ಕನ್ನಿಕಾ ಕಪೂರ್ ಇದ್ದ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದರು ಆಫ್ರಿಕಾ ಕ್ರಿಕೆಟಿಗರು..!
ದಕ್ಷಿಣ ಆಫ್ರಿಕಾ ಕ್ರಿಕೆಟಿಗರಿಗೂ ಕೋವಿಡ್ 19 ಸೋಂಕು ತಗುಲಿರುವ ಸಾಧ್ಯತೆಯಿದೆ. ಯಾಕೆಂದರೆ ಕನ್ನಿಕಾ ಕಫೂರ್ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಆಫ್ರಿಕಾ ಕ್ರಿಕೆಟಿಗರು ಉಳಿದುಕೊಂಡಿದ್ದರು. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ನವದೆಹಲಿ(ಮಾ.23): ಭಾರತ ವಿರುದ್ಧದ ಏಕದಿನ ಸರಣಿ ರದ್ದಾದ ಕಾರಣ ತವರಿಗೆ ವಾಪಸಾದ ದಕ್ಷಿಣ ಆಫ್ರಿಕಾ ತಂಡಕ್ಕೆ ಕೊರೋನಾ ಸೋಂಕು ತಗುಲಿರುವ ಆತಂಕ ಶುರುವಾಗಿದೆ.
ಭಾರತದಿಂದ ತೆರಳಿದ ದ.ಆಫ್ರಿಕಾ ಕ್ರಿಕೆಟಿಗರಿಗೆ 14 ದಿನ ದಿಗ್ಬಂಧನ
ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 2ನೇ ಏಕದಿನ ಪಂದ್ಯವನ್ನಾಡಲು ಲಖನೌಗೆ ತೆರಳಿತ್ತು. ಆಟಗಾರರು ಲಖನೌನಲ್ಲಿ ಉಳಿದುಕೊಂಡಿದ್ದ ಹೋಟೆಲ್‌ನಲ್ಲೇ ಲಂಡನ್‌ನಿಂದ ಆಗಮಿಸಿದ್ದ ಬಾಲಿವುಡ್ ನಟಿ, ಕೊರೋನಾ ಸೋಂಕಿತೆ ಕನ್ನಿಕಾ ಕಪೂರ್ ಸಹ ಉಳಿದುಕೊಂಡಿದ್ದರು. ಆಟಗಾರರು ಭೋಜನ ಸೇವಿಸಿದ ರೆಸ್ಟೋರೆಂಟ್‌ನಲ್ಲೇ ಕನ್ನಿಕಾ ಸಹ ಭೋಜನ ಸೇವಿಸಿದ್ದರು ಎನ್ನುವುದು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಖಚಿತಪಟ್ಟಿದೆ. ಆಟಗಾರರೊಂದಿಗೆ ಕನ್ನಿಕಾ ಸಂಪರ್ಕಕ್ಕೆ ಬಂದಿದ್ದರೆ ಎನ್ನುವುದನ್ನು ತನಿಖೆ ನಡೆಸಲಾಗುತ್ತಿದೆ.
ಭಾರತ-ಸೌತ್ ಆಫ್ರಿಕಾ ಏಕದಿನ ಸರಣಿ ರದ್ದು, ಕೊರೋನಾಗೆ ಬಲಿಯಾಯ್ತು ಕ್ರಿಕೆಟ್!
ಲಂಡನ್‌ನಿಂದ ವಾಪಾಸಾಗಿದ್ದ ಬೇಬಿ ಡಾಲ್ ಖ್ಯಾತಿಯ ಕನ್ನಿಕಾ ಕಪೂರ್ ಲಖನೌದ ತಾಜ್ ಹೋಟೆಲ್‌ನಲ್ಲಿ ಪಾರ್ಟಿ ಮಾಡಿದ್ದರು ಎನ್ನಲಾಗಿದೆ. ದೇಶದಲ್ಲಿ ಕೊರೋನಾ ವೈರಸ್ ಬೆಳಕಿಗೆ ಬರುತ್ತಿದ್ದಂತೆ ಭಾರತ-ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳ ದ್ವಿಪಕ್ಷೀಯ ಸರಣಿ ರದ್ದಾಗಿತ್ತು. ಧರ್ಮಶಾಲಾದಲ್ಲಿ ಮಾರ್ಚ್ 12ರಂದು ನಡೆಯಬೇಕಿದ್ದ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಇನ್ನು ಲಖನೌ ಹಾಗೂ ಕೋಲ್ಕತಾದಲ್ಲಿ ನಡೆಯಬೇಕಿದ್ದ ಪಂದ್ಯಗಳು ರದ್ದಾಗಿದ್ದವು.