ಕೊಲಂಬೊ(ಮಾ.24): ವಾರದ ಹಿಂದೆ ಯುರೋಪ್‌ನಿಂದ ವಾಪಾಸಾಗಿರುವ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ್‌ ಸಂಗಕ್ಕಾರ, ಕೊರೋನಾ ವೈರಸ್‌ ಭೀತಿಯಿಂದಾಗಿ 14 ದಿನಗಳ ಕಾಲ ಸ್ವಯಂ ದಿಗ್ಬಂಧನ ಹಾಕಿಕೊಂಡಿರುವುದಾಗಿ ಹೇಳಿದ್ದಾರೆ. 

ಉಚಿತವಾಗಿ ಸಾವಿರಾರು ಮಾಸ್ಕ್‌ ಹಂಚಿ ಮಾನವೀಯತೆ ಮೆರೆದ ಪಠಾಣ್‌ ಸಹೋದರರು

‘ನನಗೆ ಯಾವುದೇ ರೀತಿಯ ಸೋಂಕು ತಗುಲಿಲ್ಲ. ಆದರೆ ನಾನು ಸರ್ಕಾರದ ನಿಯಮಗಳನ್ನು ಪಾಲಿಸುತ್ತಿದ್ದೇನೆ’ ಎಂದು ಸಂಗಕ್ಕಾರ, ಸ್ಥಳೀಯ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. ಕೊರೋನಾ ವೈರಸ್‌ ವ್ಯಾಪಿಸುತ್ತಿರುವುದರಿಂದಾಗಿ ಬಾಂಗ್ಲಾ ಕ್ರಿಕೆಟಿಗ ಶಕೀಬ್‌ ಅಲ್‌ ಹಸನ್‌ ಅಮೇರಿಕದ ಹೋಟೆಲ್‌ನಲ್ಲಿ ಉಳಿದುಕೊಳ್ಳುವಂತಾಗಿದೆ. 

ಸ್ವಯಂ ದಿಗ್ಭಂಧನದಲ್ಲಿರುವ ಶಕೀಬ್‌, 3 ನಿಮಿಷ 50 ಸೆ.ಗಳ ವಿಡಿಯೋವೊಂದನ್ನು ಚಿತ್ರೀಕರಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಕೊರೋನಾ ವೈರಸ್‌ ಬಗ್ಗೆ ಜನತೆ ಎಚ್ಚರದಿಂದಿರಲು ಸಲಹೆ ನೀಡಿದ್ದಾರೆ. ಅಲ್ಲದೇ ಮಗಳು ಹಾಗೂ ಕುಟುಂಬದವರನ್ನು ಕಾಣಲು ಅಸಾಧ್ಯವಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಿಕಾ ಕಪೂರ್ ಇದ್ದ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದರು ಆಫ್ರಿಕಾ ಕ್ರಿಕೆಟಿಗರು..!

ಇನ್ನು ಆಸ್ಟ್ರೇಲಿಯಾದ ಮಾಜಿ ವೇಗಿ ಜೇಸನ್ ಗಿಲೆಸ್ಪಿ ಸಹಾ ಇಂಗ್ಲೆಂಡ್ ಪ್ರವಾಸ ಮುಗಿಸಿ ತವರಿಗೆ ಮರಳುತ್ತಿದ್ದಂತೆ 14 ದಿನಗಳ ಮಟ್ಟಿಗೆ ಪ್ರತ್ಯೇಕವಾಗಿಯೇ ಉಳಿದುಕೊಂಡಿದ್ದಾರೆ.