ಜೈಪುರ(ಡಿ.31): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್‌ ಪ್ರಯಾಣಿಸುತ್ತಿದ್ದ SUV ಕಾರು ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ದು, ಅದೃಷ್ಟವಶಾತ್ ಅಜರುದ್ದೀನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೈಪುರ ಸಮೀಪದ ಸವಾಯಿ ಮಾಧವಪುರ ಜಿಲ್ಲೆಯ ಬಳಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಮೊಹಮ್ಮದ್ ಅಜರುದ್ದೀನ್ ಇದ್ದ ಕಾರು ನುಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಅಜರುದ್ದೀನ್ ಜತೆ ಮತ್ತೆ ಮೂವರು ಪ್ರಯಾಣ ನಡೆಸುತ್ತಿದ್ದರು. ಇವರಲ್ಲಿ ಕೆಲವರಿಗೆ ಲಘು ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಪ್ರಯಾಣ ಮುಂದುವರೆಸಿದರು ಎನ್ನಲಾಗಿದೆ.

ಹನಿಮೂನ್ ಸ್ಟ್ಪಾಟ್ ರಿವೀಲ್ ಮಾಡದ ಚಾಹಲ್ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ!

ಕ್ರಿಕೆಟ್‌ ವಿದಾಯ ಹೇಳಿರುವ ಮೊಹಮ್ಮದ್ ಅಜರುದ್ದೀನ್ ಇದೀಗ ರಾಜಕೀಯದಲ್ಲಿ ಕಮಾಲ್‌ ಮಾಡುತ್ತಿದ್ದು, ಮೊರಾದಬಾದ್‌ನ ಕಾಂಗ್ರೆಸ್ ಪಕ್ಷದ ಸಂಸದರಾಗಿದ್ದಾರೆ. 57 ವರ್ಷದ ಮೊಹಮ್ಮದ್ ಅಜರುದ್ದೀನ್ 99 ಟೆಸ್ಟ್, 334 ಏಕದಿನ ಪಂದ್ಯಗಳನ್ನಾಡಿದ್ದು ಕ್ರಮವಾಗಿ 6215 ಹಾಗೂ 9378 ರನ್ ಬಾರಿಸಿದ್ದಾರೆ.