MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • 'ಭಾರತ ಎದುರು ಆಡಬೇಕಂದ್ರೆ..?' ಪಾಕಿಸ್ತಾನದ ಮೂರೂ ಡಿಮ್ಯಾಂಡ್ ರಿಜೆಕ್ಟ್ ಮಾಡಿದಿ ಐಸಿಸಿ! ಕೊನೆಗೂ ತೆಪ್ಪಗಾದ ಪಿಸಿಬಿ

'ಭಾರತ ಎದುರು ಆಡಬೇಕಂದ್ರೆ..?' ಪಾಕಿಸ್ತಾನದ ಮೂರೂ ಡಿಮ್ಯಾಂಡ್ ರಿಜೆಕ್ಟ್ ಮಾಡಿದಿ ಐಸಿಸಿ! ಕೊನೆಗೂ ತೆಪ್ಪಗಾದ ಪಿಸಿಬಿ

ದುಬೈ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಆಯೋಜನೆಗೆ ಇದ್ದಂತಹ ಅಡ್ಡಿ ಆತಂಕಗಳು ಕೊನೆಗೂ ನಿವಾರಣೆಯಾಗಿದ್ದು, ಭಾರತ ಎದುರು ಮ್ಯಾಚ್ ಆಡಲು ಪಾಕಿಸ್ತಾನ ಒಪ್ಪಿಕೊಂಡಿರುವುದಾಗಿ ಪಾಕ್ ಸರ್ಕಾರ ಘೋಷಿಸಿದೆ. ಇದರ ಜತೆಗೆ ಐಸಿಸಿ, ಪಾಕ್ ಡಿಮ್ಯಾಂಡ್ ರಿಜೆಕ್ಟ್ ಮಾಡಿದೆ. 

2 Min read
Author : Naveen Kodase
Published : Feb 10 2026, 03:00 PM IST
Share this Photo Gallery
  • FB
  • TW
  • Linkdin
  • Whatsapp
16
ICC ಮುಂದೆ ಮೂರು ಡಿಮ್ಯಾಂಡ್ ಇಟ್ಟಿದ್ದ ಪಾಕಿಸ್ತಾನ
Image Credit : X/@cricbyusman

ICC ಮುಂದೆ ಮೂರು ಡಿಮ್ಯಾಂಡ್ ಇಟ್ಟಿದ್ದ ಪಾಕಿಸ್ತಾನ

ಬಾಂಗ್ಲಾದೇಶವನ್ನು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಗಿಟ್ಟಿದ್ದನ್ನು ವಿರೋಧಿಸಿ, ಪಾಕಿಸ್ತಾನ ಸರ್ಕಾರವು ಇದೇ ಫೆಬ್ರವರಿ 15ರಂದು ನಿಗದಿಯಾಗಿರುವ ಭಾರತ ಎದುರಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಮೈದಾನಕ್ಕಿಳಿಯುವುದಿಲ್ಲ ಎಂದು ಘೋಷಿಸಿತ್ತು. ಒಂದು ವೇಳೆ ಭಾರತ ಎದುರು ಮ್ಯಾಚ್ ಆಡಬೇಕಿದ್ರೆ ಮೂರು ಪ್ರಮುಖ ಡಿಮ್ಯಾಂಡ್ ಐಸಿಸಿ ಪೂರೈಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಪಟ್ಟು ಹಿಡಿದಿತ್ತು.

26
ಐಸಿಸಿ ವಾರ್ನಿಂಗ್‌ಗೆ ಕಂಗಾಲಾದ ಪಾಕ್-ಬಾಂಗ್ಲಾದೇಶ
Image Credit : Asianet News

ಐಸಿಸಿ ವಾರ್ನಿಂಗ್‌ಗೆ ಕಂಗಾಲಾದ ಪಾಕ್-ಬಾಂಗ್ಲಾದೇಶ

ಮೊದಲಿಗೆ ಬಾಂಗ್ಲಾದೇಶ ಭದ್ರತೆಯ ನೆಪವೊಡ್ಡಿ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳ ಮೊದಲು ಟಿ20 ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿದಿತ್ತು. ಇನ್ನು ಬಾಂಗ್ಲಾದೇಶ ಕಿಕೌಟ್ ಮಾಡಿದ್ದನ್ನು ಖಂಡಿಸಿ, ಪಾಕಿಸ್ತಾನ ಭಾರತ ಎದುರಿನ ಮ್ಯಾಚ್ ಬಾಯ್ಕಾಟ್ ಮಾಡುವುದಾಗಿ ಐಸಿಸಿ ಬೆದರಿಕೆ ಹಾಕಿತ್ತು. ಆದರೆ ಐಸಿಸಿ ಈ ಎರಡೂ ದೇಶಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆಯೇ ಮೆತ್ತಗಾಗಿ ಪಾಕ್ ಐಸಿಸಿ ಮುಂದೆ ಕೆಲವು ಡಿಮ್ಯಾಂಡ್ ಇಟ್ಟಿತ್ತು.

Related Articles

Related image1
'ಬರೆದಿಟ್ಟುಕೊಳ್ಳಿ, ಪಾಕಿಸ್ತಾನ ಯೂ-ಟರ್ನ್ ಹೊಡೆಯುತ್ತೆ'; ಭಾರತ-ಪಾಕ್ ಪಂದ್ಯ ನಡೆಯೋದು ಪಕ್ಕಾ ಎಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!
Related image2
ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ದ ಆಡಬೇಕು ಅಂದ್ರೆ...? ಐಸಿಸಿ ಮುಂದೆ 3 ಪ್ರಮುಖ ಡಿಮ್ಯಾಂಡ್ ಇಟ್ಟ ಪಾಕಿಸ್ತಾನ!
36
ಇಂಡೋ-ಪಾಕ್ ದ್ವಿಪಕ್ಷೀಯ ಸರಣಿಗೆ ಬೇಡಿಕೆ
Image Credit : ANI

ಇಂಡೋ-ಪಾಕ್ ದ್ವಿಪಕ್ಷೀಯ ಸರಣಿಗೆ ಬೇಡಿಕೆ

ಅದರಲ್ಲಿನ ಪ್ರಮುಖ ಬೇಡಿಕೆಯೆಂದರೇ, ಮೊದಲನೆಯದ್ದು ಭಾರತ ಹಾಗೂ ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿಯನ್ನು ಆಯೋಜಿಸಬೇಕು ಎನ್ನುವ ಬೇಡಿಕೆಯಿಟ್ಟಿತ್ತು. ಭಾರತ ಹಾಗೂ ಪಾಕಿಸ್ತಾನ ನಡುವೆ 2012-13ರಲ್ಲಿ ಕೊನೆಯ ಬಾರಿಗೆ ದ್ವಿಪಕ್ಷೀಯ ಸರಣಿ ನಡೆದಿತ್ತು. ಇದಾದ ಬಳಿಕ ರಾಜತಾಂತ್ರಿಕ ಬಿಕ್ಕಟ್ಟಿನಿಂದ ಇಂಡೋ-ಪಾಕ್ ನಡುವೆ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಆದರೆ ಐಸಿಸಿ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಈ ಬೇಡಿಕೆ ರಿಜೆಕ್ಟ್ ಮಾಡಿದೆ.

46
ಇಂಡೋ-ಪಾಕ್-ಬಾಂಗ್ಲಾದೇಶ ತ್ರಿಕೋನ ಸರಣಿಗೆ ಬೇಡಿಕೆ
Image Credit : PCB\Twitter

ಇಂಡೋ-ಪಾಕ್-ಬಾಂಗ್ಲಾದೇಶ ತ್ರಿಕೋನ ಸರಣಿಗೆ ಬೇಡಿಕೆ

ಭಾರತ-ಪಾಕ್‌ ನಡುವಿನ ವಿಶ್ವಕಪ್‌ ಪಂದ್ಯದಲ್ಲಿ ₹2200 ಕೋಟಿ ಲಾಭವನ್ನು ಅಂದಾಜಿಸಲಾಗಿತ್ತು. ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದರೆ ಅಲ್ಲೂ ಕೋಟಿಗಟ್ಟಲೆ ಹಣ ಹರಿದುಬರುತ್ತದೆ. ಇದೇ ಕಾರಣಕ್ಕೆ ಭಾರತ ವಿರುದ್ಧ ದ್ವಿಪಕ್ಷೀಯ ಸರಣಿ, ತ್ರಿಕೋನ ಸರಣಿಗೆ ಪಾಕ್‌, ಬಾಂಗ್ಲಾ ಬೇಡಿಕೆ ಇಟ್ಟಿದ್ದವು. ಈ ಬೇಡಿಕೆಗಳನ್ನು ಐಸಿಸಿ ರಿಜೆಕ್ಟ್ ಮಾಡಿದೆ ಎಂದು ವರದಿಯಾಗಿದೆ.

56
ಪಾಕ್ ಎಲ್ಲಾ ಬೇಡಿಕೆ ರಿಜೆಕ್ಟ್ ಮಾಡಿದ ಐಸಿಸಿ
Image Credit : Getty

ಪಾಕ್ ಎಲ್ಲಾ ಬೇಡಿಕೆ ರಿಜೆಕ್ಟ್ ಮಾಡಿದ ಐಸಿಸಿ

ಇನ್ನು ಇದಷ್ಟೇ ಅಲ್ಲದೇ ಭಾರತ-ಪಾಕ್‌-ಬಾಂಗ್ಲಾ ಒಳಗೊಂಡ ತ್ರಿಕೋನ ಸರಣಿ, ಭಾರತ ತಂಡದ ಬಾಂಗ್ಲಾ ಪ್ರವಾಸ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದ್ದು, ಇದು ತನ್ನ ವ್ಯಾಪ್ತಿಗೆ ಬರಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ವರದಿಯಾಗಿದೆ.

66
ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮುಖಭಂಗ
Image Credit : Getty

ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮುಖಭಂಗ

ಈ ಮೂಲಕ ಕ್ರಿಕೆಟ್ ಜಗತ್ತಿನ ಮುಂದೆ ಬಿಸಿಸಿಐ ತಲೆಬಾಗಿಸುವಂತೆ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್‌ಗೆ ಭ್ರಮನಿರಸನವಾಗಿದೆ. ಪಾಕ್ ಇದೀಗ ಭಾರತ ಎದುರು ಫೆಬ್ರವರಿ 15ರಂದು ಕೊಲಂಬೊದಲ್ಲಿ ಟಿ20 ವಿಶ್ವಕಪ್ ಪಂದ್ಯವನ್ನಾಡಲು ಕಣಕ್ಕಿಳಿಯಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಸಿಸಿ ಟಿ20 ವಿಶ್ವಕಪ್
ಪಾಕಿಸ್ತಾನ
ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ)

Latest Videos
Recommended Stories
Recommended image1
ಉದ್ಯಮಿ ಮಗಳನ್ನು ಪ್ರೀತಿಸಿದ ಗೌತಮ್ ಗಂಭೀರ್; ಪತ್ನಿ ನತಾಶಾ ಬಗ್ಗೆ ನಿಮಗೆ ಗೊತ್ತಿಲ್ಲದ ಸೀಕ್ರೆಟ್ಸ್
Recommended image2
ಟಿ20 ವಿಶ್ವಕಪ್: ನಮೀಬಿಯಾ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಮೇಜರ್ ಚೇಂಜ್? ಇಲ್ಲಿದೆ ಭಾರತ ಸಂಭಾವ್ಯ ತಂಡ!
Recommended image3
ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾಗೆ ಶಾಕ್‌ ಕೊಟ್ಟ BCCI; ಕ್ರಿಕೆಟ್ ದಿಗ್ಗಜರಿಗೆ ಇಂಥ ಗತಿ ಬಂತಾ?
Related Stories
Recommended image1
'ಬರೆದಿಟ್ಟುಕೊಳ್ಳಿ, ಪಾಕಿಸ್ತಾನ ಯೂ-ಟರ್ನ್ ಹೊಡೆಯುತ್ತೆ'; ಭಾರತ-ಪಾಕ್ ಪಂದ್ಯ ನಡೆಯೋದು ಪಕ್ಕಾ ಎಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!
Recommended image2
ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ದ ಆಡಬೇಕು ಅಂದ್ರೆ...? ಐಸಿಸಿ ಮುಂದೆ 3 ಪ್ರಮುಖ ಡಿಮ್ಯಾಂಡ್ ಇಟ್ಟ ಪಾಕಿಸ್ತಾನ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved