- Home
- Sports
- Cricket
- ಧೋನಿ ಮೊದಲು ಸಹಿ ಮಾಡಿದ ಪ್ರಮುಖ ಬ್ರ್ಯಾಂಡ್ ಕರ್ನಾಟಕದ್ದು, ಆ ಮೇಲಿನ ವಿವಾದ ನಿಮಗೆ ನೆನಪಿದೆಯಾ..?
ಧೋನಿ ಮೊದಲು ಸಹಿ ಮಾಡಿದ ಪ್ರಮುಖ ಬ್ರ್ಯಾಂಡ್ ಕರ್ನಾಟಕದ್ದು, ಆ ಮೇಲಿನ ವಿವಾದ ನಿಮಗೆ ನೆನಪಿದೆಯಾ..?
ಆಗಸ್ಟ್ 15ರಂದು ಮಹೇಂದ್ರ ಸಿಂಗ್ ಧೋನಿ ತಮ್ಮ 16 ವರ್ಷಗಳ ವರ್ಣರಂಜಿತ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಧೋನಿ ಕೆಲವೇ ವರ್ಷಗಳಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದು ನಿಂತರು. ಇದರ ಬೆನ್ನಲ್ಲೇ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಳ್ಳಲು ಹಲವು ಕಂಪನಿಗಳು ಧೋನಿ ಮನೆ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದವು. ಆದರೆ ಸಾಕಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ, ಧೋನಿ ಸಹಿ ಮಾಡಿದ ಮೊದಲ ಪ್ರಮುಖ ಕಂಪನಿ ಕರ್ನಾಟಕದ್ದೆಂದು. ಇದಾದ ಒಂದು ದೊಡ್ಡ ವಿವಾದವೇ ನಡೆದುಹೊಯಿತು. ಕರ್ನಾಟಕದ ಕಂಪನಿ ಧೋನಿಯಿಂದ ಆರೂವರೆ ಕೋಟಿ ನೀಡುವಂತೆ ಬೇಡಿಕೆಯಿಟ್ಟಿತ್ತು. ಏನಿದು ವಿವಾದ..? ಅಂತಿಮ ಏನೆಲ್ಲಾ ಆಯ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

2004ರ ಡಿಸೆಂಬರ್‌ನಲ್ಲಿ ಧೋನಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಚಿತ್ತಗಾಂಗ್‌ನಲ್ಲಿ ಬ್ಲೂ ಜೆರ್ಸಿ ತೊಟ್ಟು ಮೈದಾನಕ್ಕಿಳಿದ ಧೋನಿ ಶೂನ್ಯ ಸುತ್ತಿ ರನೌಟ್ ಆಗಿ ಪೆವಿಲಿಯನ್ ಸೇರಿದ್ದರು.

ಆದರೆ ಆರಂಭಿಕ ವೈಫಲ್ಯದಿಂದ ಬೇಗನೇ ಮೈ ಕೊಡುವಿ ನಿಲ್ಲುವಲ್ಲಿ ಮಹಿ ಯಶಸ್ವಿಯಾದರು. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಮನೆ ಮಾತಾದ ಧೋನಿ ಆ ಬಳಿಕ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ಬೆಳೆದು ನಿಂತಿದ್ದು ನಮ್ಮ ನಿಮ್ಮೆಲ್ಲರ ಕಣ್ಣ ಮುಂದೆ ನಡೆದ ಅಚ್ಚರಿ.

ಇದಾಗಿ ಎರಡು ವರ್ಷಗಳ ಬಳಿಕ ಅಂದರೆ 2006ರಲ್ಲಿ ಮಹೇಂದ್ರ ಸಿಂಗ್ ಧೋನಿ ಕರ್ನಾಟಕದ ಪ್ರಮುಖ ಉತ್ಫನ್ನವೊಂದಕ್ಕೆ ಅಂಬಾಸಿಡರ್ ಆಗಿ ಒಪ್ಪಂದಕ್ಕೆ ಸಹಿ ಹಾಕಿದರು.

ಕರ್ನಾಟಕದ ಉತ್ಫನ್ನವಾದ ಮೈಸೂರ್ ಸ್ಯಾಂಡಲ್ ಸೋಪ್‌ಗೆ ಮೊದಲ ಬ್ರ್ಯಾಂಡ್ ಅಂಬಾಸಿಡರ್ ಆಗಿ ಧೋನಿ ಆಯ್ಕೆಯಾಗಿದ್ದರು.

ಮಹೇಂದ್ರ ಸಿಂಗ್ ಧೋನಿ ನಮ್ಮ ರಾಜ್ಯ ಸರ್ಕಾರದ ಒಡೆತನದ ಕರ್ನಾಟಕ ಸೋಪ್ಸ್ ಮತ್ತ ಡಿಟರ್ಜೆಂಟ್ ಲಿಮಿಟೆಡ್ಸ್(KSDL)ನ ಖ್ಯಾತ ಉತ್ಫನ್ನವಾದ ಮೈಸೂರ್ ಸ್ಯಾಂಡಲ್ ಸೋಪ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕವಾದರು.

ಮೈಸೂರ್ ಸ್ಯಾಂಡಲ್ ಸೋಪಿನ 10 ದಿನದ ಶೂಟಿಂಗ್‌ಗೆ 70 ಲಕ್ಷ ರುಪಾಯಿ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕಂಪನಿ ಹೇಳುವಂತೆ ಧೋನಿ ತಾವು ಮೂರು ದಿನಗಳು ಮಾತ್ರ ಶೂಟಿಂಗ್‌ಗೆ ಲಭ್ಯವಿರುವುದಾಗಿ ಹೇಳಿದರು ಎಂದು ಆರೋಪಿಸಿದೆ.

ಬಳಿಕ ಇದು ಕಾನೂನು ಹೋರಾಟಕ್ಕೆ ಎಡೆ ಮಾಡಿಕೊಟ್ಟಿತು. ಧೋನಿಯಿಂದ ತಮಗೆ ಆರೂವರೆ ಕೋಟಿ ನಷ್ಟಭತ್ಯೆಯನ್ನು ನೀಡಬೇಕೆಂದು KSDL ಸಂಸ್ಥೆ ಕೋರ್ಟ್ ಮೆಟ್ಟಿಲೇರಿತು.

ಇದರ ಬೆನ್ನಲ್ಲೇ ಕಂಪನಿಯು ಒಪ್ಪಂದದ ನೀತಿ ನಿಬಂಧನೆಗಳನ್ನು ಉಲ್ಲಂಘಿಸಿದೆ, ಹೀಗಾಗಿ ತಮಗೆ 6 ಕೋಟಿ ರುಪಾಯಿ ನೀಡಬೇಕು ಎಂದು ಧೋನಿ ಕೋರ್ಟ್ ಮೆಟ್ಟಿಲೇರಿದರು.

ಬರೋಬ್ಬರಿ 5 ವರ್ಷಗಳ ಕಾನೂನು ಹೋರಾಟದ ಬಳಿಕ ಧೋನಿ 2012ರಲ್ಲಿ ಆ ಕೇಸನ್ನು ಗೆದ್ದುಕೊಂಡರು. ಬಳಿಕ ಧೋನಿ ಹಲವು ಕಂಪನಿಗಳಲ್ಲಿ ಬ್ರ್ಯಾಂಡ್ ಅಂಬಾಸಿಡರ್ ಅಗಿ ಮಿಂಚಿದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.