರಿಕೆಟ್‌ ಸಂಸ್ಥೆ(ಎಂಸಿಎ)ಯ ಅಪೆಕ್ಸ್‌ ಸಮಿ​ತಿಯ ಸದಸ್ಯ ಅಜಿಂಕ್ಯ ನಾಯ್ಕ್, ಧೋನಿ ಸಿಕ್ಸರ್‌ ಬಾರಿ​ಸಿ​ದಾಗ ಚೆಂಡು ಯಾವ ಆಸನದ ಮೇಲೆ ಬೀಳು​ತ್ತಿತ್ತೋ ಆ ಆಸನವನ್ನು ಗುರು​ತಿಸಿ ಅದಕ್ಕೆ ಧೋನಿ ಹೆಸ​ರನ್ನೇ ಇಡಲು ಎಂಸಿಎ ಮುಂದೆ ಪ್ರಸ್ತಾಪವಿರಿ​ಸಿ​ದ್ದಾರೆ. ಈ ಪ್ರಸ್ತಾಪವನ್ನು ಎಂಸಿಎ ಅಧಿ​ಕಾ​ರಿ​ಗಳು ಪರಿ​ಗ​ಣಿ​ಸಿದ್ದು, ಸದ್ಯ​ದಲ್ಲೇ ಅಧಿ​ಕೃತ ಪ್ರಕ​ಟ​ಣೆ ಹೊರ​ಬೀ​ಳುವ ನಿರೀಕ್ಷೆ ಇದೆ.

"

ಧೋನಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ: ಐಸಿಸಿ

ದುಬೈ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಎಲ್ಲಾ ಪೀಳಿಗೆಗೆ ಸ್ಫೂರ್ತಿಯಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಆಟದಿಂದ ವಂಚಿತರಾಗಲಿದ್ದೇವೆ ಎಂದು ಐಸಿಸಿ ಮುಖ್ಯ ಕಾರ‍್ಯನಿರ್ವಾಹಕ ಮನು ಸಾವ್ನೆ ಹೇಳಿದ್ದಾರೆ.

ಧೋನಿ ಮೊದಲು ಸಹಿ ಮಾಡಿದ ಪ್ರಮುಖ ಬ್ರ್ಯಾಂಡ್‌ ಕರ್ನಾಟಕದ್ದು, ಆ ಮೇಲಿನ ವಿವಾದ ನಿಮಗೆ ನೆನಪಿದೆಯಾ..?

ಐಸಿಸಿಯ 3 ಟ್ರೋಫಿಗಳನ್ನು ಗೆದ್ದ ಮೊದಲ ನಾಯಕ ಎನಿಸಿಕೊಂಡಿದ್ದ 39 ವರ್ಷದ ಧೋನಿ, ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಕ್ರಿಕೆಟ್‌ನಲ್ಲಿ ಧೋನಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾಗಿದ್ದಾರೆ. 2011ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಧೋನಿ ಮಾಡಿದ ಚಮತ್ಕಾರವನ್ನು ವಿಶ್ವದಾದ್ಯಂತ ಅಭಿಮಾನಿಗಳು ಈಗಲೂ ನೆನೆಯುತ್ತಾರೆ. ಅತ್ಯುತ್ತಮ ಕ್ರಿಕೆಟ್‌ ಜೀವನಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಮುಂದಿನ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇನೆ ಎಂದು ಮನು ಹೇಳಿದ್ದಾರೆ. 

"