ಭಾರತದ ಕ್ರಿಕೆಟ್ ದಂತಕಥೆ ಸಲೀಂ ದುರಾನಿ ನಿಧನ1960ರ ದಶಕದಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ಟೀಂ ಇಂಡಿಯಾ ಆಲ್ರೌಂಡರ್ಜನರು ಕೇಳಿದಾಗಲೆಲ್ಲ ಸಿಕ್ಸರ್ ಚಚ್ಚುತ್ತಿದ್ದ ದುರಾನಿ

ನವ​ದೆ​ಹ​ಲಿ(ಏ.03): 1960ರ ದಶ​ಕ​ದಲ್ಲಿ ಭಾರ​ತೀ​ಯ ಕ್ರಿಕೆ​ಟ್‌​ನಲ್ಲಿ ಭಾರೀ ಜನ​ಪ್ರಿ​ಯತೆ ಗಳಿ​ಸಿದ್ದ ಸಲೀಂ ದುರಾನಿ(88) ಭಾನು​ವಾರ ನಿಧ​ನ​ರಾ​ಗಿ​ದ್ದಾರೆ. ಈ ವರ್ಷ ಜನವರಿಯಲ್ಲಿ ಬಿದ್ದು ತೊಡೆಯ ಮೂಳೆ ಮುರಿ​ತ​ಕ್ಕೊ​ಳ​ಗಾ​ಗಿದ್ದ ಸಲೀಂ ಭಾನು​ವಾರ ಗುಜ​ರಾ​ತ್‌ನ ಜಾಮ್‌ನಗರದಲ್ಲಿರುವ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು.

ಸಲೀಂ 1934ರಲ್ಲಿ ಕಾಬೂ​ಲ್‌​ನಲ್ಲಿ ಜನಿ​ಸಿದ್ದರು. ಬಳಿಕ ಅವರ ಕುಟುಂಬ ಭಾರ​ತಕ್ಕೆ ಬಂದು ನೆಲೆ​ಸಿತ್ತು. 1960ರಿಂದ 1973ರ ವರೆಗೆ ಭಾರತ ಪರ 29 ಟೆಸ್ಟ್‌ ಪಂದ್ಯ ಆಡಿ​ರುವ ಅವರು, ಅರ್ಜುನ ಪ್ರಶಸ್ತಿ ವಿಜೇತ ಮೊದಲ ಭಾರ​ತೀ​ಯ ಕ್ರಿಕೆ​ಟಿಗ ಎಂಬ ಖ್ಯಾತಿಗೂ ಪಾತ್ರ​ರಾ​ಗಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗುಜರಾತ್‌, ರಾಜಸ್ಥಾನ, ಸೌರಾಷ್ಟ್ರ ತಂಡಗಳನ್ನು ಪ್ರತಿನಿಧಿಸಿದ್ದು, 170 ಪಂದ್ಯ​ಗ​ಳಲ್ಲಿ 8,545 ರನ್‌ ಸಿಡಿ​ಸಿ​ದ್ದಾರೆ. ಸಲೀಂ, 1973ರಲ್ಲಿ ಛರಿತ್ರಾ ಎನ್ನುವ ಬಾಲಿ​ವುಡ್‌ ಸಿನೆ​ಮಾದಲ್ಲೂ ನಟಿ​ಸಿ​ದ್ದರು.

ಸ್ಪೋಟಕ ಎಡಗೈ ಬ್ಯಾಟರ್ ಸಲೀಂ ದುರಾನಿ, ಭಾರತ ಪರ 29 ಟೆಸ್ಟ್‌ ಪಂದ್ಯಗಳನ್ನಾಡಿ 1,202 ರನ್ ಹಾಗೂ 75 ವಿಕೆಟ್‌ ಕಬಳಿಸಿದ್ದರು. ಭಾರತ ಕ್ರಿಕೆಟ್‌ ತಂಡವು 1971ರಲ್ಲಿ ಮೊದಲ ಬಾರಿಗೆ ವೆಸ್ಟ್‌ ಇಂಡೀಸ್ ಎದುರು ಟೆಸ್ಟ್‌ ಗೆಲ್ಲುವಲ್ಲಿ ಸಲೀಂ ದುರಾನಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಈ ಪಂದ್ಯದಲ್ಲೇ ಕ್ರಿಕೆಟ್‌ ದಿಗ್ಗಜ ಸುನಿಲ್ ಗವಾಸ್ಕರ್ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಸಲೀಂ ದುರಾನಿ ಕ್ಲೈವ್ ಲಾಯ್ಡ್‌ ಹಾಗೂ ಗ್ಯಾರಿ ಸೋಬರ್ಸ್‌ ವಿಕೆಟ್‌ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ದುರಾನಿ 17 ಓವರ್ ಬೌಲಿಂಗ್‌ ಮಾಡಿ ಕೇವಲ 21 ರನ್ ನೀಡಿದ್ದರು. ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡವು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು.

IPL 2023 ಆರ್‌ಸಿಬಿ ಘರ್ಜನೆಗೆ ಮುಂಬೈ ಸೈಲೆಂಟ್, ಮೊದಲ ಪಂದ್ಯದಲ್ಲಿ ಬೆಂಗಳೂರಿಗೆ 8 ವಿಕೆಟ್ ಗೆಲುವು!

ಮೋದಿ ಸಂತಾ​ಪ:

Scroll to load tweet…

ದುರಾನಿ ನಿಧ​ನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿ​ಸಿದ್ದು, ಸಲೀಂ ಕ್ರಿಕೆ​ಟ್‌ನ ದಂತ​ಕತೆ ಎಂದು ಬಣ್ಣಿ​ಸಿ​ದ್ದಾರೆ. ‘ಸಲೀಂ ಕ್ರಿಕೆ​ಟ್‌ ಜಗತ್ತಿನಲ್ಲಿ ಭಾರತದ ಉದಯಕ್ಕೆ ಪ್ರಮುಖ ಕೊಡುಗೆ ನೀಡಿದವರು. ಮೈದಾನದ ಒಳಗೆ ಮತ್ತು ಹೊರಗೆ ಅವರು ತಮ್ಮ ಶೈಲಿಗೆ ಹೆಸರುವಾಸಿಯಾಗಿದ್ದರು. ಅವರ ನಿಧನದಿಂದ ನೋವಾಗಿದೆ’ ಎಂದು ಟ್ವೀಟ್‌ ಮಾಡಿ​ದ್ದಾ​ರೆ. ರವಿ ಶಾಸ್ತ್ರಿ, ಸಚಿನ್‌, ವಿವಿ​ಎಸ್‌ ಲಕ್ಷ್ಮಣ್‌ ಸೇರಿ​ದಂತೆ ಹಲವು ಮಾಜಿ ಕ್ರಿಕೆ​ಟಿ​ಗ​ರು ಸಲೀಂ ನಿಧ​ನಕ್ಕೆ ಸಂತಾಪ ಸೂಚಿ​ಸಿ​ದ್ದಾರೆ.

Scroll to load tweet…

ಜನ ಕೇಳಿ​ದಾ​ಗ ಸಿಕ್ಸ್‌ ಹೊಡೀ​ತಿ​ದ್ರು!

Scroll to load tweet…

ಸಲೀಂ ಅವರು ಅಭಿ​ಮಾ​ನಿ​ಗಳ ಬೇಡಿ​ಕೆಗೆ ಅನು​ಸಾ​ರ​ವಾಗಿ ಸಿಕ್ಸರ್‌ ಸಿಡಿ​ಸು​ವು​ದ​ರಲ್ಲಿ ಹೆಸ​ರು​ವಾ​ಸಿ​ಯಾ​ಗಿ​ದ್ದರು. ಕ್ರೀಡಾಂಗ​ಣ​ದಲ್ಲಿ ನೆರೆ​ದಿದ್ದ ಪ್ರೇಕ್ಷ​ಕರು ಸಿಕ್ಸ​ರ್‌...​ಸಿ​ಕ್ಸರ್‌...ಎಂದು ಕೂಗಿದರೆ ಮುಂದಿನ ಎಸೆ​ತ​ದಲ್ಲೇ ಸಲೀಂ ಸಿಕ್ಸರ್‌ ಬಾರಿ​ಸಿ ಅಭಿ​ಮಾ​ನಿ​ಗ​ಳನ್ನು ರಂಜಿ​ಸು​ತ್ತಿ​ದ್ದ​ರು.