ಕೊರೋನಾ ವೈರಸ್ ವಿರುದ್ಧ ಪಠಾಣ್ ಸಹೋದರರು ಸಮರ ಸಾರಿದ್ದಾರೆ. ನೆರೆಹೊರೆಯ ಜನತೆಗೆ ಸಾವಿರಾರು ಉಚಿತ ಮಾಸ್ಕ್ ಹಂಚಿ ಮಾನವೀಯತೆ ಮೆರೆದಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

ವಡೋದರಾ(ಮಾ.24): ಮದ್ದಿಲ್ಲದ ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಜನರಿಗೆ ಟೀಂ ಇಂಡಿಯಾದ ಪಠಾಣ್ ಸಹೋದರರು ನೆರವಿನ ಹಸ್ತ ಚಾಚಿದ್ದಾರೆ.

ಹೌದು, ದೇಶದಲ್ಲಿ ಈಗಾಗಲೇ ಹಲವು ಕಡೆ ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳ ಕೊರತೆ ಉಂಟಾಗಿರುವುದನ್ನು ಕೇಳಿದ್ದೇವೆ. ಇಂತಹ ಸಂದರ್ಭದಲ್ಲಿ ಇರ್ಫಾನ್ ಪಠಾಣ್ ಹಾಗೂ ಯೂಸೂಫ್ ಪಠಾಣ್ ಬರೋಡದಲ್ಲಿ 4 ಸಾವಿರ ಉಚಿತ ಮಾಸ್ಕ್‌ಗಳನ್ನು ಹಂಚುವ ಮೂಲಕ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ. 

ಗಂಭೀರ ಸಮಸ್ಯೆ - ಗೃಹಬಂಧನ ಅಥವಾ ಜೈಲು, ನಿಮಗೆ ಯಾವುದೋ ಬೇಕು ಅದು !

Scroll to load tweet…

ತಮ್ಮ ತಂದೆಯ ಹೆಸರಿನಲ್ಲಿ ಮೊಹಮ್ಮದ್ ಖಾನ್ ಪಠಾಣ್ ಚಾರಿಟೇಬಲ್ ಟ್ರಸ್ಟ್ ಮೂಲಕ ಈ ಸಾಮಾಜಿಕ ಕಾರ್ಯವನ್ನು ಪಠಾಣ್ ಸಹೋದರರು ಮಾಡಿದ್ದಾರೆ. ಈ ವೇಳೆ ಕೊರೋನಾ ಸೋಂಕು ಹೆಮ್ಮಾರಿಯಂತೆ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ತಡೆಯುವ ನಿಟ್ಟಿ ಜನತೆಯಲ್ಲಿ ಸ್ವಚ್ಛತೆ ಹಾಗೂ ಶುಚಿತ್ವವನ್ನು ಕಾಪಾಡಬೇಕು. ಇದರ ಜತೆಗೆ ಇಂತಹ ಸಂದರ್ಭಗಳಲ್ಲಿ ನಾವು ನೆರೆಹೊರೆಯವರಿಗೆ ಸಹಾಯ ಮಾಡಬೇಕು, ನಮ್ಮ ಕೈಲಾಗಿದ್ದನ್ನು ಮಾಡಿದ್ದೇವೆ ಎಂದು ಪಠಾಣ್‌ ಸಹೋದರರು ಹೇಳಿದ್ದಾರೆ. 

ಕನ್ನಿಕಾ ಕಪೂರ್ ಇದ್ದ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದರು ಆಫ್ರಿಕಾ ಕ್ರಿಕೆಟಿಗರು..!

ಇಂತಹ ಕಠಿಣ ಸಂದರ್ಭದಲ್ಲಿ ನಾವು ಒಬ್ಬರಿಗೊಬ್ಬರು ನೆರವಾಗುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಬನ್ನಿ ಅಗತ್ಯವಿರುವವರಿಗೆ ನಮ್ಮ ಕೈಲಾದ ಸಹಾಯವನ್ನು ಮಾಡೋಣ ಎಂದು ದೇಶದ ಜನತೆಗೆ ಇರ್ಫಾನ್ ಪಠಾಣ್ ಮನವಿ ಮಾಡಿದ್ದಾರೆ,